ಮಂಗ್ಳೂರಿನಲ್ಲಿ ಕೋಕೆನ್ ಮಾರಾಟ ಮಾಡುತ್ತಿದ್ದ ಆಫ್ರಿಕಾ ವ್ಯಕ್ತಿ ಬಂಧನ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಜನವರಿ.17 : ಮಾದಕ ಪದಾರ್ಥವಾದ ಕೋಕೆನ್ ಮಾರಾಟ ಮಾಡಲು ಯತ್ನಿಸುತ್ತಿದ್ದ ಆಫ್ರಿಕಾದ ಘಾನಾ ವ್ಯಕ್ತಿಯನ್ನು ಮಂಗಳೂರು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಚಿಗೋಯಿ ಫ್ರಾನ್ಸಿಸ್ ಕ್ರಿಸ್ಟೋಫರ್ (37) ಎಂಬ ಆರೋಪಿಯನ್ನು ಬಂಧಿಸಿ. ಈತನಿಂದ 5.5 ಲಕ್ಷ ಮೌಲ್ಯದ ಕೋಕೆನ್, 2 ಮೊಬೈಲ್ ಫೋನುಗಳು ಹಾಗೂ 3,300 ರೂ. ಹೀಗೆ ಒಟ್ಟು ರೂ. 5,55,300 ಮೌಲ್ಯದ ಸೊತ್ತನ್ನು ವಶಪಡಿಸಿಕೊಂಡಿದ್ದಾರೆ.

Magaluru CCB police arrest Ghana national with cocaine worth Rs 5.5 lac

ಈ ಆರೋಪಿ ಗೋವಾ ಮೂಲಕ ಮಂಗಳೂರು ನಗರಕ್ಕೆ ಮಾದಕ ವಸ್ತುವಾದ ಕೋಕೆನ್ ಮಾರಾಟ ಮಾಡಲು ಬಂದು ಗ್ರಾಹಕರನ್ನು ಹುಡುಕಾಡುತ್ತಿದ್ದ.

ಈ ಬಗ್ಗೆ ಮಾಹಿತಿ ಪಡೆದ ಸಿಸಿಬಿ ಪೊಲೀಸರು ಮಂಗಳೂರು ನಗರದ ಮಲ್ಲಿಕಟ್ಟೆ ಲೋಬೋ ಲೇನ್ ರಸ್ತೆಯಲ್ಲಿ ಮಾದಕ ವಸ್ತುವಾದ ಕೋಕೆನ್ ವಶಪಡಿಸಿಕೊಂಡಿದ್ದಾರೆ.

ಈತ ಸುಮಾರು 2 ವರ್ಷದ ಹಿಂದೆ ಭಾರತಕ್ಕೆ ಬಿಸಿನೆಸ್ ವೀಸಾದಲ್ಲಿ ಬಂದವನು ನಂತರ ಘಾನಾಕ್ಕೆ ವಾಪಸ್ಸು ಹೋಗದೇ ಅನಧಿಕೃತವಾಗಿ ಭಾರತದಲ್ಲಿ ವಾಸ್ತವ್ಯವಿದ್ದುಕೊಂಡು ಈ ರೀತಿ ಕೋಕೆನ್ ಅನ್ನು ಸಾರ್ವಜನಿಕರಿಗೆ ಮಾರಾಟ ಮಾಡುತಿದ್ದಾನೆ.

ಈಗಾಗಲೇ ಈ ಹಿಂದೆ 2-3 ಬಾರಿ ಈತನು ಮಂಗಳೂರಿಗೆ ಬಂದು ಹಲವಾರು ಮಂದಿಗೆ ಕೋಕೆನ್ ಮಾರಾಟ ಮಾಡಿದ ಬಗ್ಗೆ ತಿಳಿದುಬಂದಿರುತ್ತದೆ. ಆರೋಪಿ ಹಾಗೂ ವಶಪಡಿಸಿಕೊಂಡ ಸೊತ್ತನ್ನು ಮುಂದಿನ ಕ್ರಮಕ್ಕಾಗಿ ಮಂಗಳೂರು ಪೂರ್ವ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The city crime branch (CCB) on Monday January 16 arrested a Ghana national for trying to sell cocaine, a high value contraband substance, worth Rs 5.5 lac. The accused has been identified as Chigozie Francis Christopher (37).
Please Wait while comments are loading...