ಮಂಗಳೂರು : ರೈಲಿಗೆ ತಲೆಕೊಟ್ಟು ಪ್ರೇಮಿಗಳ ಆತ್ಮಹತ್ಯೆ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಏಪ್ರಿಲ್ 13 : ಪ್ರೇಮಿಗಳಿಬ್ಬರು ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಗಳೂರಿನಲ್ಲಿ ನಡೆದಿದೆ. ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ದಾಖಲಾಗಿದೆ.

ಆತ್ಮಹತ್ಯೆ ಮಾಡಿಕೊಂಡವರನ್ನು ಅಡ್ಯಾರ್ ಪದವಿನ ಎಲೆಕ್ಟ್ರಾನಿಕ್ಸ್ ಅಂಗಡಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜಯಂತಿ (30) ಹಾಗೂ ನೀರುಮಾರ್ಗದಲ್ಲಿ ಅಂಚೆಪೇದೆಯಾಗಿರುವ ಕ್ಲಾಡ್ (35) ಎಂದು ಗುರುತಿಸಲಾಗಿದೆ. [ಮಂಡ್ಯದಲ್ಲಿ ಹಿಂದೂ ಯುವತಿ, ಮುಸ್ಲಿಂ ಯುವಕನ ಲಗ್ನಕ್ಕೆ ವಿಘ್ನ]

suicide

ಪ್ರೀತಿಗೆ ಮನೆಯವರು ಅಡ್ಡಿ ಪಡಿಸಿದ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ನಗರ ಹೊರವಲಯದ ಅಡ್ಯಾರ್ ರೈಲ್ವೆ ಹಳಿಯಲ್ಲಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇವರಿಬ್ಬರೂ ಬೇರೆ-ಬೇರೆ ಧರ್ಮದವರಾದ ಕಾರಣ ವಿವಾಹಕ್ಕೆ ಮನೆಯಲ್ಲಿ ವಿರೋಧ ವ್ಯಕ್ತಪಡಿಸಿದ್ದರು. [ಕರ್ನಾಟಕ ಜಾತಿಗಣತಿ ವರದಿ: ಮುಸ್ಲಿಮರು ನಂ.2?]

ಜಯಂತಿ ಎರಡು ದಿನಗಳಿಂದ ನಾಪತ್ತೆಯಾಗಿದ್ದಳು. ಆಕೆ ನಾಪತ್ತೆಯಾದ ಬಗ್ಗೆ ಮನೆಯವರು ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಕೆಲವು ಸ್ಥಳೀಯರು ಪ್ರೇಮಿಗಳು ಒಟ್ಟಿಗೆ ಇರುವುದನ್ನು ನೋಡಿದ್ದರು. ಬುಧವಾರ ಇಬ್ಬರ ಮೃತದೇಹಗಳು ರೈಲ್ವೆ ಹಳಿಯಲ್ಲಿ ಪತ್ತೆಯಾಗಿವೆ.

ರೈಲ್ವೇ ಪೊಲೀಸರು ವೆನ್ಲಾಕ್ ಆಸ್ಪತ್ರೆಗೆ ಮೃತ ದೇಹಗಳನ್ನು ಸ್ಥಳಾಂತರಿಸಿದ್ದಾರೆ. ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.

ಉಳ್ಳಾಲದಲ್ಲಿ ಕೊಲೆ : ಮೀನುಗಾರಿಕೆಂದು ತೆರಳಿದ್ದ ವ್ಯಕ್ತಿಯ ಶವ ಕೋಟೆಪುರ ಸಮೀಪದ ಬರಾಕಾ ಫಿಶ್ ಆಯಿಲ್ ಮಿಲ್ ಮುಂಭಾಗದಲ್ಲಿ ಮುಖ ಜಜ್ಜಿದ ಸ್ಥಿತಿಯಲ್ಲಿ ಮಂಗಳವಾರ ಮಧ್ಯಾಹ್ನ ವೇಳೆಗೆ ಪತ್ತೆಯಾಗಿದೆ. ಕೊಲೆಯಾದ ವ್ಯಕ್ತಿಯನ್ನು ಮೊಗವೀರಪಟ್ನ ನಿವಾಸಿ ರಾಜು ಕೋಟ್ಯಾನ್ (41) ಎಂದು ಗುರುತಿಸಲಾಗಿದೆ.

murder

ಮಂಗಳವಾರ ಮುಂಜಾನೆ 2 ಗಂಟೆ ವೇಳೆಗೆ ಮನೆಯಿಂದ ರಾಜು ಹೊರಹೋಗಿದ್ದರು. ಕೋಟೆಪುರ ಉಳ್ಳಾಲ ರಸ್ತೆ ಬದಿಯ ಪೊದೆಯ ಕೆಳಗಡೆ, ಬರಾಕಾ ಆಯಿಲ್ ಮಿಲ್ ಎದುರು ಮೃತದೇಹ ಮಧ್ಯಾಹ್ನ ಪತ್ತೆಯಾಗಿದ್ದು, ಮುಖವನ್ನು ಜಜ್ಜಲಾಗಿದೆ. ದುಷ್ಕರ್ಮಿಗಳು ಕಲ್ಲಿನಿಂದ ಜಜ್ಜಿ ಕೊಲೆ ಮಾಡಿರಬಹುದು ಎಂದು ಶಂಕಿಸಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A lover couple committed suicide on the railway tracks at Adyarpadavu, Mangaluru on Wednesday April 13, 2016. The deceased have been identified as Jayanti (30) and Claud (35).
Please Wait while comments are loading...