ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮಾರಾಟ: ಮೂವರ ಬಂಧನ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್.26: ಮಂಗಳೂರು ಹೊರವಲಯದ ಕುಂಟಿಕಾನ ಎಂಬಲ್ಲಿ ನಿಷೇಧಿತ ಮಾದಕ ವಸ್ತು ಎಂಡಿಎಂಎ ಮತ್ತು ಗಾಂಜಾ ಮಾರಾಟ ಮಾಡುತ್ತಿದ್ದ 3 ಮಂದಿ ಅರೋಪಿಗಳನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಇಲ್ಲಿನ ಸನ್ ರಾಯಲ್ ರೆಸಿಡೆನ್ಸಿ ಎದುರಿನ ಸಾರ್ವಜನಿಕ ಸ್ಥಳದಲ್ಲಿ ನಿಷೇಧಿತ ಮಾದಕ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಬಗ್ಗೆ ಖಚಿತ ಮಾಹಿತಿ ಸಿಸಿಬಿ ಪೊಲೀಸರಿಗೆ ದೊರೆತಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆಸಿದ ಸಿಸಿಬಿ ಪೊಲೀಸರು 3 ಜನರನ್ನು ಮಾಲು ಸಮೇತ ಬಂಧಿಸಿದ್ದಾರೆ.

ಮಂಗಳೂರಿನ ವೃದ್ಧನ ಕಾಮ ಪುರಾಣಕ್ಕೆ ಹೊಸ ಟ್ವಿಸ್ಟ್: ಕರವೇ ಮುಖಂಡೆ ಅರೆಸ್ಟ್ ಮಂಗಳೂರಿನ ವೃದ್ಧನ ಕಾಮ ಪುರಾಣಕ್ಕೆ ಹೊಸ ಟ್ವಿಸ್ಟ್: ಕರವೇ ಮುಖಂಡೆ ಅರೆಸ್ಟ್

ಬಂಧಿತರನ್ನು ಗುರುಪುರ ನಿವಾಸಿ ಮಹಮದ್ ಶಾಕೀರ್( 23), ಪಂಜಿಮೊಗರು ನಿವಾಸಿ ನದೀಮ್(26) ಹಾಗೂ ಕಾವೂರು ನಿವಾಸಿ ಫಕ್ರುದ್ದೀನ್ ( 26) ಎಂದು ಗುರುತಿಸಲಾಗಿದೆ. ಇವರನ್ನು ಗಾಂಜಾ ಎಂಡಿಎಂಎ ಎಂಬ ಮಾದಕ ವಸ್ತುವನ್ನು ಮಾರಾಟ ಮಾಡುತ್ತಿದ್ದಾಗಲೇ ಬಂಧಿಸಲಾಗಿದೆ.

Managluru police seized MDMA crystals 3 arrested

ಬಂಧಿತರಿಂದ ಗಾಂಜಾ ಪ್ಯಾಕೆಟ್ ಗಳು ಹಾಗು ಅತ್ಯಂತ ದುಬಾರಿ ಎಂದೇ ಹೇಳಲಾಗುವ 20 ಗ್ರಾಂ ತೂಕದ ಎಂಡಿಎಂಎ ವಶಪಡಿಸಿಕೊಳ್ಳಲಾಗಿದೆ.

ಸಿಬಿಎಸ್​ಇ ಟಾಪರ್ ಮೇಲೆ ಅತ್ಯಾಚಾರ: ಯೋಧ ಸೇರಿ ಎಲ್ಲಾ ಆರೋಪಿಗಳ ಬಂಧನಸಿಬಿಎಸ್​ಇ ಟಾಪರ್ ಮೇಲೆ ಅತ್ಯಾಚಾರ: ಯೋಧ ಸೇರಿ ಎಲ್ಲಾ ಆರೋಪಿಗಳ ಬಂಧನ

ಅದಲ್ಲದೇ 3 ಮೊಬೈಲ್ ಫೋನ್ , 74 ಸಾವಿರ ರೂಪಾಯಿ ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಂಡ ಮಾದಕ ವಸ್ತು ಹಾಗೂ ಸೊತ್ತುಗಳ ಒಟ್ಟು ಮೌಲ್ಯ ರೂ.2.20 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.

English summary
Mangaluru CCB police squad busted Gang which was selling MDMA crystals and Ganja to students. Police arrested 3 in connection to this case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X