ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿತ್ರಗಳು : ಮೂಡಬಿದಿರೆಯಲ್ಲಿ ಬಾವಿಗೆ ಬಿದ್ದ ಚಿರತೆ ರಕ್ಷಣೆ

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ಮೂಡಬಿದಿರೆ, ಜುಲೈ 07 : ಮೂಡುಮಾರ್ನಾಡು ಗ್ರಾಮದ ಬಗಲ್ತ ಗುಡ್ಡೆಯ ರಾಘು ಪೂಜಾರಿ ಎಂಬವರ ಮನೆಯ ಮುಂಭಾಗದಲ್ಲಿರುವ ತೆರೆದ ಬಾವಿಗೆ ಬಿದ್ದಿದ್ದ ಚಿರತೆಯನ್ನು ಅರಣ್ಯ ಇಲಾಖೆ ಸಿಬ್ಬಂದಿ ರಕ್ಷಿಸಿದ್ದು, ಚಿರತೆ ಮರಳಿ ಕಾಡು ಸೇರಿದೆ.

ಸೋಮವಾರ ಮುಂಜಾನೆ ಬಾವಿಗೆ ಭಾರದ ವಸ್ತು ಬಿದ್ದ ಶಬ್ದವಾಗಿದ್ದನ್ನು ಗಮನಿಸಿದ ರಾಘು ಪೂಜಾರಿಯವರು ಬಾವಿ ಬಳಿ ಬಂದು ನೋಡಿದಾಗ ಚಿರತೆ ಬಿದ್ದಿರುವುದು ಕಂಡುಬಂದಿದೆ. ತಕ್ಷಣ ಅವರು ಸ್ಥಳೀಯರಿಗೆ ಮತ್ತು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದಾರೆ. [ಕೋಳಿ ತಿನ್ನಲು ಬಂದಿದ್ದ ಚಿರತೆ ಬಾವಿಗೆ ಬಿತ್ತು]

leopard

ಬಾವಿಗೆ ಬಿದ್ದಿದ್ದ ಚಿರತೆ ತಳಭಾಗದಲ್ಲಿದ್ದ ಕಲ್ಲಿನ ಮೇಲೆ ಕುಳಿತುಕೊಂಡಿತ್ತು. ಬೆಳಗ್ಗೆ 7.30ರ ಸುಮಾರಿಗೆ ಮೂಡುಬಿದಿರೆ, ಶಿರ್ತಾಡಿ, ಬಜಗೋಳಿ ವಲಯದ ಅರಣ್ಯಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಚಿರತೆಯನ್ನು ಮೇಲೆತ್ತುವ ಕಾರ್ಯಾಚರಣೆಯನ್ನು ಆರಂಭಿಸಿದರು.

ಮೊದಲು ಉದ್ದದ ಮರದ ಕಂಬವನ್ನು ಚಿರತೆಯಿರುವ ಭಾಗದ ನೀರಿಗೆ ಇಳಿಸಿ ಅದಕ್ಕೆ ಮೇಲೆ ಬರಲು ಅವಕಾಶ ಕಲ್ಪಿಸಿಕೊಡಲಾಯಿತು. ಆದರೆ, ಬಾವಿಯ ಸುತ್ತ ಜನರಿದ್ದ ಕಾರಣ ಭಯಗೊಂಡ ಚಿರತೆ ಮೂರು ಬಾರಿ ಅರ್ಧಕ್ಕೆ ಬಂದು ಮತ್ತೆ ಬಾವಿಗೆ ಬಿತ್ತು.

moodabidri

ನಂತರ ಅರಣ್ಯ ಇಲಾಖೆ ಅಧಿಕಾರಿಗಳ ಸಲಹೆಯಂತೆ ಮರದ ಕಂಬವನ್ನು ಮೇಲೆತ್ತಿ, ಅದಕ್ಕೆ ಅಡ್ಡ ಪಟ್ಟಿಗಳನ್ನು ಕಟ್ಟಿ ಬಾವಿಗೆ ಇಳಿಸಲಾಯಿತು, ಜನರನ್ನು ಬಾವಿಯಿಂದ ದೂರಕ್ಕೆ ಕಳಿಸಲಾಯಿತು. ಜನರು ದೂರ ಹೋದ ತಕ್ಷಣ ಚಿರತೆ ಕಂಬದ ಸಹಾಯದಿಂದ ಮೇಲೆ ಬಂದು ಸಮೀಪದ ಕಾಡಿಗೆ ಓಡಿ ಹೋಯಿತು.[ಮಂಗಳೂರು : ಚಿರತೆ ಭೀತಿಯಲ್ಲೇ ಗ್ರಾಮಸ್ಥರ ಬದುಕು]

ಬಾವಿಯಿಂದ ಮೇಲೆ ಬಂದ ಚಿರತೆ ಜನರ ಮೇಲೆ ದಾಳಿ ಮಾಡಬಹುದು ಎಂಬ ಶಂಕೆಯಿಂದ ಅರಣ್ಯಾಧಿಕಾರಿಗಳು ಬಾವಿಯ ಸುತ್ತ ಬಲೆ ಹಾಕಿದ್ದರು. ಆದರೆ, ಮೇಲೆ ಬಂದ ಚಿರತೆ ಕಾಡಿಗೆ ಓಡಿ ಹೋಯಿತು. ಚಿರತೆ ಸುಮಾರು 4 ವರ್ಷದ್ದಿರಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ. [ಚಿರತೆ ನೋಡಿ ವರ ಪರಾರಿ]

forest department

ಮೂಡುಬಿದಿರೆ ವಲಯ ಉಪ ಅರಣ್ಯಾಧಿಕಾರಿ ಪ್ರಶಾಂತ್, ಶಿರ್ತಾಡಿ ವಲಯ ಅರಣ್ಯಾಧಿಕಾರಿ ಜಯಪ್ರಕಾಶ್, ಬಜಗೋಳಿ ವಲಯ ಅರಣ್ಯಾಧಿಕಾರಿ ಪ್ರಮೋದ್, ಅರಣ್ಯ ರಕ್ಷಕ ನಾಗರಾಜ್ ಚಿರತೆಯನ್ನು ರಕ್ಷಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

English summary
A leopard that had fallen into a well at Kempugudde in Moodumarnadu village near Moodabidri on Monday was rescued by the forest department officials.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X