ಕರಾವಳಿ ತೀರದ ನಗರಗಳಲ್ಲಿ ಮಂಗಳೂರಿಗೆ ಅಪಾಯ!

Posted By: Gururaj
Subscribe to Oneindia Kannada

ಮಂಗಳೂರು, ನವೆಂಬರ್ 17 : ಜಾಗತಿಕ ತಾಪಮಾನದಿಂದ ಉಂಟಾಗುವ ಪ್ರವಾಹದ ಅಪಾಯ ಮಂಗಳೂರಿಗೆ ಹೆಚ್ಚು ಎಂದು ನಾಸಾದ ವರದಿ ಹೇಳಿದೆ. ಮುಂಬೈ, ನ್ಯೂಯಾರ್ಕ್‌ ನಗರಗಳಿಗೆ ಹೋಲಿಸಿದರೆ ಮಂಗಳೂರು ಅಪಾಯದಲ್ಲಿದೆ.

15000 ವಿಜ್ಞಾನಿಗಳಿಂದ ಮನುಕುಲಕ್ಕೆ ಎಚ್ಚರಿಕೆ

ಜರ್ನಲ್ ಸೈನ್ಸ್‌ ಅಡ್ವಾನ್ಸ್‌ ಮೂಲಕ ನಡೆಸಿದ ಮುಂದಿನ 100 ವರ್ಷಗಳ ಅಧ್ಯಯದ ವರದಿ ಈ ಕುರಿತ ಅಂಕಿ ಅಂಶಗಳನ್ನು ನೀಡಿದೆ. ಹಿಮಬಂಡೆಗಳು ಕರಗಿ ಸಮುದ್ರಕ್ಕೆ ನೀರು ಸೇರುವ ಪ್ರಮಾಣದಲ್ಲಿ ಮಂಗಳೂರಿಗೆ 15.98 ಸೆಂ.ಮೀ. ಅಂಕ ಸಿಕ್ಕಿದೆ. ಮುಂಬೈ 15.26 ಸೆಂ.ಮೀ. ಮತ್ತು 10.65 ಅಂಕಗಳು ನ್ಯೂಯಾರ್ಕ್‌ಗೆ ಸಿಕ್ಕಿವೆ.

ಭೂತಾಪಮಾನ ಹೀಗೇ ಏರುತ್ತಿದ್ದರೆ ಜಗತ್ಪ್ರಳಯ ಗ್ಯಾರಂಟಿ!

Mangaluru ahead of Mumbai, New York in flooding risk : NASA

'ವಿವಿಧ ನಗರಗಳು ಮತ್ತು ದೇಶಗಳು ಪ್ರವಾಹದಿಂದ ಪಾರಾಗಲು ಮಾಡುವ ಯೋಜನೆಗಳು ಮುಂದಿನ 100 ವರ್ಷಗಳಿಗೆ ಆಗುವಂತಿರಬೇಕು. ನಗರಗಳು ಅಪಾಯಕ್ಕೆ ಸಿಲುಕುವ ಸಾಧ್ಯತೆಗಳು ಅಷ್ಟಿವೆ' ಎಂದು ಎರಿಕ್ ಲಿವಿನ್ಸ್ ಹೇಳಿದ್ದಾರೆ.

ಜಾಗತಿಕ ತಾಪಮಾನ ಏರಿಕೆಯಿಂದ ಯಾವ ಹಿಮನದಿ, ಹಿಮಗಲ್ಲುಗಳು ಕರಗಿದರೆ ಯಾವ ನಗರಗಳ ಭಾಗಗಳು ಮುಳುಗುತ್ತವೆ ಎಂಬುದನ್ನು ಲೆಕ್ಕ ಹಾಕುವ ಆನ್‌ಲೈನ್ ಸಿಮ್ಯುಲೇಟರ್‌ ಅನ್ನು ನಾಸಾದ ಜೆಟ್ ಪ್ರೊಪಲ್ಷನ್ ಲ್ಯಾಬೊರೇಟರಿ ಅಭಿವೃದ್ಧಿಪಡಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
When it comes to flooding due to global warming, Mangaluru in Karnataka is at a higher risk when compared to Mumbai or New York, new data released by NASA says.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ