ಪಿಲಿಕುಳ ನಿಸರ್ಗಧಾಮಕ್ಕೆ ಪ್ರವಾಸ ಹೋಗಿ ಬನ್ನಿ

By: ಐಸಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಬೇಸಿಗೆ ರಜೆಯಲ್ಲಿ ಪ್ರವಾಸ ಹೋಗಲು ಯೋಜನೆ ಹಾಕುತ್ತಿರುವವರು, ಮಂಗಳೂರಿಗೆ ಬರಬಹುದು. ಮಂಗಳೂರು ನಗರದ ಹೊರವಲಯದಲ್ಲಿರುವ ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮಕ್ಕೆ ಭೇಟಿ ನೀಡಬಹುದು.

ಪ್ರವಾಸಿಗರನ್ನು ಆಕರ್ಷಿಸುವ ಪ್ರಕೃತಿ ಸೌಂದರ್ಯದ ತಾಣವಿದು. ಹಚ್ಚ ಹಸಿರಿನ ಪ್ರಕೃತಿ ತೊಟ್ಟಿಲೊಳಗೆ ನಾನಾ ಪ್ರಾಣಿ, ಪಕ್ಷಿಗಳ ಕಲರವ, ಪರಿಶುದ್ಧ ಪರಿಸರದಲ್ಲಿ ಜೀವ ವೈವಿಧ್ಯತೆಗಳ ಅಪೂರ್ವ ಸಂಗಮವಿದೆ. [ಬೇಕಲ ಕೋಟೆಗೆ ಒಂದು ದಿನದ ಪ್ರವಾಸ ಹೋಗಿ ಬನ್ನಿ]

dakshina kannada

ಪಿಲಿಕುಳ ಎನ್ನುವುದು ತುಳು ಭಾಷೆಯ ಪದ 'ಪಿಲಿ' ಎಂದರೆ ಕನ್ನಡದಲ್ಲಿ ಹುಲಿ ಎಂದು, 'ಕುಳ' ಎಂದರೆ ಕೊಳ ಎಂಬ ಅರ್ಥವನ್ನು ನೀಡುತ್ತದೆ. ಹಿಂದಿನ ಕಾಲದಲ್ಲಿ ಪಿಲಿಕುಳ ಎಂಬ ಸ್ಥಳವು ದಟ್ಟಾರಣ್ಯವಾಗಿತ್ತು. ಆಗ ಹೆಚ್ಚಿನ ಸಂಖ್ಯೆಯ ಹುಲಿಗಳು ಅಲ್ಲಿದ್ದವು ಆದ್ದರಿಂದ, ಅದಕ್ಕೆ ಪಿಲಿಕೊಳ ಎಂಬ ಹೆಸರು ಬಂದಿತು. [ಭಾವೈಕ್ಯತೆಯ ಸಂಗಮ ಕೊಡಗಿನ ಎಮ್ಮೆಮಾಡು ದರ್ಗಾ]

370 ಎಕರೆಯಲ್ಲಿದೆ ಉದ್ಯಾನ : 370 ಎಕರೆಯಲ್ಲಿ ಪಿಲಿಕುಳ ನಿಸರ್ಗಧಾಮವಿದೆ. ಸಸ್ಯಧಾಮ, ಮತ್ಸ್ಯಾಲಯ, ಸಂಸ್ಕೃತಿ ಗ್ರಾಮ, ಕರಕುಶಲ ಗ್ರಾಮ, ಪ್ರಾದೇಶಿಕ ವಿಜ್ಞಾನ ಕೇಂದ್ರ, ಅಮ್ಯೂಸ್ ಮೆಂಟ್ ಪಾರ್ಕ್, ಗಾಲ್ಫ್ ಕೋರ್ಸ್, ಪ್ರವಾಸಿ ಕುಟೀರ ( ರೆಸಾರ್ಟ್), ದೋಣಿ ವಿಹಾರ ಮುಂತಾದ ಆಕರ್ಷಣೆಗಳು ಇಲ್ಲಿವೆ. [ಪ್ರೀತಿ ಪಾತ್ರರೊಂದಿಗೆ ಪ್ರವಾಸದ ಐಡಿಯಾ ತಲೆಯಲ್ಲಿದೆಯೇ?]

150 ಎಕರೆಯ ಮೃಗಾಲಯದಲ್ಲಿ ಹುಲಿ, ಸಿಂಹ, ಚಿರತೆ, ಕರಡಿ, ಆನೆ, ಜಿಂಕೆ, ಕಡವೆ, ಕಾಡುಕುರಿ ಸಹಿತ 400ಕ್ಕೂ ಹೆಚ್ಚು ವನ್ಯ ಪ್ರಾಣಿಗಳಿವೆ, ಪಕ್ಷಿಗಳಿವೆ. 15ಕ್ಕಿಂತಲೂ ಹೆಚ್ಚು ಕಾಳಿಂಗ ಸರ್ಪಗಳಿವೆ. ಸಸ್ಯಧಾಮದಲ್ಲಿ 282 ಅಪರೂಪದ ಜಾತಿಗೆ ಸೇರಿದ ಸಸ್ಯಗಳಿವೆ. 60000ಕ್ಕೂ ಅಧಿಕ ಗಿಡಗಳಿವೆ. ಪಶ್ಚಿಮ ಘಟ್ಟ ಕರಾವಳಿ ಪ್ರದೇಶದ 82ಕ್ಕೂ ಅಧಿಕ ಜಾತಿಯ ಸಿಹಿ ನೀರಿನ ಮೀನು ತಳಿಗಳನ್ನು ಇಲ್ಲಿ ನೋಡಬಹುದು. [ಪಿಲಿಕುಳ ನಿಸರ್ಗಧಾಮ ವೆಬ್ ಸೈಟ್]

ಕಲಾ ಗ್ರಾಮ : ತುಳು ನಾಡಿನ ಸಂಸ್ಕೃತಿಯನ್ನು ಉಳಿಸಿ ಬೆಳೆಸಲು ಇಲ್ಲಿ ಕಲಾಗ್ರಾಮ ನಿರ್ಮಿಸಲಾಗಿದೆ. ಇಲ್ಲಿ ಗ್ರಾಮದಲ್ಲಿ ಗ್ರಾಮೀಣ ಪರಿಸರವನ್ನು ಬಿಂಬಿಸುವ ಅದ್ಭುತ ಕಲಾಕೃತಿಗಳಿದ್ದು, ದಕ್ಷಿಣ ಕನ್ನಡ ಜಿಲ್ಲೆಯ ಸಂಸ್ಕೃತಿಗೆ ಕನ್ನಡಿ ಹಿಡಿಯುತ್ತದೆ.

-
-
-
-
-
-
-
-

ಗುತ್ತಿಗೆ ಮನೆ, ಕೊಟ್ಟಿಗೆ, ಗದ್ದೆಯಲ್ಲಿ ಕಂಬಳ, ಮನೆಯ ಕುಂಬಾರಿಕೆ, ಕಮ್ಮಾರಿಕೆ ಹೀಗೆ ಹಲವು ವೃತ್ತಿಗಳ ಕಲಾಕೃತಿಗಳಿವೆ. ವಿಜ್ಞಾನದ ಮ್ಯೂಸಿಯಂ, ಅಮ್ಯೂಸ್ ಮೆಂಟ್ ಪಾರ್ಕ್ ಮತ್ತು ವಾಟರ್ ಪಾರ್ಕ್, ಜಂಗಲ್ ಲಾಡ್ಜ್ ಮತ್ತು ರೆಸಾರ್ಟ್‌ಗಳು ಪ್ರವಾಸಿಗರಿಗೆ ಲಭ್ಯವಿದೆ. ದೊಡ್ಡ ಕೆರೆಯಲ್ಲಿ ದೋಣಿ ವಿಹಾರವನ್ನೂ ಮಾಡಬಹುದು.

ಎಷ್ಟು ದೂರ? : ಮಂಗಳೂರು ನಗರದಿಂದ ನಂತೂರು ಮಾರ್ಗವಾಗಿ ಸಾಗಿ ಮುಡುಷೆದ್ಡೆ ಜಂಕ್ಷನ್ ಇಂದ ಎಡಕ್ಕೆ ತಿರುಗಿದರೆ ಪಿಲಿಕುಳ ನಿಸರ್ಗಧಾಮ ತಲುಪಬಹುದು. ಸಿಟಿ ಬಸ್ ಸೌಲಭ್ಯವೂ ಇದೆ. ಮಂಗಳೂರಿಗೆ ಬಂದರೆ ಖಾಸಗಿ ಬಸ್‌ಗಳ ಮೂಲಕವೂ ತಲುಪಬಹುದು. ಖಾಸಗಿ ವಾಹನಗಳಲ್ಲೂ ನೇರವಾಗಿ ಪ್ರವಾಸಿಧಾಮ ತಲುಪಬಹುದು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Pilikula Nisarga Dhama is a major eco-education and tourism development project promoted by the district administration of Dakshina Kannada, in Mangaluru, Karnataka.
Please Wait while comments are loading...