ಜನವರಿ 3 ರಿಂದ ಲವ್ ಜಿಹಾದ್ ವಿರುದ್ಧ ಜಾಗೃತಿ ಅಭಿಯಾನ

Posted By:
Subscribe to Oneindia Kannada

ಮಂಗಳೂರು, ಜನವರಿ 02: ವಿಶ್ವ ಹಿಂದೂ ಪರಿಷತ್, ಬಜರಂಗದಳದ ಯುವ ವಿಭಾಗ ಹಾಗೂ ದುರ್ಗಾವಾಹಿನಿ ವತಿಯಿಂದ ಲವ್ ಜಿಹಾದ್ ವಿರುದ್ಧ ಜನಜಾಗೃತಿ ಅಭಿಯಾನವನ್ನು ಜನವರಿ 3 ರಿಂದ 15 ದಿನಗಳವರೆಗೆ ಹಮ್ಮಿಕೊಳ್ಳಲಾಗಿದೆ ಎಂದು ವಿಶ್ವ ಹಿಂದೂ ಪರಿಷತ್ ಕಾರ್ಯಾಧ್ಯಕ್ಷ ಪ್ರೊ. ಎಂ.ಬಿ. ಪುರಾಣಿಕ್ ಮಾಹಿತಿ ನೀಡಿದ್ದಾರೆ.

ಮಂಗಳೂರಲ್ಲಿ ಶಂಕಿತ ಲವ್ ಜಿಹಾದ್ ಪ್ರಕರಣ, ಎನ್ಐಎ ತನಿಖೆಗೆ ಆಗ್ರಹ

ವಾರ್ಡ್, ಗ್ರಾಮಗಳಲ್ಲಿ ಜಾಗೃತಿ ಕಾರ್ಯಕ್ರಮ ನಡೆಸಲಾಗುತ್ತಿದೆ. ಗ್ರಾಮಕ್ಕೊಂದು ಸಮಿತಿ ರಚಿಸಿ, ತಿಂಗಳಿಗೊಮ್ಮೆ ಸಭೆ ನಡೆಸಲಾಗುವುದು ಎಂದ ಅವರು ಲವ್ ಜಿಹಾದ್ ವಿರೋಧಿಸಿ, ಹಿಂದೂ ಸಮಾಜದವರನ್ನು ಒಟ್ಟುಗೂಡಿಸಿ ಹೋರಾಟ ಮಾಡಲಾಗುವುದು. ಪೊಲೀಸ್ ಇಲಾಖೆಯು ಜಿಹಾದಿ ಮಾನಸಿಕತೆ ಇರುವ ಯುವಕರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

'Love Jihad' awareness program by VHP from January 03

ಹಿಂದೂಗಳ‌ ಸಂಖ್ಯೆ ಕಡಿಮೆ ಅಗುತ್ತಿದ್ದು, ಯುವಕರಿಗೆ ಕನ್ಯೆಯರು ಸಿಗದಂತಾಗಿದೆ. ಇಂತಹ‌ ಸಂದರ್ಭ ಲವ್ ‌ಜಿಹಾದ್ ಮೂಲಕ ಷಡ್ಯಂತ್ರ ಮಾಡಿ, ಮುಸ್ಲಿಂ‌ ಧರ್ಮಕ್ಕೆ ಮತಾಂತರ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಬಜರಂಗದಳದ ಶರಣ್ ಪಂಪ್ ವೆಲ್ ಮಾತನಾಡಿ, ಲವ್ ಜಿಹಾದ್ ಹಿಂದೆ‌ ಪಿಎಫ್ಐ ಸಂಘಟನೆಯ ಕೈವಾಡವಿದೆ. ಇದು ಭಯೋತ್ಪಾದನೆಯ ಇನ್ನೊಂದು ಮುಖವಾಗಿದ್ದು, ಈ ಬಗ್ಗೆ ಎನ್ಐಎ ಮೂಲಕ ತನಿಖೆ ಮಾಡುವಂತೆ ರಕ್ಷಣಾ ಸಚಿವರಿಗೆ ಮನವಿ‌ ಮಾಡಲಾಗಿದೆ ಎಂದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Vishwa Hindu Parishad organizing 'Love Jihad' awareness program from january 03. It will be 15 day program. VHP members will visit wards and villages and create awareness about 'love jihad'.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ