ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಿಜೆಪಿ ಸೋಲಿಸಲು ಮೈತ್ರಿಗೆ ಎಸ್ ಡಿಪಿಐ ಸಿದ್ಧ: ಎಂ.ಕೆ. ಫೈಝಿ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್. 26: ದೇಶದ ಕೋಮುವಾದಿಗಳ ಪಕ್ಷವಾದ ಬಿಜೆಪಿಯನ್ನು ಸೋಲಿಸುವ ಸಲುವಾಗಿ ಯಾವ ಪಕ್ಷವಾದರೂ ಮೈತ್ರಿಗೆ ಎಸ್ ಡಿಪಿಐ ಸಿದ್ಧವಿದೆ ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಂಕೆ ಫೈಝಿ ತಿಳಿಸಿದ್ದಾರೆ.

ಮಂಗಳೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ದೇಶದಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ಅಘೋಷಿತ ತುರ್ತು ಪರಿಸ್ಥಿತಿ ವಾತಾವರಣ ಸೃಷ್ಟಿ ಮಾಡಿದೆ. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಕಳೆದ ನಾಲ್ಕು ವರ್ಷದಲ್ಲಿ ದೇಶದಲ್ಲಿ ಅರಾಜಕತೆ ಸೃಷ್ಟಿಯಾಗಿದೆ.

ಕಾಂಗ್ರೆಸ್‌ ಎರಚಿದ ಕೆಸರಿನಲ್ಲಿ ಕಮಲ ಅರಳಿ ಹೊಳೆಯುತ್ತಿದೆ: ಮೋದಿಕಾಂಗ್ರೆಸ್‌ ಎರಚಿದ ಕೆಸರಿನಲ್ಲಿ ಕಮಲ ಅರಳಿ ಹೊಳೆಯುತ್ತಿದೆ: ಮೋದಿ

ಸರಕಾರದ ನೀತಿ, ಕಾರ್ಯಕ್ರಮ, ಉದ್ದೇಶಗಳನ್ನು ಪ್ರಶ್ನಿಸುವವರನ್ನು ಬಂಧಿಸುವ ಪ್ರಕ್ರಿಯೆ ಹೆಚ್ಚುತ್ತಿವೆ. ನಗರ ನಕ್ಸಲ್ ಹೆಸರಿನಲ್ಲಿ ಬೆದರಿಸುವ ಪ್ರಕ್ರಿಯೆ ಆರಂಭವಾಗಿದೆ. ನಗರ ನಕ್ಸಲ್ ಎಂದು ಹಣೆಪಟ್ಟಿ ಕಟ್ಟಿ ಪ್ರಗತಿಪರ ಚಿಂತಕರನ್ನು ಗುರಿಯಾಗಿಸುವ ಷಡ್ಯಂತ್ರ ನಡೆಯುತ್ತಿವೆ ಎಂದು ಫೈಝಿ ಆರೋಪಿಸಿದರು.

M K Faizy says Save nation from BJP

ಬಿಜೆಪಿ ಕೇಂದ್ರದಲ್ಲಿ ಅಧಿಕಾರಕ್ಕೆ ಏರಿದ ದಿನದಿಂದ ಜನರ ಮೇಲೆ ದೌರ್ಜನ್ಯ ಎಸಗುತ್ತಿದೆ. ತನ್ನ ಜನವಿರೋಧಿ ತಪ್ಪು ನೀತಿಗಳನ್ನು ಹೇರುತ್ತಿದೆ. ತನ್ನ ವಿಫಲತೆಗಳನ್ನು ಮರೆ ಮಾಚಲು ವಿಷಯಾಂತರದ ಮೂಲಕ ಜನರ ದಿಕ್ಕು ತಪ್ಪಿಸುತ್ತಿದೆ.

 ರಫೇಲ್ ಡೀಲ್ ಹಗರಣದಲ್ಲಿ ರಾಬರ್ಟ್ ವದ್ರಾನನ್ನು ಎಳೆತಂದ ಬಿಜೆಪಿ ರಫೇಲ್ ಡೀಲ್ ಹಗರಣದಲ್ಲಿ ರಾಬರ್ಟ್ ವದ್ರಾನನ್ನು ಎಳೆತಂದ ಬಿಜೆಪಿ

ಬಿಜೆಪಿಯ ಸೋಲಿಗೆ ಕಾಂಗ್ರೆಸ್ ನೇತೃತ್ವದ ಎಡಪಕ್ಷಗಳನ್ನೊಳಗೊಂಡ ಮೈತ್ರಿಗೆ ವೇದಿಕೆ ಸಿದ್ಧವಾದರೆ ಎಸ್ ಡಿಪಿಐ ಕೂಡ ಅದರಲ್ಲಿ ಭಾಗವಹಿಸಿ ಪೂರ್ಣ ಸಹಕಾರ ನೀಡಲಿದೆ. ದೇಶದಲ್ಲಿ ಬಿಜೆಪಿಯನ್ನು ಸೋಲಿಸಲು ನಡೆಯುವ ಎಲ್ಲಾ ಪ್ರಯತ್ನಕ್ಕೆ ನಮ್ಮ ಬೆಂಬಲವಿದೆ.

 ಬಿಹಾರ ಡಿಸಿಎಂ ಸುಶೀಲ್ ಮೋದಿ 'ಪಿತೃ ಪಕ್ಷ' ಹೇಳಿಕೆಗೆ ಹಿಗ್ಗಾಮುಗ್ಗಾ ತರಾಟೆ ಬಿಹಾರ ಡಿಸಿಎಂ ಸುಶೀಲ್ ಮೋದಿ 'ಪಿತೃ ಪಕ್ಷ' ಹೇಳಿಕೆಗೆ ಹಿಗ್ಗಾಮುಗ್ಗಾ ತರಾಟೆ

ಇಲ್ಲಿ ಕಾಂಗ್ರೆಸ್, ಎಡಪಕ್ಷಗಳ ಪ್ರಶ್ನೆ ಉದ್ಭವಿಸುವುದಿಲ್ಲ. ಬಿಜೆಪಿಯನ್ನು ಅಧಿಕಾರದಿಂದ ದೂರವಿಡಲು ಮಹಾಮೈತ್ರಿ ಅಥವಾ ತೃತೀಯ ರಂಗದೊಂದಿಗೂ ಕೈ ಜೋಡಿಸಲು ಪಕ್ಷ ಸಿದ್ಧವಿದೆ ಎಂದು ಫೈಝಿ ಸ್ಪಷ್ಟಪಡಿಸಿದರು.

English summary
Speaking to media persons in Mangaluru SDPI national president MK Faizy slams BJP. He said BJP dividing nation on the basis of religion. It is time to all other political parties to unite and save nation from BJP.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X