ಮಾಗಡಿಯಲ್ಲಿ ಪತ್ನಿಗೆ ಬೆಂಕಿ ಹಚ್ಚಿದ್ದ ಪತಿ ಧರ್ಮಸ್ಥಳದಲ್ಲಿ ನೇಣಿಗೆ

Posted By:
Subscribe to Oneindia Kannada

ಮಂಗಳೂರು, ಅ. 19 : ಮಾಗಡಿಯಲ್ಲಿ ಪತ್ನಿಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ಪತಿ ಧರ್ಮಸ್ಥಳದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶೇ 4ರಷ್ಟು ಸುಟ್ಟಗಾಯಗಳಾಗಿರುವ ಪತ್ನಿ ಸುಂಕದಕಟ್ಟೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ರಾಮನಗರ: ಶಾಲೆಯಲ್ಲಿ ಶಿಕ್ಷಕಿಗೆ ಬೆಂಕಿ ಹಚ್ಚಿದ ದುಷ್ಕರ್ಮಿ

ಪತ್ನಿ ಕೆ.ಜಿ.ಸುನಂದಾಗೆ ಬೆಂಕಿ ಹಚ್ಚಿ ಪರಾರಿಯಾಗಿದ್ದ ರೇಣುಕಾರಾಧ್ಯ(50) ಧರ್ಮಸ್ಥಳದ ನೇತ್ರಾವತಿ ನದಿ ಸಮೀಪ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಆತ್ಮಹತ್ಯೆ ಬಗ್ಗೆ ಮಾಗಡಿ ಪೊಲೀಸರಿಗೆ ಧರ್ಮಸ್ಥಳದ ಪೊಲೀಸರು ಮಾಹಿತಿ ರವಾನಿಸಿದ್ದಾರೆ.

Man who set wife on fire commits suicide

ಮಾಗಡಿ ತಾಲ್ಲೂಕಿನ ಶಂಭಯ್ಯನ ಪಾಳ್ಯ ಸರ್ಕಾರಿ ಶಾಲೆಯ ಶಿಕ್ಷಕಿ ಕೆ.ಜಿ.ಸುನಂದಾ ಮೇಲೆ ಆಗಸ್ಟ್‌ 16ರಂದು ಪತಿ ರೇಣುಕಾರಾಧ್ಯ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದ. ಘಟನೆ ಬಳಿಕ ಸ್ಥಳದಿಂದ ಪರಾರಿಯಾಗಿದ್ದ. ಮಾಗಡಿ ಟೌನ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿತ್ತು.

ಧರ್ಮಸ್ಥಳದಲ್ಲಿ ನಗದು ರಹಿತ ಪಾವತಿ ಸೌಲಭ್ಯ

ಪರಾರಿಯಾದ ರೇಣುಕಾರಾಧ್ಯ ಬಂಧನಕ್ಕೆ ಪೊಲೀಸರು ಹುಡುಕಾಟ ನಡೆಸಿದ್ದರು. ಆರೋಪಿಯ ಭಾವಚಿತ್ರವನ್ನು ಎಲ್ಲಾ ಪೊಲೀಸ್ ಠಾಣೆಗಳಿಗೂ ಕಳುಹಿಸಿ ಕೊಡಲಾಗಿತ್ತು. ಸುನಂದಾ ಅವರನ್ನು ಸುಂಕದಕಟ್ಟೆಯ ಲಕ್ಷ್ಮೀ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Renukaradhya (50) who was on the run after setting his wife on fire in a classroom was found hanging at Dharmasthala. A special team of police from Magadi tracking the accused Renukaradhya after he seeting fire.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X