ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇಂಟರ್ ಲಾಕ್ ನಿಂದ ಬಡಿದು ಮಂಗಳೂರಿನಲ್ಲಿ ಕೊಲೆಗೆ ಯತ್ನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜನವರಿ 31: ಇಂಟರಲಾಕ್ ಮೂಲಕ ಮಸೀದಿ ಅಧ್ಯಕ್ಷನ ತಲೆಗೆ ಬಡಿದು ಗಂಭೀರ ಹಲ್ಲೆ ನಡೆಸಿ ಕೊಲೆಗೆ ಯತ್ನಿಸಿದ ಘಟನೆ ಉಳ್ಳಾಲದ ಪಿಲಾರು ಮದನಿ ಮದರಸ ಸಮೀಪ ನಡೆದಿದೆ.

ಪಿಲಾರು ಮದನಿ ಮದರಸದ ಅಧ್ಯಕ್ಷ ಮಹಮ್ಮದ್ ಅಸ್ಲಂ ಕೆ.ಎಂ ನೂರುಲ್ಲಾ ಕೊಲೆಯತ್ನಕ್ಕೆ ಒಳಗಾದ ವ್ಯಕ್ತಿ. ಪಿಲಾರು ದಾರಂದ ಬಾಗಿಲು ನಿವಾಸಿ ಪಿ.ಸಿ.ಝಾಕಿರ್ ಕೃತ್ಯ ಎಸಗಿದ ಆರೋಪಿ ಎನ್ನಲಾಗಿದೆ.[ಉಳ್ಳಾಲ: ಲಾರಿ ಡಿಕ್ಕಿ ಹೊಡೆಸಿ ಕೊಲೆ ಯತ್ನ]

Madrassa president in ullal attacked by youth, escaped from death.

ಸೋಮವಾರ ಸಂಜೆ ವೇಳೆ ಮದರಸ ಸಮೀಪ ಪ್ರಾರ್ಥನೆಗೆಂದು ಬಂದಿದ್ದ ನೂರುಲ್ಲಾ ಅವರು ಮದರಸ ಹೊರಗೆ ನಿಂತಿದ್ದ ಸಂದರ್ಭದಲ್ಲಿ ಬೈಕಿನಲ್ಲಿ ಬಂದ ಆರೋಪಿ ಝಾಕಿರ್ ಬೈಕಿನಿಂದ ಗುದ್ದಿ ಕೆಳಗೆ ಉರುಳಿಸಿದ್ದಾನೆ. ಆ ಬಳಿಕ ಸ್ಥಳದಲ್ಲಿದ್ದ ಇಂಟರ್ ಲಾಕ್‌ನಿಂದ ನೂರುಲ್ಲಾ ಅವರ ತಲೆಗೆ ಬಡಿದು ಗಾಯ ಮಾಡಿರುವುದಲ್ಲದೆ, ಜೀವಬೆದರಿಕೆಯೊಡ್ಡಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಗಾಯಗೊಂಡ ನೂರುಲ್ಲಾ ಅವರನ್ನು ತೊಕ್ಕೊಟ್ಟು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಾಗಿದೆ. ಝಾಕೀರ್ ಅನ್ನು ಸರೆಹಿಡಿಯಲು ಪೊಲೀಸರು ಜಾಲ ಬೀಸಿದ್ದಾರೆ.

English summary
Madrassa president in ullal attacked by a teen in Mangaluru. The teen attacks the president using the interlock here on Monday Jan 30th. The injured is identified as K.M Nurolla.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X