ಇಂಟರ್ ನ್ಯಾಷನಲ್ ಸ್ಟ್ರಾಂಗೆಸ್ಟ್ ಮ್ಯಾನ್’ ಮಂಗ್ಳೂರಿನ ಪ್ರಸಾದ್ ಶೆಟ್ಟಿ

Posted By: Ramesh
Subscribe to Oneindia Kannada

ಮಂಗಳೂರು, ಡಿಸೆಂಬರ್. 31 : ಈ ಯುವಕನ ಹೆಸರು ಪ್ರಸಾದ್ ಶೆಟ್ಟಿ. ಇವರಿಗೆ ಪವರ್ ಲಿಫ್ಟಿಂಗ್ ಮಾಡುವುದೆಂದರೆ ಎಲಿಲ್ಲದ ಖುಷಿಯೋ ಖುಷಿ.

ಬಾಲ್ಯದಿಂದಲೂ ತಾನೊಬ್ಬ ಪವರ್ ಲಿಫ್ಟರ್ ಆಗಬೇಕೆಂದು ಕನಸು ಕಂಡಿದ್ದರು. ಇದಕ್ಕಾಗಿ ಹಲವು ವರ್ಷಗಳ ಕಾಲ ಶ್ರಮಪಟ್ಟಿದ್ದರು. ಕೊನೆಗೂ ಈ ಯುವಕನ ಕನಸು ಈಡೇರಿದೆ.

Mangalorean Prasad Shetty Wins Gold, Silver Medals at International Powerlifting Championship

ಹೌದು. ಡಿಸೆಂಬರ್ 26ರಿಂದ 30ರವರೆಗೆ ಜಮ್ಶೆಡ್ ಪುರದಲ್ಲಿ ನಡೆದ ಅಂತಾರಾಷ್ಟ್ರೀಯ ಪವರ್ ಲಿಫ್ಟಿಂಗ್ ಸ್ಪರ್ಧೆಯ ಡೆಡ್ ಲಿಫ್ಟ್ ಜೂನಿಯರ್ ವಿಭಾಗದಲ್ಲಿ ಮಂಗಳೂರಿನ ಪ್ರಸಾದ್ ಶೆಟ್ಟಿ ಭಾರತವನ್ನು ಪ್ರತಿನಿಧಿಸಿ ಚಿನ್ನ ಗೆದ್ದ ಸಾಧನೆ ಮಾಡಿದ್ದಾರೆ. ಅಷ್ಟೇ ಅಲ್ಲದೆ ಇಂಟರ್ ನ್ಯಾಷನಲ್ ಸ್ಟ್ರಾಂಗೆಸ್ಟ್ ಮ್ಯಾನ್' ಎಂಬ ಬಿರುದು ಕೂಡ ಪಡೆದುಕೊಂಡಿದ್ದಾರೆ.

ಪ್ರಸಾದ್ ಶೆಟ್ಟಿ ಅವರು ಡೆಡ್ ಲಿಫ್ಟ್ ವಿಭಾಗದಲ್ಲಿ ಒಟ್ಟು 265 ಕೆಜಿ ಭಾರ ಎತ್ತಿದ್ದಾರೆ. ಪ್ರಸಾದ್ ಶೆಟ್ಟಿ ಮಂಗಳೂರಿನ ಕಾರ್‍ಸ್ಟ್ರೀಟ್ ನಲ್ಲಿರುವ ಬಾಲಾಂಜನೇಯ ಜಿಮ್ ನಲ್ಲಿ ತರಬೇತಿ ಪಡೆಯುತ್ತಿದ್ದಾರೆ.

ನಗರದ ಕೊಡಿಯಾಲ್ ಗುತ್ತು ನಿವಾಸಿಯಾಗಿರುವ ಪ್ರಸಾದ್ ಶೆಟ್ಟಿಯ ಉದ್ಯಮಿ ಕೆ. ಚಂದ್ರಹಾಸ ಶೆಟ್ಟಿ ಹಾಗೂ ಶಶಿಕಲಾ ಶೆಟ್ಟಿಯವರ ಹೆಮ್ಮೆಯ ಪುತ್ರ ಪ್ರಸಾದ್ ಶೆಟ್ಟಿ ಅವರ ಈ ಸಾಧನೆಗೆ ಜಿಮ್ ತರಬೇತುದಾರರು ಹಾಗೂ ಹೆತ್ತವರು ಸಂತಸ ವ್ಯಕ್ತಪಡಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangalorean Prasad Shetty Wins Gold, Silver Medals, bags ‘International Strongest Man’ Title in International Powerlifting Championship held at Jamshedpur.
Please Wait while comments are loading...