ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಣ್ಣು ತರಕಾರಿ ಬೇಕಾದ್ರೆ ಟೆರೆಸ್ ತೋಟಕ್ಕೆ ಬನ್ನಿ!

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ನಗರ ಮಧ್ಯೆ ಮನೆ ಮಾಡಿದ ಜನರದ್ದು ಒಂದೇ ಆರೋಪ, ಮನೆಯ ಸುತ್ತಲೂ ಗಿಡ ನೆಡಲು ಜಾಗವಿಲ್ಲ ಎಂಬುದು. ಆದರೆ, ಮನಸ್ಸಿದ್ದರೆ ಮಾರ್ಗ, ಮಂಗಳೂರಿನ ಮಾರ್ನಾಮಿ ಕಟ್ಟೆಯಲ್ಲಿ ಬ್ಲಾನಿ ಬಿ. ಡಿಸೋಜ ಅವರು, ಮಾತ್ರ ಮನೆಯ ಮಹಡಿಯನ್ನೇ ಕೈತೋಟ ಮಾಡಿಕೊಂಡಿದ್ದಾರೆ.

ನಗರದ ಮಾರ್ನಾಮಿ ಕಟ್ಟೆಯ ಜೈಹಿಂದ್ ರಸ್ತೆಯಲ್ಲಿ ನೆಲೆಸಿರುವ ಬ್ಲಾನಿ ಬಿ.ಡಿಸೋಜಾ ಅವರ ಮನೆಯ ಟೆರೆಸ್ ಮೇಲೆ ನಾನಾ ಜಾತಿಯ ಗಿಡ, ಮರ, ತರಕಾರಿ ಸಸಿಗಳನ್ನು ನೆಟ್ಟು ಮನಸಿದ್ದರೆ ಮಾರ್ಗ ಎಂಬುದನ್ನು ಸಾಧಿಸಿ, ತೋರಿಸಿದ್ದಾರೆ. ಮಹಡಿ ಮೇಲೆ ಹಣ್ಣುಗಳನ್ನು ಬೆಳೆಯುವ ಇವರು ತರಕಾರಿ ಮಾರಾಟದಿಂದ ವಾರ್ಷಿಕ 80 ಸಾವಿವರ ರೂ. ಆದಾಯಗಳಿಸುತ್ತಿದ್ದಾರೆ.

ಡಿಸೋಜಾ ಅವರ ಮನೆಯ ಟೆರೆಸ್ ಮೇಲೆ ಏರಿದರೆ ಒಂದು ಸಣ್ಣ ಉದ್ಯಾನವನ್ನು ಹೊಕ್ಕಿದಂತೆ ಭಾಸವಾಗುತ್ತದೆ. ಹಸಿರಿನ ವಾತಾವರಣ ತಂಪು... ತಂಪು... ಕೂಲ್... ಕೂಲ್... ಇಲ್ಲಿ ಸೇಬು ಸಹ ಬೆಳೆಯಲಾಗುತ್ತದೆ ಆದರೆ, ನೆಲದಲ್ಲಲ್ಲ ಪುಟ್ಟ ಕುಂಡದಲ್ಲಿ ! ಬನ್ನಿ ಡಿಸೋಜಾ ಅವರ ಮನೆಯ ಮಹಡಿಗೆ ಹೋಗಿ ಬರೋಣ

ಮನೆಯಲ್ಲಿರುವುದು ನಾಲ್ವರು

ಮನೆಯಲ್ಲಿರುವುದು ನಾಲ್ವರು

ಬ್ಲಾನಿ ಬಿ.ಡಿಸೋಜಾ (48) ಅವರ ಮನೆಯಲ್ಲಿ ನಾಲ್ವರು ಸದಸ್ಯರಿದ್ದಾರೆ. ಡಿಸೋಜಾ ಅವರ ಹೆಂಡತಿ, ಮಗ ಮತ್ತು ತಾಯಿ ಮನೆಯಲ್ಲಿದ್ದು, ಮನೆಗೆ ಬೇಕಾದ ಹಣ್ಣು ಮತ್ತು ತರಕಾರಿಗಳನ್ನು ಮಹಡಿ ಮೇಲೆ ಬೆಳೆಯುತ್ತಾರೆ. ಪ್ರತಿವಾರ 10-15 ಕೆಜಿ ತೊಂಡೆಕಾಯಿಯನ್ನು ಮಾರಾಟ ಮಾಡುತ್ತಾರೆ. ವಾರ್ಷಿಕವಾಗಿ ಇವರು ತರಕಾರಿ ಮಾಡಿ ಗಳಿಸುವ ಆದಾಯ ಸುಮಾರು 80 ಸಾವಿರ.

ಹಣ್ಣು, ತರಕಾರಿ ಬೆಳೆಸುವುದು ಹವ್ಯಾಸ

ಹಣ್ಣು, ತರಕಾರಿ ಬೆಳೆಸುವುದು ಹವ್ಯಾಸ

ಮೂಲತಃ ಉದ್ಯಮಿಯಾಗಿರುವ ಡಿಸೋಜಾ ಅವರಿಗೆ ಹಣ್ಣು ತರಕಾರಿ ಬೆಳೆಸುವುದು ಒಂದು ಹವ್ಯಾಸ ಸುಮಾರು 15 ವರ್ಷಗಳಿಂದ ಇದನ್ನು ಮಾಡುತ್ತಾ ಬಂದಿದ್ದಾರೆ. ದಿನಕ್ಕೆ 3-4ಗಂಟೆಗಳ ಕಾಲ ಮಹಡಿ ಮೇಲಿನ ತೋಟಕ್ಕಾಗಿ ಸಮಯ ಮೀಸಲಾಗಿಟ್ಟಿದ್ದಾರೆ.

ತೋಟ ಬೆಳೆಸಲು ತಾಯಿಯ ಸಹಕಾರ

ತೋಟ ಬೆಳೆಸಲು ತಾಯಿಯ ಸಹಕಾರ

ಡಿಸೋಜಾ ಅವರಿಗೆ ತೋಟದ ಕಾರ್ಯದಲ್ಲಿ 82 ವರ್ಷದ ತಾಯಿ ಸಹಾಯ ಮಾಡುತ್ತಾರೆ. ಡಿಸೋಜಾ ಅವರ ಪತ್ನಿ ಸಿಟಿ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ಪ್ರಾಶುಂಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮ್ಮ ಮಗ ಸೇರಿಕೊಂಡು ಮಹಡಿ ಮೇಲೆ ಹಸಿರಿನ ತೋಟ ಮಾಡಿದ್ದಾರೆ.

ತೋಟ ಬೆಳೆಸಲು ತಾಯಿಯ ಸಹಕಾರ

ತೋಟ ಬೆಳೆಸಲು ತಾಯಿಯ ಸಹಕಾರ

ಡಿಸೋಜಾ ಅವರಿಗೆ ತೋಟದ ಕಾರ್ಯದಲ್ಲಿ 82 ವರ್ಷದ ತಾಯಿ ಸಹಾಯ ಮಾಡುತ್ತಾರೆ. ಡಿಸೋಜಾ ಅವರ ಪತ್ನಿ ಸಿಟಿ ಕಾಲೇಜ್ ಆಫ್ ನರ್ಸಿಂಗ್ ನಲ್ಲಿ ಪ್ರಾಶುಂಪಾಲರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅಮ್ಮ ಮಗ ಸೇರಿಕೊಂಡು ಮಹಡಿ ಮೇಲೆ ಹಸಿರಿನ ತೋಟ ಮಾಡಿದ್ದಾರೆ.

ಡಿಸೋಜಾ ತೋಟದಲ್ಲಿ ಬೆಳೆಯುವ ಹಣ್ಣುಗಳು

ಡಿಸೋಜಾ ತೋಟದಲ್ಲಿ ಬೆಳೆಯುವ ಹಣ್ಣುಗಳು

ಡಿಸೋಜಾ ಅವರ ತೋಟದಲ್ಲಿ ಮೂಸಂಬಿ, ಚಿಕ್ಕು, ಗೇರು, ಲಕ್ಷಣ ಫಲ, ಸೀತಾಫಲ, ಮಾವು, ದ್ರಾಕ್ಷಿಹಣ್ಣುಗಳನ್ನು ಬೆಳೆಯುತ್ತಾರೆ. 2014ರಿಂದ ಸೇಬು ಬೆಳೆಯಲು ಸಹ ಆರಂಭಿಸಿದ್ದಾರೆ. ಆದರೆ, ಹಣ್ಣುಗಳನ್ನು ಇವರು ಮಾರಾಟ ಮಾಡುವುದಿಲ್ಲ. ಸ್ನೇಹಿತರಿಗೆ ಹಂಚುತ್ತಾರೆ ಮತ್ತು ಮನೆಗೆ ಉಪಯೋಗಿಸಿಕೊಳ್ಳುತ್ತಾರೆ.

ಖರ್ಚು ಹೆಚ್ಚಿಲ್ಲ, ಲಾಭವೇ ಎಲ್ಲಾ

ಖರ್ಚು ಹೆಚ್ಚಿಲ್ಲ, ಲಾಭವೇ ಎಲ್ಲಾ

ಡಿಸೋಜಾ ಅವರು ವಾರಕ್ಕೆ 10-15 ಕೆಜಿ ತೊಂಡೆಕಾಯಿಯನ್ನು ಮಾರಾಟ ಮಾಡುತ್ತಾರೆ. ಮಹಡಿ ಮೇಲಿನ ತೋಟಕ್ಕೆ ಹೆಚ್ಚು ಖರ್ಚು ಮಾಡುವುದಿಲ್ಲ. ಮನೆಯ ಸುತ್ತಮುತ್ತ ಇರುವ ಮಣ್ಣನ್ನು ಬಳಸುತ್ತಾರೆ. ತರಕಾರಿ ಬೆಳೆಯಲು ಯಾವುದೇ ರಾಸಾಯನಿಕಗಳನ್ನು ಉಪಯೋಗಿಸುವುದಿಲ್ಲ.

2 ಗಿಡದಿಂದ 35 ಕೆಜಿ ದ್ರಾಕ್ಷಿ

2 ಗಿಡದಿಂದ 35 ಕೆಜಿ ದ್ರಾಕ್ಷಿ

2013ರಲ್ಲಿ ಡಿಸೋಜಾ ಅವರ ತೋಟದಲ್ಲಿ 35 ಕೆಜಿಯಷ್ಟು ದ್ರಾಕ್ಷಿ ಬೆಳೆದಿದ್ದಾರೆ ಅದು ಸಹ ಕೇವಲ 2 ಗಿಡದಲ್ಲಿ.

ಡಿಸೋಜಾ ಅವರ ತೋಟ ಟೂರಿಸ್ಟ್ ಸ್ಪಾಟ್

ಡಿಸೋಜಾ ಅವರ ತೋಟ ಟೂರಿಸ್ಟ್ ಸ್ಪಾಟ್

ಡಿಸೋಜಾ ಅವರು ಹವ್ಯಾಸಕ್ಕಾಗಿ ಆರಂಭಿಸಿದ ತೋಟ ಈಗ ಪ್ರವಾಸಿ ತಾಣವಾಗಿದೆ. ಕಳೆದ ವರ್ಷ ಸುಮಾರು 1000 ಜನರು ತೋಟಕ್ಕೆ ಭೇಟಿ ನೀಡಿ ತರಕಾರಿ ಮತ್ತು ಹಣ್ಣು ಬೆಳೆಗಳ ಬಗ್ಗೆ ಮಾಹಿತಿ ಪಡೆದುಕೊಂಡಿದ್ದಾರೆ.

ಎಲ್ಲೂ ಮಾರ್ಗದರ್ಶನ ಪಡೆದಿಲ್ಲ

ಎಲ್ಲೂ ಮಾರ್ಗದರ್ಶನ ಪಡೆದಿಲ್ಲ

ಡಿಸೋಜಾ ಅವರು ಮಹಡಿ ಮೇಲೆ ತೋಟ ಬೆಳೆಸಲು ಯಾರ ಬಳಿಯೂ ಮಾರ್ಗದರ್ಶನ ಪಡೆದಿಲ್ಲ. ಅವರು 15 ವರ್ಷಗಳ ಹಿಂದೆ ಆರಂಭಿಸಿದ ಕೃಷಿ ಇಂದು ಹಲವಾರು ಜನರಿಗೆ ಅಧ್ಯಯನದ ವಿಷಯವಾಗಿದೆ.

ನನಗೆ ಲಾಭ ಬೇಡ ಕೃಷಿ ಖುಷಿ ನೀಡುತ್ತದೆ

ನನಗೆ ಲಾಭ ಬೇಡ ಕೃಷಿ ಖುಷಿ ನೀಡುತ್ತದೆ

ಮಹಡಿ ಮೇಲೆ ತೋಟ ಬೆಳೆಯುವುದರಿಂದ ನನಗೆ ಯಾವುದೇ ಲಾಭವಾಗಬೇಕಾಗಿಲ್ಲ. ಅದರಿಂದ ನನಗೆ ಖುಷಿ ದೊರೆಯುತ್ತದೆ. ನಾನು ನೆಟ್ಟ ಬೀಜ ಫಲ ಕೊಟ್ಟಾಗ ಅದು ನೀಡುವ ಸಂತಸ ನನಗೆ ಮಾತ್ರ ಗೊತ್ತು ಎಂದು ಡಿಸೋಜಾ ತಮ್ಮ ತೋಟದ ಕೃಷಿ ಬಗ್ಗೆ ಹೇಳಿಕೊಳ್ಳುತ್ತಾರೆ.

English summary
Blany B Dsouza staying at Jaihind road Marnamikatte in Mangalore city is growing almost all varieties of local vegetables and fruits on the terrace.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X