ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾಟ: ಆಳ್ವಾಸ್ ಗೆ ಪ್ರಶಸ್ತಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್ 27 : ಕರ್ನಾಟಕ ಕ್ರಿಕೆಟ್ ಸಂಸ್ಥೆಯ ಆಶ್ರಯದಲ್ಲಿ ಎನ್.ಐ.ಟಿ.ಕೆ ಸುರತ್ಕಲ್ ನಲ್ಲಿ ನಡೆದ ಪದವಿಪೂರ್ವ ಕಾಲೇಜುಗಳ ಫೈನಲ್ ಕ್ರಿಕೆಟ್ ಪಂದ್ಯದಲ್ಲಿ ಸಂತ ಅಲೋಶಿಯಸ್ ಪ.ಪೂ ಕಾಲೇಜು ಬಿ'ತಂಡವನ್ನು ಸೋಲಿಸಿ ಆಳ್ವಾಸ್ ತಂಡ ಪ್ರಶಸ್ತಿಯನ್ನು ಮುಡಗೇರಿಸಿಕೊಂಡಿದೆ.

ಮೊದಲು ಬ್ಯಾಟಿಂಗ್ ಮಾಡಿದ ಅಲೋಶಿಯಸ್ ಬಿ ತಂಡ ಮಾಜ್ ಖಾನ್ 77, ಅನಂತ್ 42 ರನ್ ನೆರವಿನಿಂದ 38 ಓವರ್‍ ಗಳಲ್ಲಿ ತನ್ನೇಲ್ಲ ವಿಕೆಟ್ ಕಳೆದುಕೊಂಡು 185 ರನ್ ಗಳಿಸಲಷ್ಟೇ ಶಕ್ತವಾಯಿತು.

ಆಳ್ವಾಸ್ ಪರವಾಗಿ ಅರುಣ್ ಮೋನಪ್ಪ 10 ಓವರ್‍ ಗಲ್ಲಿ 42 ರನ್ ನೀಡಿ 4 ವಿಕೆಟ್ ಪಡೆದರು. ನಂದನ್ ಎಸ್. 8.4 ಓವರ್‍ ಗಳಲ್ಲಿ 33 ರನ್ ನೀಡಿ 3 ವಿಕೆಟ್ ಪಡೆದರು.

Mangalore Alvas college win Inter District Cricket Tournament Trophy

186 ರನ್ ಗಳನ್ನು ಬೆನ್ನಟ್ಟಿದ ಆಳ್ವಾಸ್ ತಂಡ 40 ಓವರ್‍ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 186 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಆಳ್ವಾಸ್ ಪರವಾಗಿ ರೋಹಿತ್ ವಿ. ನೈಕ್ 55, ಅರುಣ್ ಮೋನಪ್ಪ 44 ರನ್, ಮಿಥುನ್ ಸತೀಶ್ 36 ರನ್, ಯಶ್ 20 ರನ್ ಗಳಿಸಿ ತಂಡದ ಗೆಲುವಿಗೆ ನೆರವಾದರು.

ಪ್ರಶಸ್ತಿ ಗೆದ್ದ ಕ್ರಿಕೆಟ್ ತಂಡಕ್ಕೆ ಆಳ್ವಾಸ್ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Alva’s Team defeated st aloysius pu college Team by 2 wickets and won the district level cricket tournament, organized by Karnataka State Cricket Association in Surathkal.
Please Wait while comments are loading...