ಆಳ್ವಾಸ್ ವಿದ್ಯಾರ್ಥಿಗಳಿಂದ ವೈಜ್ಞಾನಿಕ ವಿಜ್ಞಾನ ಪ್ರದರ್ಶನ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್, 18: ಆಳ್ವಾಸ್ ಇಂಜಿನಿಯರಿಂಗ್‍ ನ ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿಗಳು ತಯಾರಿಸಿದ ವೈಜ್ಞಾನಿಕ ತತ್ವ ಸಿದ್ದಾಂತ ಆಧಾರಿತ ವಿಜ್ಞಾನದ ಮಾದರಿಗಳ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಶನಿವಾರ ಆಳ್ವಾಸ್ ಕ್ಯಾಂಪಸ್ ನಲ್ಲಿ ನಡೆಯಿತು.

ಈ ಕಾರ್ಯಕ್ರಮದಲ್ಲಿ ಮೂಡಬಿದ್ರೆ ಮಿಜಾರು ಸುತ್ತಮುತ್ತಲಿನ ಸರ್ಕಾರಿ ಹಾಗೂ ಖಾಸಗಿ ಶಾಲೆಯ ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ವಿವೇಕ್ ಆಳ್ವ ಉದ್ಘಾಟಿಸಿ ಮಾತನಾಡಿ, ಪ್ರಸಕ್ತ ಸನ್ನಿವೇಶಕ್ಕೆ ತಕ್ಕ ಹಾಗೆ ವಿಜ್ಞಾನದಲ್ಲಿ ಆಗುತ್ತಿರುವ ಬಲಾವಣೆ ಹಾಗೂ ಮೌಡ್ಯತೆಯ ಬಗ್ಗೆ ಜಾಗೃತರಾಗಬೇಕು ಮತ್ತು ಹಿರಿಯ ವಿದ್ಯಾರ್ಥಿಗಳು ಕಿರಿಯ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಕನಸು ಕಟ್ಟುವ ಕೆಲಸಕ್ಕೆ ನೆರವಾಗಬೇಕು ಎಂದರು.

Alvas college Mechanical Engineering students science model exhibition

ಪ್ರದರ್ಶನದ ಮಾದರಿಗಳನ್ನು ಪರಿಸರದಲ್ಲಿ ಸಾಮಾನ್ಯವಾಗಿ ಸಿಗುವ ಕಚ್ಚಾ ವಸ್ತುಗಳನ್ನು ಬಳಕೆ ಮಾಡಿ ಸಿದ್ದಪಡಿಸಿದ್ದರು. ಈ ಪ್ರದರ್ಶನವು ಶಾಲಾ ಮಕ್ಕಳಲ್ಲಿ ತಾಂತ್ರಿಕತೆಯ ಅರಿವು ಮೂಡಿಸಿತು.

ಸುಳ್ಯದಲ್ಲಿ ' ಯುವಜನ ಹಬ್ಬ' ದ ಸಂಭ್ರಮ: ಸಮೃದ್ಧ ಭಾರತದ ನಿರ್ಮಾಣ ಯುವಜನತೆಯ ಕೈಯಲ್ಲಿದೆ. ನಮ್ಮ ದೇಶದ ರಕ್ಷಣೆ ಯುವಕರಿಂದ ಮಾತ್ರ ಸಾಧ್ಯ ಎಂದು ದ.ಕ.ಜಿಲ್ಲಾ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಹೇಳಿದರು.

ಸುಳ್ಯ ಯುವಜನ ಸಂಯುಕ್ತ ಮಂಡಳಿಯ ನವೀಕರಣಗೊಂಡ ಜಾನಕಿ ಕುರುಂಜಿ ವೆಂಕಟ್ರಮಣ ಗೌಡ ರಂಗಮಂದಿರವನ್ನು ಲೋಕಾರ್ಪಣೆ ಮಾಡಿ ಯುವಜನ ಹಬ್ಬವನ್ನು' ಉದ್ಘಾಟಿಸಿ ಅವರು ಮಾತನಾಡಿದರು.

ಯುವಜನತೆ ದಾರಿ ತಪ್ಪದಂತೆ ಸಂಘಟನೆಗಳು ಎಚ್ಚರ ವಹಿಸಿ ಅವರಿಗೆ ಸೂಕ್ತ ಮಾರ್ಗದರ್ಶನ ನೀಡಬೇಕು. ನಮ್ಮ ಕಲೆ ಮತ್ತು ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯುವಕರು ಜೀವನವನ್ನು ಪಾವನಗೊಳಿಸಬೇಕು ಅಂದರು. ಜೊತೆಗೆ ಮುಂದಿನ ಪೀಳಿಗೆಗೆ ಕಲೆ ಸಂಸ್ಕೃತಿಯನ್ನು ಹಸ್ತಾಂತರಿಸುವ ಕೆಲಸವಾಗಬೇಕು ಎಂದರು.

ಯುವಕ ಯುವತಿಯರ ಕಲಾತಂಡದೊಂದಿಗೆ ಸುಳ್ಯದ ಪ್ರಮುಖ ರಸ್ತೆಗಳಲ್ಲಿ ಜಾನಪದ ಕಲೆ ಮತ್ತು ಸಂಸ್ಕೃತಿ ಅನಾವರಣಗೊಂಡ ಆಕರ್ಷಕ ಮೆರವಣಿಗೆ ಮನಸೂರೆಗೊಂಡಿತು. ಯುವಜನ ಹಬ್ಬದ ಅಂಗವಾಗಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಮೆರುಗು ನೀಡಿತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Department of Mechanical Engineering students of Alvas college made a scientific theory based on scientific models to demonstrate science model exhibition held at Mangaluru campus of Alvas on December 17.
Please Wait while comments are loading...