ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು- ಬೆಂಗಳೂರು ರೈಲ್ವೆ ಮಾರ್ಗದಲ್ಲಿ 17 ಕಡೆ ಗುಡ್ಡ ಕುಸಿತ

|
Google Oneindia Kannada News

ಮಂಗಳೂರು, ಆಗಸ್ಟ್ 18: ಭಾರಿ ಮಳೆಗೆ ಭೂಕುಸಿತ ಉಂಟಾಗಿ ಶಿರಾಡಿ ಘಾಟ್ ಮತ್ತು ಮಡಿಕೇರಿ ಸಂಪಾಜೆ ಘಾಟ್ ರಸ್ತೆ ಸಂಚಾರ ಬಂದ್ ಆಗಿದೆ .

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಈ ಹಿನ್ನೆಲೆಯಲ್ಲಿ ಮಂಗಳೂರು - ಬೆಂಗಳೂರು , ಮಂಗಳೂರು - ಮೈಸೂರು ನಡುವೆ ಸಂಪರ್ಕ ಕಡಿತ ಗೊಂಡಿದೆ. ಈಗ ಕೇವಲ ಚಾರ್ಮಾಡಿ ಘಾಟ್ ಮಾತ್ರ ಮಂಗಳೂರು - ಬೆಂಗಳೂರು ಸಂಪರ್ಕ ಕೊಂಡಿಯಾಗಿ ಉಳಿದು ಕೊಂಡಿದೆ.

ಕೊಡಗಿನಲ್ಲಿ ಭೂಕಂಪ: ವದಂತಿಗೆ ಕಿವಿಗೊಡದಂತೆ ಡಿಸಿ ಮನವಿಕೊಡಗಿನಲ್ಲಿ ಭೂಕಂಪ: ವದಂತಿಗೆ ಕಿವಿಗೊಡದಂತೆ ಡಿಸಿ ಮನವಿ

Landslide on Mangaluru- Bangaluru railway track

ಈ ನಡುವೆ ಮಂಗಳೂರು- ಬೆಂಗಳೂರು ರೈಲ್ವೆ ಮಾರ್ಗ ಕೂಡ ಬಂದ್ ಅಗಿದ್ದು ರೈಲ್ವೆ ಸಂಪರ್ಕ ಕಡಿತಗೊಂಡಿದೆ. ಮಂಗಳೂರು - ಬೆಂಗಳೂರು ರೈಲ್ವೆ ಮಾರ್ಗದ ಶಿರಾಡಿಘಾಟ್ ರಸ್ತೆಯ ಎಡಕುಮೇರಿ ಬಳಿ ಮತ್ತೆ ಗುಡ್ಡ ಕುಸಿತ ಉಂಟಾಗಿದೆ. ಸುಬ್ರಹ್ಮಣ್ಯ ನೆಟ್ಟಣ‌ ರೈಲು‌ ನಿಲ್ದಾಣ ದಿಂದ 93 ಕಿಲೋ ಮೀಟರ್ ಪ್ರದೇಶದಲ್ಲಿ ಸುಮಾರು 17 ಕಡೆಗಳಲ್ಲಿ ಗುಡ್ಡ ಕುಸಿದು ರೈಲ್ವೆ ಹಳಿ ಮೇಲೆ ಬಿದ್ದಿದೆ.

ಕೊಡಗು ಪ್ರವಾಹ ಸಂತ್ರಸ್ತರಿಗಾಗಿ ಅತ್ಯಗತ್ಯ ಸಹಾಯವಾಣಿ ಕೊಡಗು ಪ್ರವಾಹ ಸಂತ್ರಸ್ತರಿಗಾಗಿ ಅತ್ಯಗತ್ಯ ಸಹಾಯವಾಣಿ

Landslide on Mangaluru- Bangaluru railway track

ರೈಲ್ವೆ ಹಳಿಯ ಮೇಲೆ ಬಿದ್ದಿರುವ ಭಾರೀ ಗಾತ್ರದ ಬಂಡೆ ಹಾಗು ಮಣ್ಣನ್ನು ತೆಗೆಯುವ ಕಾಮಗಾರಿ ಭರದಿಂದ ನಡೆಯುತ್ತಿದೆ. ಈ ಕಾಮಗಾರಿಗೆ 10 ಹಿಟಾಚಿ ಯಂತ್ರಗಳನ್ನು ಕಾರ್ಯಾಚರಣೆಯಲ್ಲಿ ಬಳಸಲಾಗುತ್ತಿದೆ. ಕಾಮಗಾರಿ ನಡೆಯುತ್ತಿದ್ದಂತೆ ಗುಡ್ಡಗಳು ಮತ್ತೆ ಮತ್ತೆ ರೈಲ್ವೆ ಹಳಿಗಳಿಗಳ ಮೇಲೆ ಬೀಳುತ್ತಿವೆ. ನಿರಂತರ ಮಳೆಯೂ ಕಾಮಗಾರಿಗೆ ತೊಂದರೆಯನ್ನುಂಟು ಮಾಡುತ್ತಿದೆ. ಮುಂದಿನ 10 ದಿನಗಳ ಕಾಲ ಈ ರೈಲ್ವೆ ಹಳಿ ಸಂಚಾರಕ್ಕೆ ಮುಕ್ತವಾಗುವುದು ಕಷ್ಟ.

English summary
There is a landslide on Mangaluru- Bangaluru Railway track near Edakumeri . Path clearing work is on progress but it may took aleast 10 days clear railway track.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X