ವೆಬ್‌ಸೈಟ್ ಆರಂಭಿಸಿದ ಮಂಗಳೂರು ಬೈಸಿಕಲ್ ಕ್ಲಬ್

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜುಲೈ 04 : ಮಂಗಳೂರು ಬೈಸಿಕಲ್ ಕ್ಲಬ್ ವೆಬ್‌ ಸೈಟ್ ಆರಂಭಿಸಿದೆ. 2011ರಲ್ಲಿ ಆರಂಭವಾದ ಬೈಸಿಕಲ್ ಕ್ಲಬ್ ಪರಿಸರ ಸ್ನೇಹಿ ವಾತಾವರಣವನ್ನು ನಿರ್ಮಿಸಲು ಜನ ಜಾಗೃತಿ ಮೂಡಿಸುವ ಕೆಲಸವನ್ನು ಮಾಡುತ್ತಿದೆ.

ಮಂಗಳೂರು ಡಿಸಿಪಿ (ಕಾನೂನು ಮತ್ತು ಸುವ್ಯವಸ್ಥೆ) ಕೆ.ಎಂ.ಶಾಂತರಾಜು ಅವರು ಭಾನುವಾರ ಬೈಸಿಕಲ್‌ ಕ್ಲಬ್‌ನ www.mangalorebicycleclub.com ವೆಬ್‌ಸೈಟ್‌ಗೆ ಚಾಲನೆ ನೀಡಿದರು. [ಮಂಗಳೂರಿನಿಂದ ರಾಜ್ಯದೆಲ್ಲೆಡೆ 'ಹಸಿರು ಉಳಿಸಿ' ಸೈಕಲ್ ಜಾಥಾ]

cycling club

'ಸೈಕ್ಲಿಂಗ್‌ನಂತಹ ಹವ್ಯಾಸಗಳು ಕೆಟ್ಟ ಅಭ್ಯಾಸ ಬೆಳೆಸಿಕೊಳ್ಳುವುದನ್ನು ತಡೆಯಲು ಉತ್ತೇಜನ ನೀಡುತ್ತವೆ. ಇದನ್ನೊಂದು ಗುಂಪು ಚಟುವಟಿಕೆಯಾಗಿ ಕೈಗೊಂಡಾಗ ಮತ್ತಷ್ಟು ಜನರನ್ನು ಪ್ರೇರೆಪಿಸಲು ಸಾಧ್ಯವಾಗುತ್ತದೆ. ಸಾಧ್ಯವಾದಷ್ಟು ಜನರನ್ನು ಈ ಕ್ರೀಡೆಯತ್ತ ಸೆಳೆಯುವ ಕೆಲಸ ಆಗಬೇಕಿದೆ' ಎಂದರು. [ಬಾಡಿಗೆ ಸೈಕಲ್ ಪಡೆದು ಮೈಸೂರಿನಲ್ಲಿ ಸುತ್ತಾಡಿ]

ಕ್ಲಬ್ ಚಟುವಟಿಕೆಗಳಾದ 200 ಕಿ.ಮೀ. ಲೀಗ್ ಹಾಗೂ 100 ಕಿ.ಮೀ. ಲೀಗ್ ಯಶಸ್ವಿಯಾಗಿ ಪೂರೈಸಿದವರನ್ನು, ದಿನವೊಂದಕ್ಕೆ 400 ಕಿ.ಮೀ. ಹಾಗೂ 300 ಕಿ.ಮೀ. ಸೈಕಲ್ ಕ್ರಮಿಸುವ ಸಾಧನೆ ಮಾಡಿದ ಡೋನಿ ಮಿನೇಜಸ್, ಕಿಶನ್ ಬಂಗೇರರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು. [8 ಜನರನ್ನು ಹೊತ್ತೊಯ್ಯುವ ಡಿಫರೆಂಟ್ ಸೈಕಲ್]

bicycle

ಕ್ಲಬ್ ಅಧ್ಯಕ್ಷ ಡೋನಿ ಮಿನೇಜಸ್, ಉಪಾಧ್ಯಕ್ಷ ಡಾ.ಪ್ರೀತಂ ಶರ್ಮ, ಕಾರ್ಯದರ್ಶಿ ದಿಜರಾಜ್ ನಾಯರ್, ಖಜಾಂಚಿ ಆನಂದ ಪ್ರಭು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Mangalore cycling club launched its http://mangalorebicycleclub.com/ website on July 3, 2016. Bicycle Club was founded on 2011 with an objective of making cycling more accessible to everyone.
Please Wait while comments are loading...