ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರೆಂಟ್ ಕೊಡಿ ಎಂದು ಕರೆ ಮಾಡಿದ್ದಕ್ಕೆ ಕಂಬಿ ಹಿಂದೆ ಹೋದ್ರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮಾರ್ಚ್ 01 : ವಿದ್ಯುತ್ ಸಮಸ್ಯೆಯಿಂದ ಬಳಲಿದ ವರ್ತಕರೊಬ್ಬರು ಇಂಧನ ಸಚಿವರಿಗೆ ಕರೆ ಮಾಡಿದ ಕಾರಣಕ್ಕೆ ಜೈಲು ಪಾಲಾಗಿದ್ದಾರೆ. ಇಲಾಖೆ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ವರ್ತಕರು ಸದ್ಯ, ಜಾಮೀನು ಪಡೆದು ಹೊರಬಂದಿದ್ದಾರೆ.

ಸುಳ್ಯ ತಾಲೂಕಿನ ಬೆಳ್ಳಾರೆಯ ನಿವಾಸಿ ಸಾಯಿ ಗಿರಿಧರ್ ರೈ ಅವರನ್ನು ಪೊಲೀಸರು ಬಂಧಿಸಿದ್ದರು. ಬೆಳ್ಳಾರೆ ವರ್ತಕರ ಸಂಘದ ಮಾಜಿ ಅಧ್ಯಕ್ಷರಾದ ಸಾಯಿ ಗಿರಿಧರ್ ರೈ ಅವರ ವಿರುದ್ಧ ನಿಂದನೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣವನ್ನು ಪೊಲೀಸರು ದಾಖಲಿಸಿದ್ದಾರೆ. [ಕರ್ನಾಟಕಕ್ಕೆ ಬೇಸಿಗೆ ಬಿಸಿ ಜೊತೆಗೆ ಲೋಡ್ ಶೆಡ್ಡಿಂಗ್ ಹೊರೆ]

giridhar rai

ಘಟನೆಯ ಹಿನ್ನಲೆ : ಬೆಳ್ಳಾರೆಯಲ್ಲಿ ನಿರಂತರವಾಗಿ ವಿದ್ಯುತ್ ಸಮಸ್ಯೆ ಉಂಟಾಗುತ್ತಿತ್ತು. ಇದರಿಂದಾಗಿ ವ್ಯಾಪಾರ ವಹಿವಾಟು ನಡೆಸುವುದು ಕಷ್ಟವಾಗಿತ್ತು. ಮೆಸ್ಕಾಂಗೆ ಹಲವು ಬಾರಿ ಈ ಕುರಿತು ದೂರು ನೀಡಿದರೂ ಯಾವುದೇ ಪ್ರಯೋಜನವಾಗಿರಲಿಲ್ಲ. ವಿದ್ಯುತ್ ಸಮಸ್ಯೆ ಬಗ್ಗೆ ಜನರು ಪ್ರತಿಭಟನೆಯನ್ನು ನಡೆಸಿದ್ದರು. [ಶರಾವತಿ ವಿದ್ಯುದಾಗಾರದಲ್ಲಿ ಬೆಂಕಿ, ವಿಡಿಯೋ ನೋಡಿ]

ವಿದ್ಯುತ್ ಸಮಸ್ಯೆ ಬಗೆಹರಿಸಲು ಕೊನೆಯ ಪ್ರಯತ್ನ ಎಂಬಂತೆ, ಗಿರಿಧರ್ ರೈ ಅವರು ಶನಿವಾರ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಕರೆ ಮಾಡಿದ್ದಾರೆ. ಮೊದಲ ಬಾರಿಗೆ ಕರೆ ಮಾಡಿದಾಗ ಸಚಿವರು ಕರೆ ಸ್ವೀಕರಿಸಲಿಲ್ಲ. ಭಾನುವಾರ ರೈ ಮತ್ತೆ ಪ್ರಯತ್ನಿಸಿದ್ದಾರೆ. ಆಗ ಸಚಿವರು ಸಿಕ್ಕಿದ್ದಾರೆ. [ಕರ್ನಾಟಕದಲ್ಲಿ ವಿದ್ಯುತ್ ಕೊರತೆ : ಶಾಶ್ವತ ಪರಿಹಾರಗಳು]

ಗಿರಿಧರ್ ರೈ ಅವರು ಸಮಸ್ಯೆ ವಿವರಿಸುತ್ತಿದ್ದಂತೆ ಸಚಿವರು ಕೆಂಡಾಮಂಡಲವಾದರು. ಇಡೀ ರಾಜ್ಯದಲ್ಲಿ ವಿದ್ಯುತ್ ಸಮಸ್ಯೆಯಿದೆ, ಬೆಳ್ಳಾರೆಯಲ್ಲಿ ಮಾತ್ರವಲ್ಲ ಎಂದಿದ್ದಾರೆ. ಸಚಿವರ ಜೊತೆ ಮಾತನಾಡುತ್ತಲೇ ಇಲಾಖೆಯ ಕಾರ್ಯವೈಖರಿ ಬಗ್ಗೆ ಗಿರಿಧರ್ ರೈ ಅಸಮಾಧಾನ ವ್ಯಕ್ತಪಡಿಸಿದ್ದರು. ಈ ವೇಳೆ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿತ್ತು.

ಸಚಿವ ಶಿವಕುಮಾರ್‌ ಅವರು ಮಂಗಳೂರು ಪೊಲೀಸರಿಗೆ ಗಿರಿಧರ್ ಅವರನ್ನು ಬಂಧಿಸುವಂತೆ ಸೂಚನೆ ಕೊಟ್ಟಿದ್ದರು. ಸಚಿವರ ಆಜ್ಞೆಯನ್ನು ಪಾಲಿಸಿದ ಪೊಲೀಸರು ಗಿರಿಧರ್ ಮನೆಗೆ ಧಾವಿಸಿ, ಅವರನ್ನು ಬಂಧಿಸಿದ್ದರು. ಪೊಲೀಸರು ಅವರ ವಿರುದ್ಧ ನಿಂದನೆ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣ ದಾಖಲಿಸಿದ್ದರು.

ವಕೀಲರಾದ ಹರೀಶ್ ಮೂಡುಪನ್ನೆ ಹಾಗೂ ನಾರಾಯಣ ಪಾತಾಳಿಯವರು ಗಿರಿಧರ್ ಪರವಾಗಿ ವಾದ ಮಂಡನೆ ಮಾಡಿ, ಅವರಿಗೆ ಜಾಮೀನು ಕೊಡಿಸಿದ್ದಾರೆ. ಪೊಲೀಸರ ಕ್ರಮದ ವಿರುದ್ಧ ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

English summary
Costal Karnataka man arrested for bashing Karnataka power minister DK Shivakumar. The outburst of Giridhar Rai of Sullia was due to power outages in his locality.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X