ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗ್ಳೂರಿನ ಗುರುಪುರ ನದಿಗೆ ತ್ಯಾಜ್ಯ, ಜಲಚರಗಳ ಮಾರಣಹೋಮ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಮೇ 17 : ನಗರದಿಂದ 15 ಕಿ ಮೀ ದೂರದಲ್ಲಿರುವ ಬಜ್ಪೆ ಬಳಿಯ ಮಳವೂರು ಗ್ರಾಮದ ಗುರುಪುರ ನದಿಯಲ್ಲಿ ಕಲುಷಿತ, ತ್ಯಾಜ್ಯ ನೀರಿನಿಂದಾಗಿ ಹಲವು ಮೀನುಗಳು ಸಾವನ್ನಪ್ಪಿವೆ.

ಮಳವೂರಿನ ವೆಂಟೆಂಡ್ ಡ್ಯಾಂ ಬಳಿ ಮೀನುಗಳು ಸೇರಿದಂತೆ ಹಲವು ಜಲಚರಗಳು ಸತ್ತು ತೇಲುತ್ತಿರುವುದು ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯರು ನೀಡಿದ ದೂರಿನ ಮೇರೆಗೆ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಭೇಟಿ ನೀಡಿ, ಪರೀಕ್ಷೆ ನಡೆಸಲು ನೀರಿನ ಮಾದರಿಗಳನ್ನು ಸಂಗ್ರಹಿಸಿಕೊಂಡು ಹೋಗಿದ್ದಾರೆ.

Malavoor river water turns black, aquatic animals dead

ಕಳೆದ ಎರಡು ದಿನಗಳಿಂದ ನೀರಿನಲ್ಲಿ ಮೀನುಗಳು ಸೇರಿದಂತೆ ಜಲಚರಗಳು ಸತ್ತು ತೇಲುತ್ತಿಡುತ್ತಿವೆ. ಇನ್ನು ಕೆಲವು ಉಸಿರಾಟದ ತೊಂದರೆಯಿಂದಾಗಿ ಒದ್ದಾಡುತ್ತಿರುವುದು ಕಂಡು ಬಂದಿದೆ ಎಂದು ಸ್ಥಳೀಯ ನಿವಾಸಿ ಪ್ರಶಾಂತ್ ಶೆಟ್ಟಿ ತಿಳಿಸಿದ್ದಾರೆ.

ಮೂರು ದಿನಗಳ ಹಿಂದೆಯಷ್ಟೇ ಇಲ್ಲಿ ವಿಶೇಷ ತಳಿಯ ಮೂರು ದನಗಳು ಸಾವನ್ನಪ್ಪಿದ್ದವು. ಗುರುಪುರ ನದಿ ತಟದ ನೀರನ್ನು ಕುಡಿದು ಇವುಗಳು ಸಾವನ್ನಪ್ಪಿವೆ ಎಂದು ಸ್ಥಳೀಯರು ಆರೋಪಿಸಿದ್ದರು.

ಈ ನಗರಕ್ಕೆ ಒಂದರ ಹಿಂದೆ ಒಂದರಂತೆ ಸರತಿ ಸಾಲಿನಲ್ಲಿ ಕೈಗಾರಿಕೆಗಳು ಇವೆ. ಈ ಕೈಗಾರಿಕೆಗಳು ಬಿಡುವ ವಿಷಯುಕ್ತ ನೀರು, ರಾಸಾಯನಿಕ ವಸ್ತುಗಳನ್ನು ತಪಾಸಣೆ ಮಾಡಲು ಇಲ್ಲಿ ಒಂದೇ ಒಂದು ಲ್ಯಾಬ್ ಗಳಿಲ್ಲ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Malavoor river water turns black, aquatic animals dead

ಮೂಲವುರು ಡ್ಯಾಮ್ ನಲ್ಲಿ ನೀರು ಕಲುಷಿತಗೊಂಡು 3 ವಾರ ಕಳೆದಿವೆ. ಒಂದು ವಾರದಿಂದಲೇ ಮೀನು, ಏಡಿ, ಹಾವು ಸೇರಿದಂತೆ ಜಲಚರ ಸಾಯುತ್ತಿವೆ.

ಇದೆ ರೀತಿ ಮುಂದುವರಿದರೆ ಮನುಷ್ಯನ ಜೀವಕ್ಕೆ ಅಪಾಯವಿದೆ. ಇಷ್ಟೆಲ್ಲ ಆದರೂ ಕೂಡ ಡಿಸಿ ಸಾಯೇಬ್ರು ಕ್ರಮಕೈಗೊಳ್ಳದಿರಲು ವಿಪರ್ಯಾಸದ ಸಂಗತಿ.

{promotion-urls}

English summary
In a shocking instance of pollution, the water in the newly-inaugurated Malavoor dam here has turned black and poisonous with several fish and cattles are dying, due to suspected discharge of effluents from the nearby industrial area.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X