ಮಂಗಳೂರು: ಬಸ್ ನಿಲ್ದಾಣದಲ್ಲೇ ಗಾಂಜಾ ಮಾರಾಟ, ಓರ್ವನ ಬಂಧನ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ 28 : ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಕಾರ್ ಪಾರ್ಕಿಂಗ್ ಸ್ಥಳದಲ್ಲಿ ಗಾಂಜಾ ಮಾರಾಟ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬರ್ಕೆ ಠಾಣಾ ಪೊಲೀಸರು ಶನಿವಾರ ಬಂಧಿಸಿದ್ದಾರೆ.[ಮಂಗಳೂರು: ಗಂಡ-ಹೆಂಡತಿ ಆತ್ಮಹತ್ಯೆ ಯತ್ನ, ಪತಿ ಸಾವು, ಪತ್ನಿ ಸ್ಥಿತಿ ಗಂಭೀರ]

Mangalore: Person held for selling of Marijuana

ಬಂಧಿತ ಆರೋಪಿಯನ್ನು ಒಡಿಶಾ ರಾಜ್ಯದ ಬಾಲೆಸರ್ ಜಿಲ್ಲೆಯ ಗೋಲಾ ಪೂಕರ ಚೌಕಿಯ ಲಕ್ಷ್ಮಣ ಕೋಟ ನಿವಾಸಿ ತನ್ವೀರ್ ಖಾನ್ (21) ಎಂದು ಗುರುತಿಸಲಾಗಿದೆ. ಈತನಿಂದ 437 ಗ್ರಾಂ ಗಾಂಜಾ, 1 ಮೊಬೈಲ್ ಮತ್ತು 250 ರೂ. ಸಹಿತ ಒಟ್ಟು 10,925 ರೂ. ವೌಲ್ಯದ ಸೊತ್ತನ್ನು ವಶಪಡಿಸಿಕೊಳ್ಳಲಾಗಿದೆ. ಪೊಲೀಸರು ಈತನ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.[ಅರಣ್ಯದಲ್ಲಿ ಅಕ್ರಮ ಕಸಾಯಿಖಾನೆ: ಇಬ್ಬರ ಬಂಧನ]

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
One person held for selling of marijuana in Bijai KSRTC Bust Stand, Mangaluru.
Please Wait while comments are loading...