ಕಾಸರಗೋಡಿನಲ್ಲಿ ಮದ್ರಸಾ ಶಿಕ್ಷಕನ ಹತ್ಯೆ: ಇಂದು ಹರತಾಳ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು / ಕಾಸರಗೋಡು, ಮಾರ್ಚ್ 21: ಮದ್ರಸಾ ಅಧ್ಯಾಪಕನೋರ್ವನನ್ನು ತಂಡವೊಂದು ಅಧ್ಯಾಪಕರ ಕೋಣೆಗೆ ನುಗ್ಗಿ ಇರಿದು ಕೊಲೆಗೈದ ಘಟನೆ ಸೋಮವಾರ ಮಧ್ಯರಾತ್ರಿ ಕಾಸರಗೋಡಿನಲ್ಲಿ ನಡೆದಿದೆ. ಕೊಡಗು ಮೂಲದ ನಿವಾಸಿ ರಿಯಾಝ್ (30) ಕೊಲೆಗೀಡಾದ ಮದ್ರಸಾ ಅಧ್ಯಾಪಕ.

ಮಸೀದಿ ಸಮೀಪವೇ ಉಸ್ತಾದರಿಗೆ 2 ಕೊಠಡಿಗಳಿದ್ದು ಒಂದು ಕೊಠಡಿಯಲ್ಲಿ ರಿಯಾಝ್ ಉಸ್ತಾದ್ ಹಾಗೂ ಇನ್ನೊಂದು ಕೊಠಡಿಯಲ್ಲಿ ಮಸೀದಿ ಖತೀಬ್ ಆಬ್ದುಲ್ ಅಝೀಝ್ ಮುಸ್ಲಿಯಾರ್ ಮಲಗಿದ್ದರು.[ಮಂಗಳೂರು: ಮಸೀದಿಗೆ ಕಲ್ಲು ತೂರಿದ ಕಿಡಿಗೇಡಿ ಸಿಕ್ಕಿಬಿದ್ದ!]

ಮಧ್ಯರಾತ್ರಿ ಶಬ್ದ ಕೇಳಿ ಖತೀಬ್ ಉಸ್ತಾದ್ ಕೊಠಡಿ ಬಾಗಿಲು ತೆರೆಯುವಷ್ಟರಲ್ಲಿ ಯದ್ವಾತದ್ವ ಕಲ್ಲು ತೂರಾಟ ನಡೆಯುತ್ತಿತ್ತೆನ್ನಲಾಗಿದೆ. ಮೈಕ್ ಮೂಲಕ ರಿಯಾಝ್ ಉಸ್ತಾದ್ ಮೇಲೆ ಇರಿತ ನಡೆದಿದೆಯೆಂದು ಖತೀಬ್ ಉಸ್ತಾದ್ ಹೇಳಿಕೆ ನೀಡಿದರು.[ಮಂಗಳೂರು: ಸಿಡಿಮದ್ದು ತಯಾರಿ ವೇಳೆ ಸ್ಫೋಟ, ಇಬ್ಬರು ಸಾವು]

Madrasa teacher brutally kills in Kasargod

ಚೀರಾಟ ಕೇಳಿದ ಸ್ಥಳೀಯರು ಓಡಿಬಂದು, ರಕ್ತದ ಮುಡುವಿನಲ್ಲಿದ್ದ ರಿಯಾಝ್ ಉಸ್ತಾದರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸುವಷ್ಟರಲ್ಲಿ ಅವರು ಕೊನೆಯುಸಿರೆಳೆದಿದ್ದಾರೆ.

ಡಿವೈಎಸ್ಪಿ ವಿ.ಸುಕುಮಾರನ್ , ಸರ್ಕಲ್ ಇನ್ ಸ್ಪೆಕ್ಟರ್ ಅಬ್ದುಲ್ ರಹಮಾನ್, ಉತ್ತರ ವಲಯ ಎಡಿ ಜಿಪಿ ರಾಜೇಶ್ ದಿವಾನ್ , ಐಜಿ ಮಹಿಪಾಲ್ ಯಾದವ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.[ಯೋಗಿ ಆದಿತ್ಯನಾಥ್ ಗೂ ಮಂಗಳೂರಿನ ಕದ್ರಿಗೂ ಏನಿದು ನಂಟು?]

ಕೊಲೆಯನ್ನು ಖಂಡಿಸಿ ಕಾಸರಗೋಡು ವಿಧಾನಸಭಾ ಕ್ಷೇತ್ರದಲ್ಲಿ ಇಂದು (ಮಾರ್ಚ್ 21)ಬೆಳಿಗ್ಗೆ ಆರರಿಂದ ಸಂಜೆ ಆರರ ತನಕ ಮುಸ್ಲಿಂ ಲೀಗ್ ಹರತಾಳಕ್ಕೆ ಕರೆ ನೀಡಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುನ್ನಚ್ಚರಿಕಾ ಕ್ರಮಗಳನ್ನು ಕೈಗೊಂಡಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Madrasa teacher killed brutally at kasargod and body found in city outskirts. The Muslim league protested after the incident. Tight security ensure at Kasargod.
Please Wait while comments are loading...