ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸ್ವಚ್ಛ ನಗರಗಳ ಪಟ್ಟಿಯಲ್ಲಿ ಮಂಗಳೂರಿಗೆ 3ನೇ ಸ್ಥಾನ

By ಒನ್ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 16 : ಕೇಂದ್ರ ಸರ್ಕಾರದ ನಗರಾಭಿವೃದ್ದಿ ಸಚಿವಾಲಯದ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಮಂಗಳೂರು ನಗರವನ್ನು ದೇಶದ ಮೂರನೇ ಸ್ವಚ್ಛ ನಗರವಾಗಿ ಆಯ್ಕೆ ಮಾಡಲಾಗಿದೆ. ಮಂಗಳೂರು ನಗರ ಆಯ್ಕೆಯಾಗಿರುವುದಕ್ಕೆ ಮೇಯರ್ ಹರಿನಾಥ್ ಸಂತಸ ವ್ಯಕ್ತಪಡಿಸಿದ್ದಾರೆ.

ಬಯಲು ಮಲ ವಿಸರ್ಜನೆ ಸಂಪೂರ್ಣವಾಗಿ ತೊಡೆದು ಹಾಕುವುದು, ಘನತ್ಯಾಜ್ಯ ನಿರ್ವಹಣೆಗೆ ಆಧುನಿಕ ಹಾಗೂ ವೈಜ್ಞಾನಿಕ ಪದ್ಧತಿ ಅಳವಡಿಸುವುದು ಸೇರಿದಂತೆ ವಿವಿಧ ವಿಷಯಗಳಲ್ಲಿ ನಗರಗಳು ತೆಗೆದುಕೊಂಡಿರುವ ಕ್ರಮಗಳನ್ನು ಪರಿಶೀಲನೆ ನಡೆಸಿ ಈ ಪಟ್ಟಿ ತಯಾರಿಸಲಾಗಿದೆ. [ಭಾರತದ ಅತ್ಯಂತ ಸ್ವಚ್ಛ ನಗರ ಪಟ್ಟಿಯಲ್ಲಿ ಮೈಸೂರು ನಂ.1]

mangaluru

'2013-15ನೇ ಅವಧಿಯ ಸ್ವಚ್ಛತಾ ರೇಟಿಂಗ್ ನಲ್ಲಿ ದೇಶದ 476 ನಗರಗಳನ್ನು ಆಯ್ಕೆ ಮಾಡಲಾಗಿತ್ತು. ಈ ಪೈಕಿ ಮಂಗಳೂರು ನಗರಕ್ಕೆ 3 ನೇ ಸ್ವಚ್ಛತಾ ನಗರವೆಂದು ಶ್ರೇಯಾಂಕ ನೀಡಿರುವುದು ಹೆಮ್ಮೆಯ ವಿಷಯ' ಎಂದು ಮೇಯರ್ ಹರಿನಾಥ್ ಹೇಳಿದ್ದಾರೆ. [ಅಂದದೂರು ಮೈಸೂರಿಗೆ ಸ್ವಚ್ಛನಗರಿ ಪಟ್ಟ ದಕ್ಕಿದ್ದು ಹೇಗೆ?]

ಯಾವ-ಯಾವ ನಗರಗಳು? : ಒಟ್ಟು 65.08 ಅಂಕ ಪಡೆದ ಮೈಸೂರು ನಗರ ಪ್ರಥಮ, 64.91 ಅಂಕ ಪಡೆದ ಗ್ರೇಟರ್ ಮುಂಬೈ ನಗರ ಪಾಲಿಕೆ ದ್ವಿತೀಯ ಸ್ಥಾನ ಪಡೆದಿದೆ. ತೃತೀಯ ಸ್ಥಾನ ಪಡೆದ ಮಂಗಳೂರು ಮಹಾನಗರ ಪಾಲಿಕೆ 64.74 ಅಂಕ ಗಳಿಸಿದೆ. [ಹರಿನಾಥ್ ಮಂಗಳೂರು ಮಹಾನಗರ ಪಾಲಿಕೆ ನೂತನ ಮೇಯರ್]

ಬಡವರಿಗೆ ಶೌಚಾಲಯ ನಿರ್ಮಾಣ, ಸಾರ್ವಜನಿಕ ಶೌಚಾಗೃಹ ನಿರ್ಮಾಣ, ಪರಿಣಾಮಕಾರಿ ತ್ಯಾಜ್ಯ ನಿರ್ವಹಣೆ, ಕುಡಿಯುವ ನೀರಿನ ಗುಣಮಟ್ಟ ಸುಧಾರಣೆ ಸಹಿತ ವಿವಿಧ ವಿಷಯಗಳಲ್ಲಿ ಸುಧಾರಣೆ ತರುವಂತೆ ಸ್ವಚ್ಛ ಭಾರತ್ ಮಿಷನ್ ಯೋಜನೆಯಡಿ ಸಮೀಕ್ಷೆ ನಡೆಸಿದ ಕ್ವಾಲಿಟಿ ಕೌನ್ಸಿಲ್ ಆಫ್ ಇಂಡಿಯಾ ಸೂಚನೆ ನೀಡಿದೆ.

'ಮಂಗಳೂರು ನಗರದಲ್ಲಿ 339 ಮನೆಗಳಲ್ಲಿ ವೈಯಕ್ತಿಕ ಶೌಚಾಗೃಹ ಇಲ್ಲದಿರುವುದನ್ನು ಗುರುತಿಸಲಾಗಿದೆ. ಈ ಪೈಕಿ 272 ಮನೆಗಳಲ್ಲಿ ಶೌಚಗೃಹ ನಿರ್ಮಾಣಕ್ಕೆ ವಿವಿಧ ಯೋಜನೆಗಳಡಿ ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ' ಎಂದು ಮಹಾನಗರ ಪಾಲಿಕೆ ಆಯುಕ್ತ ಡಾ. ಎಚ್.ಎನ್ ಗೋಪಾಲಕೃಷ್ಣ ತಿಳಿಸಿದ್ದಾರೆ.

English summary
Mangaluru City Corporation (MCC) mayor Harinath Jogi said, Mangaluru has been ranked the 3rd cleanest among 476 cities in the country by the union ministry of urban development under the Swachh Bharat Mission.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X