ಭಾರತದ ಅತೀದೊಡ್ಡ ರಾಜಕೀಯ ಸಮೀಕ್ಷೆ. ನೀವು ಭಾಗವಹಿಸಿದ್ದೀರಾ?
 • search

ಮಂಗಳೂರು ಕೋಸ್ಟ್ ಗಾರ್ಡ್ ನಿಂದ 13 ಮೀನುಗಾರರ ರಕ್ಷಣೆ

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    ಮಂಗಳೂರಿನಲ್ಲಿ 13 ಮೀನುಗಾರರನ್ನ ರಕ್ಷಿಸಿದ ಮಂಗಳೂರು ಕೋಸ್ಟ್ ಗಾರ್ಡ್ | Filmibeat Kannada

    ಮಂಗಳೂರು, ಡಿಸೆಂಬರ್ 7: ಓಖಿ ಚಂಡಮಾರುತ ಹೊಡೆತಕ್ಕೆ ಸಿಲುಕಿ ಇಲ್ಲಿನ ಅರಬ್ಬೀ ಸಮುದ್ರದಲ್ಲಿ ಅಪಾಯಕ್ಕೆ ಸಿಲುಕಿದ್ದ 13 ಮಂದಿ ಮೀನುಗಾರರನ್ನು ಕೊನೆಗೂ ಭಾರತಿಯ ತಟರಕ್ಷಣಾ ಪಡೆ ರಕ್ಷಿಸಿ ದಡಕ್ಕೆ ಕರೆತಂದಿದೆ.

    ಓಖಿ ಅಬ್ಬರವೀಗ ಮುಂಬೈನತ್ತ: ಶಾಲೆ-ಕಾಲೇಜುಗಳಿಗೆ ರಜೆ

    ಕೇರಳ ಮತ್ತು ಮಂಗಳೂರು ಕೋಸ್ಟ್ ಗಾರ್ಡ್ ಅಧಿಕಾರಿಗಳು 'ಅಮಾರ್ಥ್ಯ' ಹೆಸರಿನ ಸ್ಪೀಡ್ ಬೋಟ್ ಮೂಲಕ 2 ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಅಪಾಯದಲ್ಲಿದ್ದ 13 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ.

    Mangalorean Indian Coast Guard rescued 13 distressed fisherman

    ನವೆಂಬರ್ 7 ರಂದು ಬಾರಕುಡ ಹೆಸರಿನ ಬೋಟ್ ಆಳ ಸಮುದ್ರ ಮೀನುಗಾರಿಕೆಗೆ ಕೇರಳದ ಕೊಚ್ಚಿಯಿಂದ ತೆರಳಿತ್ತು. ಆದರೆ, ನವೆಂಬರ್ 28 ರಂದು ಓಖಿ ಚಂಡಮಾರುತ ಹೊಡೆತಕ್ಕೆ ಸಿಲುಕಿದ ಬಾರಕುಡ ಹೆಸರಿನ ಬೋಟ್ ಲಕ್ಷದ್ವೀಪ ಸಮೀಪ ಮುಳುಗುವ ಹಂತಕ್ಕೆ ತಲುಪಿತ್ತು.

    ಚಿತ್ರಗಳು : 'ಓಖಿ' ಚಂಡಮಾರುತದಿಂದ ಮಂಗಳೂರಲ್ಲಿ ಕಡಲ್ಕೊರೆತ

    ಬೋಟ್ ನಲ್ಲಿದ್ದ ವೈರ್ ಲೆಸ್ ಕಡಿತಗೊಂಡಿದ್ದರಿಂದ್ದ ಸಹಾಯಕ್ಕೆ ಸಂಪರ್ಕ ಸಾಧ್ಯವಾಗಿರಲಿಲ್ಲ. ಡಿಸೆಂಬರ್ 2 ರಂದು ಈ ಬೋಟ್ ಒಳಗಡೆ ನೀರು ನುಗ್ಗ ತೊಡಗಿತ್ತು. ಆ ಸಂದರ್ಭದಲ್ಲಿ ಬೋಟ್ ನಲ್ಲಿದ್ದ ಸಿಬ್ಬಂದಿ ಪಾತ್ರೆಗಳನ್ನು ಬಳಸಿ ಬೋಟ್ ನಲ್ಲಿದ್ದ ನೀರು ಹೊರಹಾಕಿದ್ದರು.

    Mangalorean Indian Coast Guard rescued 13 distressed fisherman

    ಇದೇ ವೇಳೆ ಏಕಾಏಕಿ ವೈರ್ ಲೆಸ್ ಸಂಪರ್ಕ ಸಿಕ್ಕಿದಾಗ ಬೋಟ್ ನಲ್ಲಿದ್ದ ಸಿಬ್ಬಂದಿ ತಾವು ಅಪಾಯದಲ್ಲಿರೋ ಬಗ್ಗೆ ಕೇರಳದ ಕೋಸ್ಟ್ ಗಾರ್ಡ್ ಗೆ ಮಾಹಿತಿ ನೀಡಿದ್ದರು. ಕೂಡಲೇ ರಕ್ಷಣಾ ಕಾರ್ಯಾಚರಣೆ ನಡೆಸಿದ ಕೇರಳ ಮತ್ತು ಮಂಗಳೂರು ಕೋಸ್ಟ್ ಗಾರ್ಡ್ ಅಧಿಕಾರಿಗಳು ಕೋಸ್ಟ್ ಗಾರ್ಡ್ ನ ಅಮಾರ್ಥ್ಯ ಹೆಸರಿನ ಸ್ಪೀಡ್ ಬೋಟ್ ಮೂಲಕ 2 ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಅಪಾಯದಲ್ಲಿದ್ದ 13 ಮಂದಿ ಮೀನುಗಾರರನ್ನು ರಕ್ಷಿಸಿದ್ದಾರೆ.

    ರಕ್ಷಿಸಲ್ಪಟ್ಟ ಈ ಮೀನುಗಾರರೆಲ್ಲ ತಮಿಳುನಾಡು, ಕೇರಳ,ಅಸ್ಸಾಂ ಮೂಲದ ಮೀನುಗಾರರಾಗಿದ್ದಾರೆ. ಕಳೆದ 4 ದಿನಗಳ ಕಾಲ ತಮ್ಮೂಂದಿಗೆ ತಂದಿದ್ದ ಆಹಾರ ಖಾಲಿಯಾದ ಕಾರಣ ಹಸಿ ಮೀನು ತಿಂದು ನೀರು ಕುಡಿದು ಜೀವ ಉಳಿಸಿಕೊಂಡಿದ್ದರು. ಜೀವನ್ಮರಣ ಸ್ಥಿತಿಯಲ್ಲಿದ್ದ ಈ ಮೀನುಗಾರರನ್ನು ಮಂಗಳೂರಿನ ಎನ್ ಎಂಪಿಟಿ ಬಂದರಿಗೆ ಕೋಸ್ಟ್ ಗಾರ್ಡ್ ಅಧಿಕಾರಿಗಳು ಬುಧವಾರ ಸಂಜೆ ಕರೆತಂದರು.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Mangalorean Indian Coast Guard Ship (ICGS) Amartya rescued fishing boat Barracuda along with 13 crew. Barracuda had sailed from Kochi on November 07 . Its crew belonged to Tamil Nadu, Kerala and Assam.

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more