ಮಂಗಳೂರು ಕಾವ್ಯಾ ಆತ್ಮಹತ್ಯೆ ಪ್ರಕರಣ: ಸಿಸಿಟಿವಿ ಫುಟೇಜ್ ನಲ್ಲೇನಿದೆ?

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಆಗಸ್ಟ್ 9: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಸಾವಿನ ಸುತ್ತ ಹುಟ್ಟಿಕೊಂಡಿರುವ ಸಂಶಯದ ಸಂಶಯ ನಿವಾರಿಸುವ ಕೆಲವೊಂದು ಸಿಸಿಟಿವಿ ವಿಡಿಯೋಗಳು 'ಒನ್ ಇಂಡಿಯಾ'ಕ್ಕೆ ಲಭ್ಯವಾಗಿದೆ .

ಕಾವ್ಯಳ ಸಾವಿನ ತನಿಖೆ ಸೂಕ್ತವಾಗಿ ನಡೆಸುತ್ತಿಲ್ಲವೆಂದು ಕಣ್ಣೀರಿಟ್ಟ ತಾಯಿ

ಜುಲೈ 20 ರಂದು ಮೂಡಬಿದರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯ ಸಂಶಯಾಸ್ಪದ ಸಾವಿನ ಸುತ್ತ ಇದ್ದ ಅನುಮಾನದ ಹುತ್ತ ದಿನದಿಂದ ದಿನಕ್ಕೆ ಬೆಳೆಯುತ್ತಿದ್ದಂತೆ ಇದೀಗ ಕಾಲೇಜಿನ ಅಡಳಿತ ಮಂಡಳಿ ಕೆಲವೊಂದು ಸಿಸಿಟಿವಿ ಫುಟೇಜ್ ಗಳನ್ನು ಬಿಡುಗಡೆ ಮಾಡಿದೆ.

Magaluru Alvas student Kavya Poojary's latest cc camera footages released

ಕಾವ್ಯ ಸಾವಿನ ಕುರಿತಂತೆ ಸಾಕಷ್ಟು ಅನುಮಾನಗಳನ್ನು‌ ಕಾವ್ಯ ಪೋಷಕರು ವ್ಯಕ್ತಪಡಿಸಿದ್ದರು ಮತ್ತು ಇದೊಂದು ವ್ಯವಸ್ಥಿತ ಕೊಲೆ ಆರೋಪಿಸಿದ್ದರು. ಇದು ಮಾದ್ಯಮಗಳು ಮತ್ತು ಸಾಮಾಜಿಕ ಜಾಲತಾಣಗಳು ಸೇರಿದಂತೆ ಸಾರ್ವಜನಿಕ ವಲಯದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿತ್ತು.

ಇದೀಗ ಕಾವ್ಯಳ ಸಂಶಯಾಸ್ಪದ ಸಾವಿನ ಬಳಿಕ ಆಳ್ವಾಸ್ ವಿದ್ಯಾಸಂಸ್ಥೆ ಮತ್ತು ಆಸ್ಪತ್ರೆಯಲ್ಲಿ ನಡೆದ ವಿದ್ಯಮಾನಗಳು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು ಇದನ್ನು ಇಂದು ಬಿಡುಗಡೆ ಮಾಡಲಾಗಿದೆ.

Magaluru Alvas student Kavya Poojary's latest cc camera footages released

ಸಿಸಿಟಿವಿ ವಿಡಿಯೋ 1 : ಸಂಜೆ 07: 27 ಕಾವ್ಯಳನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ಸಾಗಿಸುವ ದೃಶ್ಯ ಕಂಡು ಬಂದಿದೆ.
ಸಿಸಿಟಿವಿ ವಿಡಿಯೋ 2 : ಸಂಜೆ 07: 44 ಕಾವ್ಯಳ ದೇಹವನ್ನು ಆಸ್ಪತ್ರೆ ಒಳಗೆ ಸಾಗಿಸುತ್ತಿರುವ ದೃಶ್ಯ ಸೆರೆಯಾಗಿದೆ.
ಸಿಸಿಟಿವಿ ವಿಡಿಯೋ 3 : 07 .45 ಕ್ಕೆ ಆಸ್ಪತ್ರೆ ಒಳಗೆ ಕಾವ್ಯಳಿಗೆ ತುರ್ತು ಚಿಕಿತ್ಸೆ ನೀಡುವುದು.
ಸಿಸಿಟಿವಿ ವಿಡಿಯೋ 4 : ರಾತ್ರಿ 08.46 ಕ್ಕೆ ಕಾವ್ಯ ಹೆತ್ತವರು ಆಸ್ಪತ್ರೆಯ ಹೊರಭಾಗದಲ್ಲಿ ರೋದಿಸುತ್ತಿರುವುದು ದಾಖಲಾಗಿದೆ.
ಸಿಸಿಟಿವಿ ವಿಡಿಯೋ 5 : 08.06 ರಲ್ಲಿ ಕಾವ್ಯಾ ಮೃತ ದೇಹವನ್ನು ಶವಾಗಾರಕ್ಕೆ ಸಾಗಿಸುವುದು ಸೆರೆಯಾಗಿದೆ.

ಕಾವ್ಯಳಿಗೆ ಲೈಂಗಿಕ ಕಿರುಕುಳ ನೀಡಿ ಕೊಲೆ, ಬೇಬಿ ಪೂಜಾರಿ ಆರೋಪ

ಇಂದು (ಆಗಸ್ಟ್ 9) ಕಾವ್ಯಾ ಪರ ನ್ಯಾಯಕ್ಕೆ ಆಗ್ರಹಿಸಿ ಸಮಾನ ಮನಸ್ಕ ಸಂಘಟನೆಗಳು ಮಂಗಳೂರಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿರುವಾಗಲೇ ಈ ವಿಡಿಯೋ ದೃಶ್ಯವಳಿಗಳು ಬಿಡುಗಡೆಗೊಂಡಿರುವುದು ಕೂತೂಹಲಕ್ಕೆ ಕಾರಣವಾಗಿದೆ.

ಅಳ್ವಾಸ ಕಾಲೇಜು ವಿದ್ಯಾರ್ಥಿನಿ ಸಾವಿನ ಸುತ್ತ ಅನುಮಾನದ ಹುತ್ತ | Oneindia Kannada

ಕಾವ್ಯ ಸಾವು ಪ್ರಕರಣವನ್ನು ಪೋಲಿಸ್ ಇಲಾಖೆ ವಿಶೇಷ ತನಿಖಾ ತಂಡ ರಚಿಸಿ ತನಿಖೆ ಮಾಡುತ್ತಿದ್ದಾರೆ.ಈ ತನಿಖೆಯ ಬಳಿಕವೇ ನಿಜಾಂಶ ಬಯಲಿಗೆ ಬರಲಿದೆ. ಈ ಪ್ರಕರಣದಲ್ಲಿ ಕಾವ್ಯ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಯೇ? ಅಥವಾ ಇದು ಕೊಲೆ ಯೇ? ಆತ್ಮಹತ್ಯೆಗೆ ಕಾರಣವೇನು? ಈ ಎಲ್ಲಾ ಪ್ರಶ್ನೆಗಳಿಗೆ ತನಿಖೆಯ ಬಳಿಕವೇ ಉತ್ತರ ದೊರಕಲಿದೆ .

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Mangaluru's Alvas college student Kavya Poojary's latest cc camera footages released. Footages of Taking her body to the hospital, Her body been taken to Mortuary have been released and have now become viral.
Please Wait while comments are loading...