ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಲಲಿತಾ ಪಂಚಮಿ ವಿಶೇಷ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 26 : ಶ್ರೀ ಕ್ಷೇತ್ರ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನವು ನವರಾತ್ರಿ ಉತ್ಸವಕ್ಕೆ ಪ್ರಸಿದ್ಧಿ ಪಡೆದಿದೆ. ನವರಾತ್ರಿ ಉತ್ಸವದ ಹಿನ್ನೆಲೆಯಲ್ಲಿ ಕಟೀಲು ದೇವಳಕ್ಕೆ ಲಕ್ಷಾಂತರ ಮಂದಿ ಭಕ್ತರು ಬೇಟಿ ನೀಡುತ್ತಿದ್ದಾರೆ. ಬೇರೆ ದೇವಸ್ಥಾನಗಳಲ್ಲಿನ ನವರಾತ್ರಿ ಉತ್ಸವಕ್ಕಿಂತ ಇಲ್ಲಿನ ಆಚರಣೆ ಭಿನ್ನವಾಗಿರುತ್ತದೆ.

ದಸರಾ ವೈಭವ 2017: ಸರಳ ದಸರಾದ ಅಪರೂಪದ ಚಿತ್ರಗಳು

ಕರಾವಳಿಯಲ್ಲಿ ನವರಾತ್ರಿ ಎಂದರೆ ಥಟ್ಟನೆ ನೆನಪಾಗುವುದು ಹುಲಿ ವೇಷ ಘರ್ಜನೆ. ನವರಾತ್ರಿ ಉತ್ಸವ ಸಂದರ್ಭದಲ್ಲಿ ಹುಲಿ ವೇಷ ಮೆರವಣಿಗೆ ಬರುವುದು ಇಲ್ಲಿನ ವಿಶೇಷ. ನವರಾತ್ರಿಯ ಮೂರನೇ ದಿನ ಕಟೀಲು ಗ್ರಾಮ, ಲಲಿತಾ ಪಂಚಮಿಯಂದು ಕೊಡೆತ್ತೂರು, ಮೂಲ ನಕ್ಷತ್ರದಂದು ಎಕ್ಕಾರು ಗ್ರಾಮದಿಂದ ದೇವಿ ಸನ್ನಿಧಿಗೆ ಹುಲಿವೇಷ ಮೆರವಣಿಗೆ ಬರುವುದು ಇಲ್ಲಿನ ಕ್ರಮ.

ನವರಾತ್ರಿ ವಿಶೇಷ: ಕಾರವಾರದಲ್ಲಿ ಗುಜರಾತಿಗರ ನವರಾತ್ರಿ ದಾಂಡಿಯಾ ನೃತ್ಯನವರಾತ್ರಿ ವಿಶೇಷ: ಕಾರವಾರದಲ್ಲಿ ಗುಜರಾತಿಗರ ನವರಾತ್ರಿ ದಾಂಡಿಯಾ ನೃತ್ಯ

ಈ ಮೆರವಣಿಗೆ ಹಲವಾರು ವರ್ಷಗಳಿಂದ ನಡೆಯುತ್ತಿದ್ದು, ಇದರ ಹಿಂದೆ ಧಾರ್ಮಿಕ ನಂಬಿಕೆ ಇದೆ. ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹಲವಾರು ಮಂದಿ ಇಲ್ಲಿ ಹುಲಿವೇಷ ಹಾಕಿ ಕುಣಿಯುತ್ತಾರೆ. ಆಯಾ ಗ್ರಾಮದಲ್ಲಿ ನಿರ್ದಿಷ್ಟ ಜಾಗದಿಂದ ಹೊರಟ ಮೆರವಣಿಗೆಯು ದುರ್ಗೆಯ ಸನ್ನಿಧಿಯಲ್ಲಿ ಕುಣಿದು, ದೇವರ ಪ್ರಸಾದ ಸ್ವೀಕರಿಸಿ ತಮ್ಮ ಸೇವೆಯನ್ನು ತೀರಿಸುತ್ತಾರೆ.

ಹಿರಿಯರು ಹಾಕಿಕೊಟ್ಟ ಮೆಲ್ಪಂಕ್ತಿ

ಹಿರಿಯರು ಹಾಕಿಕೊಟ್ಟ ಮೆಲ್ಪಂಕ್ತಿ

ಮೆರವಣಿಗೆಯಲ್ಲಿ ಬೇರೆ ವೇಷಗಳು ಇದ್ದು, ವಿವಿಧ ರೀತಿಯ ಸ್ತಬ್ಧ ಚಿತ್ರಗಳೂ ಇರುತ್ತವೆ. ಆದರೆ ಹುಲಿ ವೇಷವೇ ಪ್ರಧಾನವಾಗಿದ್ದು, ತಮ್ಮ ಹಿರಿಯರು ಹಾಕಿಕೊಟ್ಟ ಮೇಲ್ಪಂಕ್ತಿಯಂತೆ ಈಗಲೂ ಗ್ರಾಮಸ್ಥರು ನಡೆಸಿಕೊಂಡು ಬಂದಿದ್ದಾರೆ.

ಹರಕೆ ತೀರಿಸುವ ಭಕ್ತರು

ಹರಕೆ ತೀರಿಸುವ ಭಕ್ತರು

ಕಟೀಲು ಸುತ್ತ ಮುತ್ತ ಮಾತ್ರವಲ್ಲದೆ ದೂರದ ಊರುಗಳಿಂದ ಕೂಡ ವೇಷ ಹಾಕಿದ ಭಕ್ತರು ಕಟೀಲು ಸನ್ನಿಧಿಯಲ್ಲಿ ಕುಣಿದು ತಮ್ಮ ಸೇವೆ ತೀರಿಸುತ್ತಾರೆ. ನವರಾತ್ರಿ ಕೊನೆಯ ದಿನ ಹುಲಿ ವೇಷಧಾರಿಗಳು ಸಹಿತ ನೂರಾರು ವೇಷಧಾರಿಗಳು ಇಲ್ಲಿ ಬಂದು ತಮ್ಮ ಸೇವೆ ಸಲ್ಲಿಸಿ, ಆ ನಂತರ ಇಲ್ಲಿಯೇ ವೇಷ ಕಳಚುವ ಕ್ರಮ ಇದೆ.

ಪ್ರಸಾದ ರೂಪದಲ್ಲಿ

ಪ್ರಸಾದ ರೂಪದಲ್ಲಿ

ಕಟೀಲು ದೇಗುಲದಲ್ಲಿ ನವರಾತ್ರಿ ಉತ್ಸವದಲ್ಲಿ ಲಲಿತಾ ಪಂಚಮಿ ಪ್ರಾಮುಖ್ಯ ಪಡೆದಿದೆ. ದುರ್ಗೆಗೆ ಭಕ್ತರಿಂದ ಅರ್ಪಿಸುವ ಸೀರೆಯನ್ನು ಚಂಡಿಕಾ ಹೂಮ, ರಂಗಪೂಜೆ, ಅನ್ನದಾನ ಮತ್ತು ವಿಶೇಷ ಅತಿಥಿಗಳು ಬಂದಾಗ ಪ್ರಸಾದ ರೂಪದಲ್ಲಿ ಕೊಡಲಾಗುತ್ತದೆ.

ಮಹಿಳಾ ಭಕ್ತರಿಗೆ ಕಣ

ಮಹಿಳಾ ಭಕ್ತರಿಗೆ ಕಣ

ಉಳಿದಂತೆ ಲಲಿತಾ ಪಂಚಮಿಯಂದು ರಾತ್ರಿ ಅನ್ನ ಪ್ರಸಾದ ಸ್ವೀಕರಿಸುವ ಮಹಿಳಾ ಭಕ್ತರಿಗೆ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತದೆ. ಈ ಹಿಂದೆ ಒಂದು ಸೀರೆಯನ್ನು ಕಣವಾಗಿ ಪರಿವರ್ತಿಸಿ, ಮಹಿಳಾ ಭಕ್ತರಿಗೆ ನೀಡಲಾಗುತ್ತಿತ್ತು. ಆದರೆ 2 ವರ್ಷ ಮಹಿಳಾ ಭಕ್ತರಿಗೆ ಇಡೀ ಸೀರೆಯನ್ನು ವಿತರಿಸಲಾಗಿತ್ತು.

ಸಾವಿರಾರು ಭಕ್ತರು

ಸಾವಿರಾರು ಭಕ್ತರು

ಆದರೆ, ಈ ಬಾರಿ ಕಡಿಮೆ ಸೀರೆಗಳು ದೇವಿಗೆ ಅರ್ಪಣೆಯಾಗಿರುವುದರಿಂದ ಲಲಿತಾ ಪಂಚಮಿಯಂದು(ಸೋಮವಾರ) ದೇವಾಲಯದಲ್ಲಿ ಅನ್ನ ಪ್ರಸಾದ ಸ್ವೀಕರಿಸುವ ಮಹಿಳಾ ಭಕ್ತರಿಗೆ ಸೀರೆಯನ್ನು ಕಣವಾಗಿ ಹಂಚಲಾಯಿತು. ದುರ್ಗಾಪರಮೇಶ್ವರಿಯ ಸೀರೆಯ ಪ್ರಸಾದ ಸ್ವೀಕರಿಸಲು ಸಾವಿರಾರು ಭಕ್ತರು ಸೇರಿದ್ದರು.

16 ಸಾವಿರ ಮಹಿಳೆಯರು ಸೀರೆ ಪಡೆದಿದ್ದರು

16 ಸಾವಿರ ಮಹಿಳೆಯರು ಸೀರೆ ಪಡೆದಿದ್ದರು

ಕಳೆದ ಬಾರಿ ಸುಮಾರು 16 ಸಾವಿರ ಮಹಿಳೆಯರು ಸೀರೆಯನ್ನು ಪಡೆದಿದ್ದರು. ದೇವಾಲಯದಲ್ಲಿ ಸೋಮವಾರ ತಡರಾತ್ರಿಯವರೆಗೂ ಸೀರೆ ಪ್ರಸಾದ ಹಂಚಲು ನಿರ್ಧರಿಸಲಾಗಿತ್ತು.

ಕಟೀಲು ಯಕ್ಷಗಾನದ 6 ಮೇಳಗಳಿಗೆ ವರ್ಷಕ್ಕೆ 1500 ಸೀರೆ

ಕಟೀಲು ಯಕ್ಷಗಾನದ 6 ಮೇಳಗಳಿಗೆ ವರ್ಷಕ್ಕೆ 1500 ಸೀರೆ

ಕಟೀಲು ದೇಗುಲಕ್ಕೆ ಭಕ್ತರಿಂದ ವರ್ಷಂಪ್ರತಿ ಸರಾಸರಿ 25 ರಿಂದ 26 ಸಾವಿರದಷ್ಟು ಸೀರೆಗಳು ಅರ್ಪಣೆಯಾಗುತ್ತವೆ. ವಿಶೇಷ ಸೇವಾಕರ್ತರಿಗೆ, ಅತಿಥಿಗಳಿಗೆ ಪ್ರಸಾದ ರೂಪದಲ್ಲಿ ಮತ್ತು ಕಟೀಲು ಯಕ್ಷಗಾನದ 6 ಮೇಳಗಳಿಗೆ ವರ್ಷಕ್ಕೆ 1500 ಸೀರೆಗಳು ಬೇಕಾಗುತ್ತವೆ. ಹೀಗೆ ದೇವಿಗೆ ಅರ್ಪಿಸಲಾದ ಸೀರೆಗಳನ್ನು ಲಲಿತಾ ಪಂಚಮಿಯಂದು ವಿತರಿಸಲಾಗುತ್ತದೆ.

English summary
Lalitha Panchami a special puja performed in Kateel Durga Parameshwari temple. Why it is special and rituals followed in temple explained here.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X