ಮಂಗಳೂರು : ವಿವಿ ಫಲಿತಾಂಶ ಗೊಂದಲ, ಸಹಾಯವಾಣಿ ಆರಂಭ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 07 : 'ಫಲಿತಾಂಶದ ಬಗ್ಗೆ ವಿದ್ಯಾರ್ಥಿಗಳಲ್ಲಿ ಗೊಂದಲವಿದ್ದು, ನಿಮಗೆ ನೀಡಿರುವ ಫಲಿತಾಂಶ ತಾತ್ಕಾಲಿಕವಾಗಿದ್ದು, ಕೆಲವೇ ದಿನಗಳಲ್ಲಿ ಸರಿಯಾದ ಫಲಿತಾಂಶ ಬರಲಿದೆ. ಈ ಬಗ್ಗೆ ಗೊಂದಲ ಬೇಡ' ಎಂದು ಮಂಗಳೂರು ವಿವಿ ಪರೀಕ್ಷಾಂಗ ಮೌಲ್ಯಮಾಪನ ರಿಜಿಸ್ಟ್ರಾರ್ ಎ.ಎಂ.ಖಾನ್ ವಿದ್ಯಾರ್ಥಿಗಳಿಗೆ ಭರವಸೆ ನೀಡಿದ್ದಾರೆ.

'ವಿವಿಯಲ್ಲಿನ ಫಲಿತಾಂಶದ ಬಗ್ಗೆ ಗೊಂದಲವಿದ್ದಲ್ಲಿ 0824-2287277, 2287327 ಸಹಾಯವಾಣಿ ಸಂಖ್ಯೆಗೆ ಕರೆ ಮಾಡಿ ಸಮಸ್ಯೆ ಬಗೆಹರಿಸಿಕೊಳ್ಳಬಹುದು. ಈ ಸಹಾಯವಾಣಿಗೆ ಈಗಾಲಗೇ 340 ಕರೆಗಳು ಬಂದಿವೆ. ಇವುಗಳ ಪೈಕಿ 202 ಸಮಸ್ಯೆಗಳನ್ನು ಪರಿಹರಿಸಲಾಗಿದೆ' ಎಂದರು. [ಪರೀಕ್ಷೆ ಬರೆಯದೇ ಪಾಸ್ : ಇದು ಮಂಗಳೂರು ವಿವಿ ಅವಾಂತರ]

mangaluru

'ಫಲಿತಾಂಶದ ಗೊಂದಲದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಉಪಕುಲಪತಿಗಳಿಗೆ ಕಳುಹಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಲು ಹೈಪವರ್ ಕಮಿಟಿ ರಚಿಸಲಾಗಿದೆ. 10 ದಿನಗಳೊಳಗೆ ವರದಿ ಸಿಗಲಿದೆ' ಎಂದು ಎ.ಎಂ.ಖಾನ್ ತಿಳಿಸಿದರು. [16 ಕಾಲೇಜುಗಳಿಗೆ ಸ್ವಾಯತ್ತತೆ ನೀಡಿದ ವಿಟಿಯು]

ವಿವಿಯಲ್ಲಿ ಏನಾಗಿತ್ತು? : ವಿವಿ ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳ ಸೆಮಿಸ್ಟರ್ 1, 3, 5 ಪರೀಕ್ಷೆಗಳು ಮುಗಿದು ಎರಡು ತಿಂಗಳ ಹಿಂದೆಯೇ ಫಲಿತಾಂಶ ಪ್ರಕಟವಾಗಬೇಕಿತ್ತು. ಆದರೆ, ತಡವಾಗಿಯಾದರೂ ಫೆ. 21 ರಂದು ಬಿಬಿಎಂ, ಫೆ.23 ರಂದು ಬಿಕಾಂ, ಬಿಎಚ್ಆರ್ ಡಿ, ಫೆ.26 ರಂದು ಬಿಎ, ಬಿಎಸ್‌ಸಿ, ಮಾರ್ಚ್ 2ರಂದು ಬಾಕಿ ಉಳಿದ ವಿದ್ಯಾರ್ಥಿಗಳ ಫಲಿತಾಂಶ ವೆಬ್‌ಸೈಟ್‌ನಲ್ಲಿ ಪ್ರಕಟವಾಗಿತ್ತು.

ಫಲಿತಾಂಶ ಬಂದ ನಂತರ ಪರೀಕ್ಷೆ ಬರೆಯದವರು ಪಾಸ್ ಆಗಿದ್ದರು. ಕಳೆದ ಸೆಮಿಸ್ಟರ್‌ನಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದವರು ಈ ಬಾರಿ ಫೇಲ್ ಆಗಿದ್ದರು. ಸೈನ್ಸ್ ಪರೀಕ್ಷೆ ಬರೆದವರ ಫಲಿತಾಂಶ ಬಿಬಿಎಂ ವಿಭಾಗದಲ್ಲಿ ಪ್ರಕಟವಾಗಿತ್ತು. ಈ ಗೊಂದಲಗಳು ವಿದ್ಯಾರ್ಥಿಗಳಲ್ಲಿ ಆತಂಕ ಉಂಟು ಮಾಡಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After announcement of Degree exam results Mangalore university students under confusion. Now University has launched helpline for the students.
Please Wait while comments are loading...