ಮಂಗಳೂರಲ್ಲಿ ಮ್ಯಾನ್ ಹೋಲ್ ಸ್ವಚ್ಛಗೊಳಿಸಿದ ಕಾರ್ಮಿಕ

Posted By:
Subscribe to Oneindia Kannada

ಮಂಗಳೂರು, ಅಕ್ಟೋಬರ್ 18 : ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಂದರು ವಾರ್ಡ್ ಮ್ಯಾನ್‌ ಹೋಲ್‌ ಅನ್ನು ಕಾರ್ಮಿಕರಿಂದ ಸ್ವಚ್ಛ ಗೊಳಿಸಲಾಗಿದೆ. ಕುಸಿದ ಮ್ಯಾನ್ ಹೋಲ್ ನೊಳಗೆ ಕಾರ್ಮಿಕರನ್ನು ಇಳಿಸಿ ಸ್ವಚ್ಛ ಮಾಡಿಸಲಾಗಿದೆ.

ಕಾರ್ಮಿಕರು ಮ್ಯಾನ್ ಹೋಲ್ ಸ್ವಚ್ಛ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಸಾರ್ವಜನಿಕರು ಇದನ್ನು ಟೀಕಿಸಿದ್ದಾರೆ. ಕುಸಿದ ಮ್ಯಾನ್ ಹೋಲ್ ಸರಿ ಪಡಿಸುತ್ತಿದ್ದೆವು. ಸ್ವಚ್ಛಮಾಡಿಸಿಲ್ಲ ಎಂದು ಪಾಲಿಕೆ ಸ್ಪಷ್ಟನೆಯನ್ನೂ ನೀಡಿದ್ದಾರೆ.

Man forced into manhole to clean it in Mangaluru

ಮಂಗಳೂರಿನ ಬಂದರು ಪ್ರದೇಶದಲ್ಲಿರುವ ಮ್ಯಾನ್ ಹೋಲ್ ಹಳೇ ಸಂಪರ್ಕದ್ದಾಗಿದ್ದು, ಇಂದು ಏಕಾಏಕಿ ಮ್ಯಾನ್ ಹೋಲ್ ಕುಸಿದಿತ್ತು. ಇದನ್ನು ಸರಿಪಡಿಸಲು ನಝೀರ್ ಎನ್ನುವ ಗುತ್ತಿಗೆದಾರನಿಗೆ ಪಾಲಿಕೆ ಅಧಿಕಾರಿಗಳು ಗುತ್ತಿಗೆ ನೀಡಿದ್ದರು.

ಆದರೆ, ಮ್ಯಾನ್ ಹೋಲ್ ನೊಳಗೆ ಕಾರ್ಮಿಕರನ್ನು ಇಳಿಸಿ ಕೆಲಸ ಮಾಡಿಸಬಾರದೆಂಬ‌ ಕಾನೂನು ಇದೆ. ಗುತ್ತಿಗೆದಾರ ಮಾತ್ರ ಕಾನೂನನ್ನು ಗಾಳಿಗೆ ತೂರಿ ಕಾರ್ಮಿಕರನ್ನು ಇಳಿಸಿ ಕುಸಿದ ಮಣ್ಣು ಹಾಗೂ ಒಳಚರಂಡಿ ನೀರನ್ನು ತೆರವುಗೊಳಿಸುವ ಕೆಲಸ ಮಾಡಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು, ಮೇಯರ್ ಕ್ರಮ ಕೈಗೊಳ್ಳುವ ಬದಲು, ಕುಸಿದ ಮ್ಯಾನ್ ಹೋಲ್ ಅನ್ನು ಸರಿಪಡಿಸುತ್ತಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A pourakarmika belonging to Mangaluru mahanagara palike was allegedly forced into a manhole to clear it on October 18, 2017.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ