ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪುತ್ತೂರು ಬಳಿ ಎಲ್ ಪಿಜಿ ಗ್ಯಾಸ್ ಟ್ಯಾಂಕರ್ ಪಲ್ಟಿ, ಬಿಗುವಿನ ವಾತಾವರಣ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು,ಏಪ್ರಿಲ್,03: ಗ್ಯಾಸ್ ಟ್ಯಾಂಕರ್ ಉರುಳಿ ಬಿದ್ದು ಟ್ಯಾಂಕರಿನಲ್ಲಿದ್ದ ಎಲ್ ಪಿಜಿ ಗ್ಯಾಸ್ ಸೋರಿಕೆಯಾದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪದ ಪೆರ್ನೆ ಎಂಬಲ್ಲಿ ಇಂದು ನಡೆದಿದೆ.

ಗ್ಯಾಸ್ ಟ್ಯಾಂಕರ್ ಏಕಾಏಕಿ ಮಗುಚಿ ಬಿದ್ದ ಪರಿಣಾಮ ಮಂಗಳೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಸ್ಥಗಿತಗೊಂಡಿತು. ಕೆಲವು ಗಂಟೆಗಳಿಂದ ಬಿಗುವಿನ ವಾತಾವರಣ ತಲೆದೋರಿದ್ದು, ಆತಂಕ ಸೃಷ್ಟಿಯಾಗಿದೆ.[ಅಡುಗೆ ಅನಿಲ ಸಿಲಿಂಡರ್ ದರ ಇಳಿಕೆ, ಜೆಟ್ ಇಂಧನ ಏರಿಕೆ]

LPG gas tanker overturns near Uppinangady, Dakshina Kannada

ಈ ದುರಂತದ ವಿಷಯ ತಿಳಿದ ತಕ್ಷಣ ಪೆರ್ನೆ ಬಳಿ ಆಗಮಿಸಿದ ಅಗ್ನಿಶಾಮಕ ದಳ ಸಂಭವಿಸಬೇಕಾಗಿದ್ದ ಭಾರೀ ಅನಾಹುತವನ್ನು ತಪ್ಪಿಸಿದ್ದಾರೆ. ಆದರೂ ಟ್ಯಾಂಕರನ್ನು ಎತ್ತುವ ಕಾರ್ಯ ಇನ್ನೂ ಮುಂದುವರೆದೇ ಇದೆ.[ಪತಿ, ಪತ್ನಿ ಆದಾಯ 10 ಲಕ್ಷ ಇದ್ದರೆ ಎಲ್ ಪಿಜಿ ಸಬ್ಸಿಡಿ ಇಲ್ಲ]

ಗ್ಯಾಸ್ ಟ್ಯಾಂಕರ್ ರಸ್ತೆಗುರುಳಿದ ಪರಿಣಾಮ ಜನರಿಗೆ ಯಾವ ತೊಂದರೆಯಾಗದಂತೆ ವಾಹನಗಳು ಪರ್ಯಾಯ ಮಾರ್ಗವಾಗಿ ಸಂಚರಿಸುವಂತೆ ಸೂಚಿಸಲಾಗಿದೆ. ಹಾಗಾಗಿ ಎಲ್ಲಾ ವಾಹನಗಳು ಶಾಂತಿ ನಗರ, ಕರ್ವೇಲು, ದೋರ್ಮೆ, ಮಠಂತಬೆಟ್ಟು, ವಿನಾಯಕ ನಗರ, ಪೆರ್ನೆ, ಸೇಡಿಯಾಪು ರಸ್ತೆಯಲ್ಲಿ ಸಂಚರಿಸುತ್ತಿವೆ. ಈ ಟ್ಯಾಂಕರ್ ಬಗ್ಗೆ ಸಂಪೂರ್ಣ ಮಾಹಿತಿ ಲಭ್ಯವಾಗಿಲ್ಲ.[10 ಲಕ್ಷ ರು ವಾರ್ಷಿಕ ಆದಾಯವಿದ್ದರೆ, ಎಲ್ ಪಿಜಿ ಸಬ್ಸಿಡಿ ಖೋತಾ]

ಕೆಲವು ದಿನಗಳ ಹಿಂದೆ ಮಾರ್ಚ್ ೦೯ರಂದು ಮೈಸೂರು ತುಮಕೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕೊಮ್ಮಘಟ್ಟ ಸಮೀಪ ಥಯೋನಿಲ್ ರಾಸಾಯನಿಕ ಸಾಗಣೆ ಮಾಡುತ್ತಿದ್ದ ಬೃಹತ್ ಟ್ಯಾಂಕರ್ ಚಾಲಕನ ನಿಯಂತ್ರಣ ತಪ್ಪಿ ಉರುಳಿ ಬಿದ್ದಿತ್ತು.

English summary
LPG gas tanker overturned near Puttur Taluk, Uppinangady, Dakshina kannada on Saturday, April 02nd
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X