ಭಾಗಶಃ ಚಂದ್ರಗ್ರಹಣ, ಕರಾವಳಿ ದೇವಾಲಯಗಳ ದರ್ಶನದಲ್ಲಿ ಬದಲಾವಣೆ

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 7: ಇಂದು ಭಾಗಶಃ ಚಂದ್ರಗ್ರಹಣ ಹಿನ್ನೆಲೆಯಲ್ಲಿ ಕರಾವಳಿಯ ದೇವಾಲಯಗಳು ಅವಧಿಗೆ ಮುಂಚೆಯೇ ಬಾಗಿಲು ಹಾಕಲಿವೆ. ಕರಾವಳಿಯ ಪ್ರಮುಖ ಧಾರ್ಮಿಕ ಕ್ಷೇತ್ರಗಳಾದ ಶ್ರೀ ಕ್ಷೇತ್ರ ಧರ್ಮಸ್ಥಳ, ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ, ಶ್ರೀ ಕ್ಷೇತ್ರ ಕಟೀಲು ಸೇರಿದಂತೆ ಕರಾವಳಿಯ ದೇವಾಲಯಗಳ ಅವಧಿಗೆ ಮುನ್ನವೇ ದೇವರ ದರ್ಶನ ಸ್ಥಗಿತಗೊಳಿಸಲಿವೆ

ಹನ್ನೆರಡು ರಾಶಿಯವರ ಮೇಲೆ ಚಂದ್ರ ಗ್ರಹಣದ ಪರಿಣಾಮಗಳು..

ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಚಂದ್ರ ಗ್ರಹಣ ಹಿನ್ನೆಲೆಯಲ್ಲಿ ಇಂದು ವಿಶೇಷ ಪೂಜೆ ನಡೆಸಲಾಯಿತು. ಇಲ್ಲಿ ಇಂದು ರಾತ್ರಿ 8.30ರ ಬದಲಾಗಿ 8 ಗಂಟೆಗೇ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ.

Major temples of Dakshina Kannada to close down early due to Lunar Eclipse

ಶ್ರೀ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ದೇವರ ದರ್ಶನ ಸಂಜೆ 6 ಗಂಟೆಗೆ ಸ್ಥಗಿತಗೊಳ್ಳಲಿದೆ. ಶ್ರೀ ಕ್ಷೇತ್ರ ಕಟೀಲು ದುರ್ಗಾ ಪರಮೇಶ್ವರಿ ದೇವಾಲಯದಲ್ಲಿಯೂ ಇಂದು ಅವಧಿಗೆ ಮುನ್ನವೇ ದೇವಾಲಯದ ಬಾಗಿಲು ಹಾಕಲಾಗುತ್ತದೆ.

ಇಂದು ಮಧ್ಯಾಹ್ನದಿಂದ ತಿರುಪತಿ ದೇವಾಲಯ ಬಂದ್!

NO! Mangaluru-Sharjah flight for three months | OneIndia Kannada

ಇನ್ನು ಮಂಗಳೂರಿನ ಕುದ್ರೋಳಿ ಗೋಕರ್ಣನಾಥೇಶ್ವರ ದೇವಾಲಯದಲ್ಲಿಯೂ ಈಗಾಗಲೇ ವಿಶೇಷ ಪೂಜೆ ನೆರವೇರಿದ್ದು, ರಾತ್ರಿ 8 ಗಂಟೆಯ ಬದಲಾಗಿ ಇಂದು ಸಂಜೆ 5 ಗಂಟೆಗೇ ದೇವಾಲಯದ ಬಾಗಿಲು ಮುಚ್ಚಲಾಗುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Major temples of Dakshina Kannada to close down early due to Lunar Eclipse today. Kukke subramanya temple, Shri Kshetra Darmasthala temple and Kudroli temple have made their closing time early.
Please Wait while comments are loading...