ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಐಷಾರಾಮಿ ಕಾರುಗಳ ಲೋಗೋ ಕಳ್ಳತನ ಪ್ರಕರಣ: ಐವರ ಬಂಧನ

|
Google Oneindia Kannada News

ಮಂಗಳೂರು ಜುಲೈ 21: ನಗರದಲ್ಲಿ ಪಾರ್ಕ್ ಮಾಡಿದ ಐಷಾರಾಮಿ ಕಾರುಗಳ ಲೋಗೊಗಳನ್ನು ಕದಿಯುತ್ತಿದ್ದ ತಂಡವನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಬಿ.ಎಂ.ಡಬ್ಯು, ಜಗ್ವಾರ್, ಆಡಿ ಸೇರದಂತೆ ಇನ್ನಿತರ ಅತೀ ದುಬಾರಿ ಕಾರುಗಳ ಲೋಗೊ ಗಳಿಗೆ ಒಳ್ಳೆಯ ಬೆಲೆ ಇದೆ. ಈ ಹಿನ್ನಲೆಯಲ್ಲಿ ಈ ಐಷಾರಾಮಿ ಕಾರುಗಳ ಲೋಗೋ ಗಳನ್ನು ಕದಿಯುವುದೇ ದಂಧೆ ಯಾಗಿಸಿ ಕೊಂಡಿದ್ದ 5 ಮಂದಿ ಯುವಕರನ್ನು ಕದ್ರಿ ಠಾಣೆಯ ಪೊಲೀಸರು ಬಂಧಿಸಿದ್ದಾರೆ.

ಮೂರು ದಿನ ಶೀರೂರು ಮಠ ಪೊಲೀಸರ ವಶಕ್ಕೆ, ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ ಮೂರು ದಿನ ಶೀರೂರು ಮಠ ಪೊಲೀಸರ ವಶಕ್ಕೆ, ಸಾರ್ವಜನಿಕ ಪ್ರವೇಶಕ್ಕೆ ನಿರ್ಬಂಧ

ಈ ಐಷಾರಾಮಿ ಕಾರುಗಳ ಒರಿಜಿನಲ್ ಲೋಗೋ ಗಳು ಸಾವೀರಾರು ರೂಪಾಯಿ ಬೆಲೆ ಬಾಳುತ್ತವೆ. ಈ ಹಿನ್ನೆಲೆಯಲ್ಲಿ ಈ ತಂಡ ನಗರದ ಹಲವೆಡೆ ಪಾರ್ಕ್ ಮಾಡಲಾಗಿದ್ದ ಐಷಾರಾಮಿ ಕಾರುಗಳ ಲೋಗೋ ಗಳನ್ನು ಅತ್ಯಂತ ಚಾಣಾಕ್ಷತನ ದಿಂದ ಕದಿಯುತ್ತಿದ್ದರು . ಹಲವಾರು ಬಾರಿ ಕದ್ದ ಲೋಗೋ ಗಳನ್ನು ಅದೇ ಕಾರಿನ ಮಾಲಿಕರಿಗೆ ಮಾರಿದ್ದು ಇದೆ!

Logo of Luxury cars theft case 5 arrested

ಇದಲ್ಲದೇ ಈ ತಂಡ ನಗರದ ವಿವಿದಡೆ ಬೈಕ್ ನಲ್ಲಿ ಬಂದು ಅಪಾರ್ಟ್ ಮೆಂಟ್ ಗಳ ಸೆಕ್ಯುರಿಟಿ ಸಿಬ್ಬಂದಿಗಳ ಮೊಬೈಲ್ ಫೋನ್ ಗಳನ್ನು ಕದ್ದು ಪರಾರಿಯಾಗುತ್ತಿದ್ದರು ಎಂದು ಹೇಳಲಾಗಿದೆ. ಕದ್ದಮಾಲುಗಳನ್ನು ಖರೀದಿಸುತ್ತಿದ್ದ 3 ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 60 ಸಾವಿರ ರೂಪಾಯಿ ಮೌಲ್ಯದ 6 ಮೊಬೈಲ್ ಹಾಗು ಐಷಾರಾಮಿ ದುಬಾರಿ ಕಾರುಗಳ 11 ಲೋಗೋ ಗಳನ್ನು ಪೊಲೀಸರು ವಸಪಡಿಸಿಕೊಂಡಿದ್ದಾರೆ.

Logo of Luxury cars theft case 5 arrested

ಬಂಧಿತರನ್ನು ಪಚ್ಚನಾಡಿ ನಿವಾಸಿ ವಿಶಾಲ್ ನಾಯಕ್ (18), ಪಡವಿನಂಗಡಿ ನಿವಾಸಿ ಅಭಿಷೇಕ್ ಪೂಜಾರಿ (18), ತಲಪಾಡಿ ನಿವಾಸಿ ಅಬ್ದುಲ್ ಸಿನಾನ್(25), ಬಜಾಲ್ ನಿವಾಸಿ ಮಹಮ್ಮದ್ ನವಾದ್ ( 26), ಸುರತ್ಕಲ್ ನಿವಾಸಿ ಸಾದಕ್ ತುಲಾ (30) ಎಂದು ಗುರಿತಿಸಲಾಗಿದೆ.

ಬಂಧಿತ ಅರೋಪಿಗಳ ಪೈಕಿ ವಿಶಾಲ್ ಮತ್ತು ಅಭಿಷೇಕ್ ನಗರದ ಅಪಾರ್ಟ್ಮೆಂಟ್‌ ಗಳ ಸೆಕ್ಯುರಿಟಿ ಕರ್ತವ್ಯದಲ್ಲಿರುವ ಗಾರ್ಡ್ ಗಳ ಮೊಬೈಲ್ ಗಳನ್ನು ಕದಿಯುತ್ತಿದ್ದರು. ಅಂತೆಯೇ ನಗರದಲ್ಲಿ ಪಾರ್ಕ್ ಮಾಡಲಾದ ಐಷಾರಾಮಿ ದುಬಾರಿ ಕಾರು ಲೋಗೋ ಗಳನ್ನು ಕದಿಯುತ್ತಿದ್ದರು. ಈ ಕದ್ದ ಮಾಲುಗಳನ್ನು ಅಬ್ದುಲ್ ಸಿನಾನ್, ಮಹಮ್ಮದ್ ನವಾದ್, ಸಾದಕ್ ತುಲಾ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು ಎಂದು ಹೇಳಲಾಗಿದೆ.

English summary
Mangaluru Police arrested 5 accused in connection with theft of Logos of Luxury cars and mobile phones .
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X