ಮಂಗಳೂರು ಮೇಯರ್ ಸ್ಥಾನಕ್ಕೆ ಭಾರೀ ಪೈಪೋಟಿ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಮಾರ್ಚ್ 10 : ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಮತ್ತು ಉಪ ಮೇಯರ್ ಚುನಾವಣೆ ಕುತೂಹಲ ಮೂಡಿಸಿದೆ. ಮೇಯರ್ ಸ್ಥಾನಕ್ಕೆ ಮೂರಕ್ಕೂ ಅಧಿಕ ಜನರ ಹೆಸರುಗಳು ಕೇಳಿಬರುತ್ತಿದ್ದು, ಮಾರ್ಚ್ 11ರಂದು ಮೇಯರ್ ಆಯ್ಕೆ ನಡೆಯಲಿದೆ.

ಮೇಯರ್ ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿ ಆಯ್ಕೆ ಕಗ್ಗಂಟಾಗಾಗಿದೆ. ಈಗಾಗಲೇ ಹಿರಿಯ ಸದಸ್ಯರಾದ ಹರಿನಾಥ್, ಕೆ. ಭಾಸ್ಕರ ಅವರ ಹೆಸರು ಆಕಾಂಕ್ಷಿಗಳ ಸ್ಥಾನದಲ್ಲಿತ್ತು. ಇದೀಗ ಮುಸ್ಲಿಂ ಸಮುದಾಯದವರನ್ನು ಪರಿಗಣಿಸುವಂತೆ ನಿಯೋಗವೊಂದು ಜಿಲ್ಲಾ ಕಾಂಗ್ರೆಸ್‌ಗೆ ಬೇಡಿಕೆ ಇಟ್ಟಿದ್ದು, ಕುತೂಹಲಕ್ಕೆ ಕಾರಣವಾಗಿದೆ. [ಮಂಗಳೂರು ವಿವಿಯಲ್ಲಿ ಫಲಿತಾಂಶದ ಅವಾಂತರ]

Mangalore municipal corporation

ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಅವರ ನೇತೃತ್ವದಲ್ಲಿ ಇಂದು ಸಂಜೆ ಕಾರ್ಪೊರೇಟರ್‌ಗಳ ಸಭೆ ನಡೆಯಲಿದೆ. ಆದರೆ, ಮೇಯರ್ ಅಭ್ಯರ್ಥಿಗಳ ಹೆಸರು ಘೋಷಣೆಯಾಗುವ ಸಾಧ್ಯತೆ ಕಡಿಮೆ. ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯುವ ಹೆಸರು ಅಂತಿಮಗೊಳ್ಳಲಿದೆ. [ಉಡುಪಿಯಲ್ಲಿ 'ಹೆಲಿ ಟೂರಿಸಂ', ರಾಜ್ಯದಲ್ಲೇ ಪ್ರಥಮ]

ಮೇಯರ್ ಆಯ್ಕೆ ಲೆಕ್ಕಾಚಾರ? : ಕಳೆದ ಎರಡು ಅವಧಿಯಲ್ಲಿ ಕ್ರಿಶ್ಚಿಯನ್ ಹಾಗೂ ಬಂಟ ಸಮುದಾಯದವರಿಗೆ ಮೇಯರ್ ಸ್ಥಾನ ನೀಡಲಾಗಿದೆ. ಮುಸ್ಲಿಂ ಸಮುದಾಯದ ಕಾರ್ಪೊರೇಟರ್‌ಗಳಿಗೆ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನವನ್ನು ನೀಡಿಲ್ಲ. [ಎಲ್ಲರಂತಲ್ಲ ಮಂಗಳೂರು ಎಳನೀರು ವ್ಯಾಪಾರಿ 'ಮುರುಗನ್ ಮಾಮ']

ಆದ್ದರಿಂದ, ಮುಸ್ಲಿಂ ಸಮುದಾಯದವರಿಗೆ ಅವಕಾಶ ನೀಡುವಂತೆ ಬೇಡಿಕೆ ಇಡಲಾಗಿದೆ. ಅಬ್ದುಲ್ ರಾವೂಫ್, ಮಹಮ್ಮದ್, ಬಷೀರ್ ಅಹಮದ್, ಅಬ್ದುಲ್ ಲತೀಫ್ ಇವರ ಪೈಕಿ ಒಬ್ಬರ ಹೆಸರು ಆಯ್ಕೆಯಾಗುವ ಸಾಧ್ಯತೆ ಇದೆ. ಇಲ್ಲವಾದರೆ ಹರಿನಾಥ್ ಮತ್ತು ಭಾಸ್ಕರ ಅವರ ಪೈಕಿ ಒಬ್ಬರಿಗೆ ಮೇಯರ್ ಪಟ್ಟ ಒಲಿಯಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಭೆಯಲ್ಲಿ ಸಚಿವರು, ಶಾಸಕರು, ಜಿಲ್ಲಾ ನಾಯಕರು, ಕಾರ್ಪೊರೇಟರ್‌ಗಳಿಂದ ಅಭಿಪ್ರಾಯ ಸಂಗ್ರಹಣೆ ಮಾಡಲಾಗುತ್ತದೆ. ಈ ಸಂದರ್ಭದಲ್ಲಿ ವೀರಪ್ಪ ಮೊಯ್ಲಿ ಮತ್ತು ಆಸ್ಕರ್ ಫೆರ್ನಾಂಡಿಸ್ ಅವರು ಮಾಡುವ ಶಿಫಾರಸುಗಳು ಪ್ರಮುಖ ಪತ್ರ ವಹಿಸುವ ಸಾಧ್ಯತೆ ಇದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The stage is set to elect a new Mayor and Deputy Mayor for Mangalore municipal corporation. Congress leaders lobbying for the post of Mayor. Election will be held on March 10th, 2016.
Please Wait while comments are loading...