ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು : ಉತ್ಪಾದನೆ ಸ್ಥಗಿತಗೊಳಿಸಿದ ಎಂಸಿಎಫ್

|
Google Oneindia Kannada News

ಮಂಗಳೂರು, ಮೇ 11 : ಮಂಗಳೂರು ಕೆಮಿಕಲ್ಸ್ ಮತ್ತು ಫರ್ಟಿಲೈಸರ್ಸ್ (ಎಂಸಿಎಫ್) ಉತ್ಪಾದನೆ ಸ್ಥಗಿತಗೊಳಿಸಿದೆ. ನೀರಿನ ಅಭಾವದ ಹಿನ್ನಲೆಯಲ್ಲಿ ಎಂಸಿಎಫ್‌ಗೆ ನೀರು ಸರಬರಾಜು ಸ್ಥಗಿತಗೊಳಿಸಲಾಗಿತ್ತು. ನೀರಿಲ್ಲದ ಕಾರಣ ಉತ್ಪಾದನೆ ಸ್ಥಗಿತಗೊಂಡಿದೆ.

ಪ್ರತಿದಿನ ಎಂಸಿಎಫ್‌ನಲ್ಲಿ 1200 ಟನ್ ಯೂರಿಯಾ ಉತ್ಪಾದನೆ ಮಾಡಲಾಗುತ್ತಿತ್ತು. ಪ್ರತಿ ತಿಂಗಳು 10.80 ಕೋಟಿ ಟನ್ ಉತ್ಪಾದನೆ ನಡೆಯುತ್ತಿತ್ತು. ಆದರೆ, ಕಳೆದ ಶನಿವಾರದಿಂದ ಯೂರಿಯಾ ಉತ್ಪಾದನೆಯನ್ನು ನಿಲ್ಲಿಸಲಾಗಿದೆ. [MCFಗೆ ನೀರು ಪೂರೈಕೆ ಸ್ಥಗಿತ]

mcf

ಜಿಲ್ಲಾ ಉಸ್ತುವಾರಿ ಸಚಿವ ಬಿ.ರಾಮನಾಥ ರೈ ಅಧ್ಯಕ್ಷತೆಯಲ್ಲಿ ಏಪ್ರಿಲ್ 19ರಂದು ನಡೆದ ಸಭೆಯಲ್ಲಿ ಕೈಗಾರಿಕೆಗಳಿಗೆ ಶೇ .50 ರಷ್ಟು ನೀರು ಸರಬರಾಜು ಕಡಿತಗೊಳಿಸಲು ತೀರ್ಮಾನಿಸಲಾಗಿತ್ತು. ಬಳಿಕ ಎಂಸಿಎಫ್ ನಲ್ಲಿ ಯೂರಿಯಾ ಉತ್ಪಾದನೆ ಶೇ .65ಕ್ಕೆ ಇಳಿದಿತ್ತು. [ಮಂಗಳೂರಿನ ಹಾಸ್ಟೆಲ್ ತೊರೆದ ಸಾವಿರಾರು ವಿದ್ಯಾರ್ಥಿಗಳು]

ಈ ನಡುವೆ ಬೈಕಂಪಾಡಿ ಕೈಗಾರಿಕೆ ಪ್ರದೇಶದಲ್ಲಿರುವ ಯುಬಿ ಗ್ರೂಪ್‌ನ ಯುನೈಟೆಡ್ ಬಿಯರ್ ತಯಾರಿಕಾ ಘಟಕ ಶೇ . 50 ರಷ್ಟು ಉತ್ಪಾದನೆ ನಿಲ್ಲಿಸಿದೆ. [ದಕ್ಷಿಣ ಕನ್ನಡವನ್ನು ಬರಪೀಡಿತ ಜಿಲ್ಲೆ ಎಂದು ಘೋಷಿಸಿ]

ಎಂಸಿಎಫ್‌ ಬಾಗಿಲು ಮುಚ್ಚಿರುವುದರಿಂದ ಸಕಾಲದಲ್ಲಿ ಬಿತ್ತನೆಗೆ ಕೃಷಿಕರಿಗೆ ಗೊಬ್ಬರ ಸಿಗದಿರುವ ಆತಂಕ ಎದುರಾಗಿದೆ. ಮಾರುಕಟ್ಟೆಯಲ್ಲಿ ಯೂರಿಯಾ ಕೊರತೆ ಉಂಟಾಗಿ, ರೈತರಿಗೆ ಬೆಲೆ ಏರಿಕೆಯ ಬಿಸಿ ತಟ್ಟಬಹುದು ಎಂದು ಅಂದಾಜಿಸಲಾಗಿದೆ.

6 ಕೋಟಿ ನಷ್ಟ : ಯೂರಿಯಾ ಘಟಕ ದಿನದ 24 ಘಂಟೆಯು ಚಾಲನೆಯಲ್ಲಿರುತ್ತದೆ. ಈ ಘಟಕವನ್ನು ಒಮ್ಮೆ ಮುಚ್ಚಿ ತೆರೆಯುವಾಗ ಸುಮಾರು 5-6 ಕೋಟಿ ನಷ್ಟವಾಗುತ್ತದೆ. ಇದೊಂದು ಕಂಪೆನಿಗೆ ದೊಡ್ಡ ಪ್ರಮಾಣದ ನಷ್ಟವಾಗಿದೆ ಎಂದು ಎಂಸಿಎಫ್ ಅಧಿಕಾರಿಯೊಬ್ಬರು ಹೇಳಿದ್ದಾರೆ.

English summary
Mangalore Chemicals and Fertilizers Limited (MCF) stopped Urea production. Mangalore City Corporation (MCC) has stopped water supply for MCF due to water crisis in Mangaluru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X