ಮಲಯಾಳಂ ಕಡ್ಡಾಯ ನೀತಿ, ಕಾಸರಗೋಡಿನ ಕನ್ನಡಕ್ಕೆ ಗಂಡಾಂತರ

By: ಐಸಾಕ್ ರಿಚರ್ಡ್
Subscribe to Oneindia Kannada

ಕಾಸರಗೋಡು, ಮೇ 19: ಕೇರಳ ರಾಜ್ಯದ ಕಾಸರಗೋಡಿನಲ್ಲಿ ಮಾತ್ರವಲ್ಲ ವಯನಾಡಿನಲ್ಲೂ ಕನ್ನಡಿಗರಿದ್ದಾರೆ. ಅದೂ ಬರೋಬ್ಬರಿ ಎಂಬತ್ತು ಸಾವಿರಕ್ಕಿಂತಲೂ ಹೆಚ್ಚು. ಆದರೆ ಈಗ ಇವರೆಲ್ಲಾ ಮಲಯಾಳಂ ಕಲಿತು ಮಲಯಾಳಿಗಳಾಗಿ ಬದಲಾಗಿದ್ದಾರೆ. ಮಾತ್ರವಲ್ಲ ಕನ್ನಡವನ್ನು ಮರತೇ ಬಿಟ್ಟಿದ್ದಾರೆ.

ಇದೀಗ ಇಂಥಹದ್ದೇ ಪರಿಸ್ಥಿತಿ ಕಾಸರಗೋಡಿನಲ್ಲೂ ಸೃಷ್ಠಿಯಾಗಿದೆ. ಇಲ್ಲಿನ ಜನರೂ ಇದೀಗ ಅನಿವಾರ್ಯವಾಗಿ ಮಲಯಾಳಂ ಕಲಿತು ಮಲಯಾಳಿಗಳಾಗುವ ಅನಿವಾರ್ಯತೆ ಎದುರಿಸುತ್ತಿದ್ದಾರೆ.

ವಯನಾಡಿನ ಕನ್ನಡಿಗರು ಕೇರಳ ರಾಜ್ಯ ರಚನೆಯಾಗುವ ಮೊದಲೇ ವಲಸೆ ಬಂದವರು. ವಯನಾಡಿನಲ್ಲಿ ಮಲೆಯಾಳಿಗಳು ಕಾಲೂರುವ ಮೊದಲೇ ಕನ್ನಡಿಗರು ನೆಲಸಿದ್ದರು. ವಯನಾಡಿನ ಕನ್ನಡದ ಸಂಸೃತಿಗೆ ಕ್ರಿ. ಶ. ಹದಿಮೂರನೇ ಶತಮಾನಕ್ಕಿಂತಲ್ಲೂ ಹಿಂದಿನ ಇತಿಹಾಸವಿದೆ. ಆದರೆ ಇವತ್ತಲ್ಲಿ ಕನ್ನಡ ಹುಡುಕಿದರೂ ಸಿಗುವುದಿಲ್ಲ.

Malayalam mandatory in all schools, Kasaragod’s Kannada in danger zone

ಕಾಸರಗೋಡಿಗೂ ವಯನಾಡಿನಂತೆ ಗಂಡಾಂತರ
ವಯನಾಡಿನಲ್ಲಿ ಮಲೆಯಾಳೀಕರಣದ ಪರಿಣಾಮ ಕನ್ನಡ ಭಾಷೆ ಸಂಸ್ಕೃತಿಗಾದ ದುಸ್ಥಿತಿಯೇ ಕಾಸರಗೋಡಿನ ಕನ್ನಡ ಹಾಗು ಇತರ ಸಣ್ಣಭಾಷೆ ಉಪ ಭಾಷೆಗಳಿಗೂ ಸಂಭವಿಸುತ್ತಿದೆ. ಶಿಕ್ಷಣದಲ್ಲಿ ಮಲೆಯಾಳಂ ಕಡ್ಡಾಯಗೊಂಡರೆ ಇನ್ನು ಹತ್ತು ವರ್ಷಗಳಲ್ಲಿ ಕಾಸರಗೋಡಿನಲ್ಲಿ ಕನ್ನಡ ಮರೆಯಾಗಲಿದೆ. ಜತೆಗೆ ಕಾಸರಗೋಡಿನ ಸ್ಥಳೀಯ ಭಾಷೆ-ಸಂಸ್ಕೃತಿಗಳು, ಆಚರಣೆಗಳು, ವೇಷಭೂಷಣಗಳೂ ಕಣ್ಮರೆಯಾಗಲಿವೆ.

ಕನ್ನಡಕ್ಕೆ ಇನ್ನಿಲ್ಲ ಅವಕಾಶ
ವಯನಾಡು ಜಿಲ್ಲೆಯಲ್ಲೇ ಕನ್ನಡಿಗರಿಗೆ ಮಾತೃ ಭಾಷೆ ಕನ್ನಡ ಕಲಿಯುವ ಅವಕಾಶವಿಲ್ಲ. ಮಾತೃ ಭಾಷೆ ಶಿಕ್ಷಣ ಮಾಧ್ಯಮವಾಗಬೇಕು ಎನ್ನುವ ಎಡರಂಗ ಸರಕಾರ ವಯನಾಡಿನ ಆದಿವಾಸಿಗಳ ಸಹಿತ ಅಲ್ಲಿನ ಎಲ್ಲ ಕನ್ನಡಿಗರಿಗೆ ಮಾತೃ ಭಾಷೆ ಕಡ್ಡಾಯ ಕಲಿಸಬೇಡವೇ ಎಂಬ ಪ್ರಶ್ನೆ ಉದ್ಭವಿಸುತ್ತದೆ.

ಇದೀಗ ಕಾಸರಗೋಡಿನಲ್ಲೂ ಕನ್ನಡಕ್ಕೆ ಸಂಚಾಕರ ಬಂದಿದೆ.

ಜೈನರೇ ಮೊದಲಿಗರು

ವಯನಾಡಿಗೆ ವಲಸೆ ಬಂದವರಲ್ಲಿ ಕನ್ನಡಿಗರಾದ ಜೈನರೇ ಮೊದಲಿಗರು. ಕನ್ನಡದ ಉಪಭಾಷೆ ಎನ್ನಬಹುದಾದ ಚೆಟ್ಟಿ ಭಾಷೆಯನ್ನು ಇಲ್ಲಿನ ಮೂಲ ನಿವಾಸಿಗಳು ಬಳಸುತ್ತಿದ್ದರು. ಬಯಲುನಾಡು ಎಂಬ ಪದದಿಂದ ಮಲಯಾಳದಲ್ಲಿ ವಯಲ್ ನಾಡು, ವಯನಾಡಾಗಿ ರೊಪಾಂತರ ಹೊಂದಿತು .

ಕನ್ನಡ ಸಾಹಿತ್ಯಕ್ಕೆ ಕೊಡುಗೆ ನೀಡಿದ ಪ್ರಾಚೀನ ಕವಿಗಳು, ವಿದ್ವಾಂಸರು ವಯನಾಡಿನಲ್ಲಿದ್ದರು. ಈಗ ಕೂಡ ಕೇರಳದ ಪ್ರಸಿದ್ಧ ಪತ್ರಕರ್ತ, ರಾಜಕೀಯ ಧುರೀಣ, ಸಂಸದ ಎಂ.ಪಿ ವೀರೇಂದ್ರಕುಮಾರ್ ಸಹಿತ ಹಲವು ಗಣ್ಯರು ವಯನಾಡಿನ ಜೈನ ಸಮಾಜಕ್ಕೆ ಸೇರಿದ ಕನ್ನಡಿಗರು.

ಹೊಯ್ಸಳ ಶೈಲಿಯ ಪ್ರಾಚೀನ ಬಸದಿಗಳು, ದೇವಾಲಯಗಳಲ್ಲಿ ಕನ್ನಡ ಸಂಸ್ಕೃತಿಯ ಕುರುಹುಗಳಿವೆ. ಮಲೆಯಾಳೀಕರಣಗೊಳ್ಳುತ್ತಿರುವ ಹೆಚ್ಚಿನ ಸ್ಥಳನಾಮಗಳು ಕನ್ನಡ ಮೂಲ ಹೊಂದಿದ್ದು, ಕೆಲವು ಇನ್ನು ಮೂಲರೂಪದಲ್ಲಿ ಉಳಿದಿವೆ.

ಭಾಷಾವಾರು ಪ್ರಾಂತ್ಯ ರಚನೆಯ ಸಂದರ್ಭ ವಯನಾಡು ಕೇರಳಕ್ಕೆ ಸೇರಿದರೂ, ಕಾಸರಗೋಡಿನಂತೆ ವಿವಾದವಾಗಲಿಲ್ಲ. ಕಾಸರಗೋಡಿನಲ್ಲಿ ಕನ್ನಡ ಶಾಲೆಗಳ ಕಾರಣದಿಂದ ಅಲ್ಪಸ್ವಲ್ಪ ಕನ್ನಡ ಉಳಿದುಕೊಂಡಿತ್ತು. ಕನ್ನಡ ಶಾಲೆಗಳಲ್ಲಿ ಕಲಿತವರಿಂದ ಸ್ಥಳೀಯ ತುಳು, ಕೊಂಕಣಿ, ಮಲಯಾಳಿ, ಬ್ಯಾರಿ ಭಾಷೆ ಸಂಸ್ಕೃತಿಗಳಿಗೆ ವಿಶೇಷ ಧಕ್ಕೆಯೇನೂ ಸಂಭವಿಸಲಿಲ್ಲ.

ಆದರೆ ವಯನಾಡಿನಲ್ಲಿ ಮಲೆಯಾಳ ಶಾಲೆಗಳು ಸ್ಥಾಪನೆಯಾದುದರಿಂದ ಕನ್ನಡಿಗರು ಮಲೆಯಾಳಂನ್ನೇ ಕಲಿತರು. ಮೂಲ ನಿವಾಸಿಗಳ ಭಾಷೆಯೂ ಮಲೆಯಾಳೀಕರಣಕ್ಕೆ ತುತ್ತಾಗಿ ಹೋಯಿತು.

ಇದೀಗ ಕಾಸರಗೋಡಿನ ಸರದಿ. ಇಲ್ಲಿನ ಕನ್ನಡ ಯಾವಾಗ ಮರೆಯಾಗುತ್ತದೋ ಗೊತ್ತಿಲ್ಲ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The Kerala government had promulgated an ordinance on April 11, making Malayalam compulsory in all the schools up to Class 10. This step is dangerous to the life of Kannada in Kerala's border district of Kasaragod.
Please Wait while comments are loading...