ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಐದು ದಿನಗಳ ‘ಅಂತರಾಷ್ಟ್ರೀಯ ಯೋಗ ತರಬೇತಿ’ಗೆ ಚಾಲನೆ

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಐದು ದಿನಗಳ ‘ಅಂತರಾಷ್ಟ್ರೀಯ ಯೋಗ ಶಿಕ್ಷಕರ ತರಬೇತಿ’ ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು. ಅರಣ್ಯ ಮತ್ತು ಪರಿಸರ ಸಚಿವ ರಮಾನಾಥ ರೈ ಈ ತರಬೇತಿಯನ್ನು ಉದ್ಘಾಟಿಸಿದರು.

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಫೆಬ್ರವರಿ 2: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಐದು ದಿನಗಳ 'ಅಂತರರಾಷ್ಟ್ರೀಯ ಯೋಗ ಶಿಕ್ಷಕರ ತರಬೇತಿ' ಕಾರ್ಯಕ್ರಮಕ್ಕೆ ಗುರುವಾರ ಚಾಲನೆ ನೀಡಲಾಯಿತು. ಅರಣ್ಯ ಮತ್ತು ಪರಿಸರ ಸಚಿವ ರಮಾನಾಥ ರೈ ಈ ತರಬೇತಿಯನ್ನು ಉದ್ಘಾಟಿಸಿದರು.

ಫೆಬ್ರವರಿ 2ರಿಂದ 7ರವರೆಗೆ ಈ ತರಬೇತಿ ಕಾರ್ಯಕ್ರಮ ನಡೆಯಲಿದ್ದು ಮಂಗಳೂರು ವಿಶ್ವವಿದ್ಯಾಲಯದ ಮಾನವ ಪ್ರಜ್ಞೆ ಮತ್ತು ಯೋಗ ವಿಜ್ಞಾನ ವಿಭಾಗ, ಧರ್ಮನಿಧಿ ಯೋಗಪೀಠ ಹಾಗೂ ದಕ್ಷಿಣ ಕೊರಿಯಾದ ವಾಂಕ್ವಾಂಗ್ ಡಿಜಿಟಲ್ ವಿಶ್ವವಿದ್ಯಾಲಯ ಜಂಟಿಯಾಗಿ ಈ ಕಾರ್ಯಕ್ರಮ ಹಮ್ಮಿಕೊಂಡಿವೆ.[ಶೀಘ್ರವೇ ಮಂಗಳೂರಿನಲ್ಲಿ ಡಿಸಾಲಿನೇಷನ್ ಸ್ಥಾವರ ಅಸ್ತಿತ್ವಕ್ಕೆ]

Managaluru: International Yoga Teachers Training Camp inaugurated

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವ ರಮಾನಾಥ ರೈ, "ಭಾರತ ದೇಶದವರು ವಿಮಾನ ಅಥವಾ ಟೆಲಿಫೋನ್‌ನನ್ನು ಮೊದಲಿಗೆ ಕಂಡು ಹಿಡಿಯಲು ಆಗದಿದ್ದರೇನಂತೆ. ಆರೋಗ್ಯ ಕಾಪಾಡುವ ಯೋಗವನ್ನು ಕಂಡು ಹಿಡಿದು ಇಡೀ ಜಗತ್ತಿಗಿಂದು ಭಾರತ ಮಾದರಿಯಾಗಿದೆ," ಎಂದು ಹೇಳಿದರು.

' ನಮ್ಮವರು ಕಲಿಸಿಕೊಟ್ಟ ಯೋಗ ಶಿಕ್ಷಣ ಇಂದು ವಿಶ್ವದೆಲ್ಲೆಡೆ ಪಸರಿಸಿದೆ. ಅಲ್ಲದೇ ಜನರು ನೆಮ್ಮದಿ ಜೊತೆಗೆ ಆರೋಗ್ಯಕರ ಜೀವನವನ್ನು ಕಂಡುಕೊಳ್ಳಲು ಸಾಧ್ಯವಾಗಿದೆ' ಎಂದವರು ಹೇಳಿದರು.[ಮಂಗಳೂರು ಪಾಲಿಕೆ ವಿರುದ್ಧ ರಾಜ್ಯ ನಗರಾಭಿವೃದ್ಧಿ ಇಲಾಖೆಗೆ ದೂರು]

ಇದೇ ವೇಳೆ ಮಾತನಾಡಿದ ಕಾರ್ಯಕ್ರಮದ ಮುಖ್ಯ ಅತಿಥಿ, ದಕ್ಷಿಣ ಕೊರಿಯಾದ ವಾಂಕ್ವಾಂಗ್ ವಿಶ್ವವಿದ್ಯಾಲಯದ ಪ್ರೊ.ಜಾಂಗ್ ಸೂನ್ ಸೂಯ್ 'ಯೋಗವು ಭಾರತೀಯ ಸಂಸ್ಕೃತಿಯ ಒಂದು ಭಾಗವಾಗಿದೆ. ಯೋಗದಿಂದ ಮಾನವೀಯ ಸಂಬಂಧಗಳನ್ನು ವೃದ್ದಿಸಲು ಸಾಧ್ಯವಾಗಿದೆ. ಮಂಗಳೂರು ವಿವಿಯು ಯೋಗಕ್ಕೆ ಉತ್ತಮ ಪ್ರೋತ್ಸಾಹವನ್ನು ನೀಡುತ್ತಿದೆ," ಎಂದು ಹೇಳಿದರು.

ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಭೈರಪ್ಪ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಂಗಳೂರು ವಿವಿಯ ಯೋಗ ವಿಜ್ಞಾನ ವಿಭಾಗದ ಮುಖ್ಯಸ್ಥ ಡಾ.ಕೆ.ಕೃಷ್ಣ ಶರ್ಮ ಪ್ರಾಸ್ತಾವಿಕವಾಗಿ ಮಾತನಾಡಿದರು.

English summary
Five days ‘International Yoga Teachers Training’ camp inaugurated by Forest Minister B Ramanath Rai in Mangalore University.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X