ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅರಸ್ ಬೈಕ್ ಸಾಹಸಕ್ಕೆ ಸಾಕ್ಷಿಯಾದ ಮಂಗಳೂರಿಗರು

|
Google Oneindia Kannada News

ಮಂಗಳೂರು, ಜ.30 : ಗುರುವಾರ ಸಂಜೆ ನಗರದ ಸಿಟಿ ಸೆಂಟರ್‌ನ 8ನೇ ಮಹಡಿಯಲ್ಲಿ ಸೇರಿದ್ದ ಜನರು ಮೂಕ ಪ್ರೇಕ್ಷಕರಾಗಿದ್ದರು. ಉಸಿರು ಬಿಗಿ ಹಿಡಿದು ಯುರೋಪಿಯನ್ ಸ್ಟಂಟ್ ಚಾಂಪಿಯನ್ ಅರಸ್ ಗಿಬೀಝಾ ಅವರ ಬೈಕ್ ಸಾಹಸವನ್ನು ನೋಡಿದರು.

ಗಿಬೀಝಾ ತನ್ನ 2004ರ ಕವಾಸಕಿ ಬೈಕ್‌ನಲ್ಲಿ ಅದ್ಭುತ ಸ್ಟಂಟ್‌ಗಳನ್ನು ಮಾಧ್ಯಮದವರಿಗಾಗಿ ಪ್ರದರ್ಶಿಸಿದರು. ಏಕ ಚಕ್ರದಲ್ಲಿ ಬೈಕ್ ನಿಲ್ಲಿಸುವುದು, ಚಲಿಸುವ ಬೈಕಿನಲ್ಲಿಯೇ ನಾನಾ ರೀತಿಯ ಕಸರತ್ತು, ಚಲಿಸುತ್ತಿರುವಾಗಲೇ ಬೈಕ್ ಏರಿ ನಿಲ್ಲುವುದು ಹೀಗೆ ನಾನಾ ರೀತಿಯ ಕಸರತ್ತುಗಳನ್ನು ನೋಡಿ ಜನರು ಚಪ್ಪಾಳೆ ಹೊಡೆದರು.

Aras Gibieza

ಜನರನ್ನು ಉದ್ದೇಶಿಸಿ ಮಾತನಾಡಿದ ಅರಸ್ ಗಿಬೀಝಾ, ನಾನು 11ನೇ ವರ್ಷದಿಂದ ಸ್ಟಂಟ್‌ ಅಭ್ಯಾಸ ಮಾಡುತ್ತಿದ್ದೇನೆ. ಜಗತ್ತಿನ ಅತ್ಯುತ್ತಮ ಸ್ಟಂಟ್ ಮಾಸ್ಟರ್ ಆಗಬೇಕು ಎಂಬುವುದನ್ನು ಮನಸ್ಸಿನಲ್ಲಿಟ್ಟುಕೊಂಡು ಅಭ್ಯಾಸ ಮಾಡುತ್ತಿದ್ದೇನೆ ಎಂದು ಹೇಳಿದರು.

stunts

2008ರಿಂದ ಜಗತ್ತಿನ ನಾನಾ ಕಡೆಗಳಲ್ಲಿ ಸ್ಟಂಟ್ ಆರಂಭಿಸಿದ್ದೇನೆ. ಏಷ್ಯಾದಲ್ಲಿ ಪ್ರಪ್ರಥಮವಾಗಿ ಭಾರತದಲ್ಲಿ ಪ್ರದರ್ಶನ ನೀಡುತ್ತಿದ್ದೇನೆ. ಭಾರತದಲ್ಲಿ ಇಂಡಿಯಾ ಬೈಕ್ ವೀಕ್ ಆನ್ ಟೂರ್ ಮೂಲಕ ಸೂರತ್, ಜೈಪುರ, ಪುಣೆ, ಅಹಮ್ಮದಾಬಾದ್ ಮುಂತಾದ ಕಡೆ ಸ್ಟಂಟ್ ಶೋ ನೀಡಿದ್ದೇನೆ ಎಂದರು. [ಚಿತ್ರಗಳು : ಐಸಾಕ್ ರಿಚರ್ಡ್, ಮಂಗಳೂರು]

Champion Aras Gibieza

ಮಂಗಳೂರಿನಲ್ಲಿ ಬೈಕ್ ಪ್ರಿಯರಿಗಾಗಿ ಸ್ಟಂಟ್ ಸ್ಪರ್ಧೆ ನಡೆಯುತ್ತಿದೆ. ಆಫ್ರಿಕಾ, ಜರ್ಮನಿ, ಇಟಲಿ, ಯೂರೋಪ್ ಸೇರಿದಂತೆ ನಾನಾ ದೇಶಗಳಲ್ಲಿಯೂ ಸ್ಟಂಟ್‌ಗಳನ್ನು ತೋರಿಸಿದ್ದೇನೆ ಎಂದು ತಿಳಿಸಿದರು.

mangaluru

ಶೋ ಸಂಘಟಿಸಿದ್ದ ಶ್ರೀಜಿತ್ ಪಾಟೀಲ್ ಮಾತನಾಡಿ, ಉದಯೋನ್ಮುಖ ಬೈಕ್ ಪ್ರಿಯರ ಸಮುದಾಯವನ್ನು ಬೆಳೆಸುವ ಉದ್ದೇಶದಿಂದ ಐಬಿಡಬ್ಲ್ಯು ಆನ್ ಟೂರ್ ಈ ಕಾರ್ಯಕ್ರಮ ಹಮ್ಮಿಕೊಂಡಿದೆ. ಜನವರಿ ತಿಂಗಳಲ್ಲಿ 8 ನಗರಗಳಲ್ಲಿ 40ಸಾವಿರಕ್ಕೂ ಅಧಿಕ ಬೈಕ್ ಪ್ರಿಯರನ್ನು ಆಕರ್ಷಿಸಲಾಗಿದೆ ಎಂದು ಹೇಳಿದರು.

Bike

ಮಂಗಳೂರು ಸೇರಿದಂತೆ ಪ್ರತೀ ನಗರದದಿಂದ ಒಬ್ಬರನ್ನು ಆಯ್ಕೆ ಮಾಡಿ ಗೋವಾದಲ್ಲಿ ಫೆ. 20, 21ರಂದು ನಡೆಯಲಿರುವ ಭಾರತೀಯ ಬೈಕರ್‌ಗಳ ಲೈಫ್‌ಸ್ಟೈಲ್ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವ ಅವಕಾಶ ನೀಡಲಾಗುತ್ತದೆ ಎಂದರು.

English summary
Mangaloreans witnessed for daredevil and award winning stunts by Red Bull athlete and two time European Stunt Champion Aras Gibieza at City Center Mall on Thursday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X