ಮಂಗಳೂರಲ್ಲಿ ಡಿ. 30ರವರೆಗೆ ಮದ್ಯ ಮಾರಾಟಕ್ಕೆ ನಿಷೇಧ

By: ಮಂಗಳೂರು ಪ್ರತಿನಿಧಿ
Subscribe to Oneindia Kannada

ಮಂಗಳೂರು, ಡಿಸೆಂಬರ್, 26: ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಜಿಲ್ಲೆಯಾದ್ಯಂತ ಡಿಸೆಂಬರ್ 30ರವರೆಗೆ ಮದ್ಯ ಮಾರಾಟ ನಿಷೆಧಿಸಿದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಮದ್ಯ ಮುಕ್ತ ದಿನವೆಂದು ಘೋಷಿಸಿದ್ದಾರೆ.

ಡಿಸೆಂಬರ್ 27 ರ ಭಾನುವಾರದಂದು ವಿಧಾನ ಪರಿಷತ್ ಚುನಾವಣೆ ನಡೆಯಲಿದ್ದು, ಡಿಸೆಂಬರ್ 30ರಂದು ಅಭ್ಯರ್ಥಿಗಳ ಸೋಲು ಗೆಲುವು ಅಂದರೆ ಎಣಿಕೆ ನಡೆಯಲಿದೆ. ಹಾಗಾಗಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಇಬ್ರಾಹಿಂ ತಿಳಿಸಿದ್ದಾರೆ.[ಡಿಸೆಂಬರ್ 27ರ ವಿಧಾನಪರಿಷತ್ ಚುನಾವಣೆ ಬಗ್ಗೆ ತಿಳಿಯಿರಿ]

Legislative council election liquor banned in Mangaluru

ಡಿ.25ರಂದು ಸಂಜೆ 4ಗಂಟೆಯಿಂದ ಮದ್ಯ ಮಾರಾಟಕ್ಕೆ ನಿಷೇಧ ಹೇರಲಾಗಿದ್ದು, ಡಿಸೆಂಬರ್ 27ರ ಸಂಜೆ 4 ಗಂಟೆಯವರೆಗೆ ಮುಂದುವರೆಯಲಿದೆ. ಡಿ.29 ಮಧ್ಯರಾತ್ರಿಯಿಂದ 30ರ ಮಧ್ಯರಾತ್ರಿಯವರೆಗೆ ಈ ನಿಯಮ ಪಾಲನೆಯಾಗಲಿದ್ದು, ಮದ್ಯ ಮಾರಾಟ ಪರವಾನಿಗೆ ಇರುವ ಅಂಗಡಿಗಳನ್ನು ಮತ್ತು ಮದ್ಯ ಮಾರಾಟ ಕೇಂದ್ರವನ್ನು ಮುಚ್ಚಲು ಆದೇಶಿಸಲಾಗಿದೆ.[ಬೆಂಗಳೂರಲ್ಲಿ ರಾತ್ರಿ 1 ಗಂಟೆವರೆಗೆ ಮದ್ಯ ಮಾರಾಟಕ್ಕೆ ಅವಕಾಶ]

ಈ ಆದೇಶ ಡಿಸೆಂಬರ್ 30ರವರೆಗೆ ಮಾತ್ರ ಮುಂದುವರೆಯಲಿದ್ದು, ಹೊಸವರ್ಷ ಆಚರಣೆಗೆ ಯಾವುದೇ ತೊಂದರೆಯಾಗುವುದಿಲ್ಲ. ಚುನಾವಣೆ ವೇಳೆ ಜಿಲ್ಲೆಯಲ್ಲಿ ಶಾಂತಿ, ನ್ಯಾಯಸಮ್ಮತ, ನಿಷ್ಪಕ್ಷಪಾತತೆ ಕಾಯ್ದುಕೊಳ್ಳುವ ಉದ್ದೇಶದಿಂದ ಈ ನಿರ್ಣಯಕ್ಕೆ ಬರಲಾಗಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಜಿಲ್ಲಾದಿಕಾರಿ ತಿಳಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Deputy commissioner A.B Ibrahim commanded ban the liquor in Mangaluru from December 25th to December 30. Legislative council election will be held in December 27th and counting on December 30.
Please Wait while comments are loading...