ಪರೀಕ್ಷೆ ಬರೆಯದೇ ಪಾಸ್ : ಇದು ಮಂಗಳೂರು ವಿವಿ ಅವಾಂತರ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 04 : ಪರೀಕ್ಷೆ ಬರೆಯದವರು ಪಾಸ್, ಕಳೆದ ಸೆಮಿಸ್ಟರ್‌ನಲ್ಲಿ ಉನ್ನತ ದರ್ಜೆಯಲ್ಲಿ ಉತ್ತೀರ್ಣರಾದವರು ಈ ಬಾರಿ ಫೇಲ್. ಸೈನ್ಸ್ ಪರೀಕ್ಷೆ ಬರೆದವರ ಫಲಿತಾಂಶ ಬಿಬಿಎಂ ವಿಭಾಗದಲ್ಲಿ ಪ್ರಕಟವಾಗಿದೆ. ಇದೆಲ್ಲಾ ನಡೆದಿರುವುದು ಮಂಗಳೂರು ವಿಶ್ವವಿದ್ಯಾಲಯದಲ್ಲಿ.

ಮಂಗಳೂರು ವಿವಿ ಪದವಿ ಫಲಿತಾಂಶದಲ್ಲಿ ಹಲವಾರು ಗೊಂದಲಗಳು ಉಂಟಾಗಿದ್ದು, ವಿದ್ಯಾರ್ಥಿಗಳು ಭವಿಷ್ಯದ ಬಗ್ಗೆ ಆತಂಕ ಗೊಂಡಿದ್ದಾರೆ. ಮಂಗಳೂರು ವಿವಿ ವ್ಯಾಪ್ತಿಯ ಪದವಿ ವಿದ್ಯಾರ್ಥಿಗಳ ಸೆಮಿಸ್ಟರ್ 1, 3, 5 ಪರೀಕ್ಷೆಗಳು ಮುಗಿದು ಎರಡು ತಿಂಗಳ ಹಿಂದೆಯೇ ಫಲಿತಾಂಶ ಪ್ರಕಟವಾಗಬೇಕಿತ್ತು. [16 ಕಾಲೇಜುಗಳಿಗೆ ಸ್ವಾಯತ್ತತೆ ನೀಡಿದ ವಿಟಿಯು]

mangalore

ಆದರೆ, ತಡವಾಗಿಯಾದರೂ ಫೆ. 21 ರಂದು ಬಿಬಿಎಂ, ಫೆ.23 ರಂದು ಬಿಕಾಂ, ಬಿಎಚ್ಆರ್ ಡಿ, ಫೆ.26 ರಂದು ಬಿಎ, ಬಿಎಸ್‌ಸಿ, ಮಾರ್ಚ್ 2ರಂದು ಬಾಕಿ ಉಳಿದ ವಿದ್ಯಾರ್ಥಿಗಳ ಫಲಿತಾಂಶ ವಿಶ್ವವಿದ್ಯಾಲಯದ ವೆಬ್‌ಸೈಟ್‌ನಲ್ಲಿ ಪ್ರಕಟಗೊಂಡಿದೆ. [ಬಾಬಾ ರಾಮದೇವ್ ಹೊಸ ಸಾಹಸ, ವಿಶ್ವವಿದ್ಯಾಲಯ ಸ್ಥಾಪನೆ!]

ಪದವಿ ಪರೀಕ್ಷೆಗಳ ಮೌಲ್ಯ ಮಾಪನ ಇನ್ನೂ ಪೂರ್ಣಗೊಂಡಿಲ್ಲ. ಮೊದಲ ಹಂತದ ಮೌಲ್ಯಮಾಪನವಷ್ಟೆ ನಡೆದಿದೆ. ಎರಡನೇ ಹಂತದ ಮೌಲ್ಯಮಾಪನಕ್ಕಾಗಿ ವಿವಿ ಯಲ್ಲಿ ಸಿದ್ಧತೆ ನಡೆದಿದೆ. ಮೌಲ್ಯಮಾಪನ ಮುಗಿಯದಿದ್ದರು ವಿವಿ ಬಿಬಿಎಂ ಸಹಿತ ಇತರ ಪರೀಕ್ಷೆಗಳ ಫಲಿತಾಂಶ ಪ್ರಕಟಿಸಿದೆ. ಇದರಿಂದಾಗಿ ಕೆಲವು ವಿದ್ಯಾರ್ಥಿಗಳ ಆಂತರಿಕ ಮೌಲ್ಯಮಾಪನ ಅಂಕಗಳು ಅದಲು ಬದಲಾದರೆ, ಉಳಿದ ಕೆಲವರ ಫಲಿತಾಂಶ ಪ್ರಕಟಗೊಂಡಿಲ್ಲ. [ವಿದ್ಯಾರ್ಥಿನಿ ವೇತನ ಬೇಕಾ? ಹಾಗಿದ್ರೆ ಕನ್ಯತ್ವ ಉಳಿಸಿಕೊಳ್ಳಿ!]

ಹೀಗಿದೆ ಗೊಂದಲ : ಫೆ.21 ರಂದು ಬೆಳಗ್ಗೆ ಬಿಬಿಎಂ ಫಲಿತಾಂಶ ಪ್ರಕಟವಾದ ಬಿಬಿಎಂ ವಿದ್ಯಾರ್ಥಿ ಸುನಿಲ್ ಭಟ್ ಅವರಿಗೆ ಶೇ 73 ಫಲಿತಾಂಶ ಬಂದಿತ್ತು. ಮಧ್ಯಾಹ್ನ 2 ಗಂಟೆ ವೇಳೆ ಅದು ಶೇ 22ಕ್ಕೆ ಇಳಿದಿತ್ತು. ಈಗ ಫಲಿತಾಂಶವೇ ಕಾಣುತ್ತಿಲ್ಲ.

ಫಲಿತಾಂಶದಲ್ಲಿ ಗೊಂದಲವಿಲ್ಲ : 'ಫಲಿತಾಂಶದಿಂದ ವಿದ್ಯಾರ್ಥಿಗಳು ಗೊಂದಲಪಡಬೇಕಿಲ್ಲ. ವಿವಿ ಸರಿಯಾದ ಫಲಿತಾಂಶವನ್ನು ನೀಡಿದೆ. ತಾಂತ್ರಿಕ ಸಮಸ್ಯೆಯಿಂದ ಕೆಲವು ಗೊಂದಲ ಸೃಷ್ಟಿಯಾಗಿದೆ. ಎರಡು ದಿನಗಳಲ್ಲಿ ಸ್ಪಷ್ಟ ಫಲಿತಾಂಶ ಪ್ರಕಟಿಸಲಾಗುವುದು' ಎಂದು ವಿವಿ ಪ್ರೊ. ಭೈರಪ್ಪ ಹೇಳಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
After announcement of Degree exam results Mangalore university students under confusion. University declared that, there is no mix-up in the results of undergraduate examinations as reported in a section of media.
Please Wait while comments are loading...