ಮಂಗಳೂರು-ಲಕ್ಷದ್ವೀಪದ ನಡುವಿನ ಸಂಬಂಧ ಮತ್ತಷ್ಟು ವೃದ್ಧಿ

By: ಒನ್ ಇಂಡಿಯಾ ಪ್ರತಿನಿಧಿ
Subscribe to Oneindia Kannada

ಮಂಗಳೂರು, ಆಗಸ್ಟ್ 05 : ಲಕ್ಷದ್ವೀಪ ಹಾಗೂ ಮಂಗಳೂರು ನಡುವೆ ವ್ಯಾಪಾರೋದ್ಯಮ ಸಂಬಂಧವನ್ನು ಇನ್ನಷ್ಟು ವೃದ್ಧಿಗೊಳಿಸುವ ಸಲುವಾಗಿ ಮಂಗಳೂರಿನ ಹಳೇ ಬಂದರಿನಲ್ಲಿ ಲಕ್ಷ ದ್ವೀಪಕ್ಕಾಗಿ ಪ್ರತ್ಯೇಕ ಜಟ್ಟಿ (Wharf) ಆರಂಭಗೊಳ್ಳಲಿದೆ.

ಸುಮಾರು 8,600 ಚದರ ಮೀಟರ್ ವಿಶಾಲ ಜಾಗವನ್ನು ಇದಕ್ಕಾಗಿ ಲಕ್ಷದ್ವೀಪ ಆಡಳಿತಕ್ಕೆ ಒದಗಿಸಲಾಗಿದೆ. ಈಗಿರುವ ಜಟ್ಟಿಯಲ್ಲಿ ಯಾವುದೇ ಸೌಲಭ್ಯವಿಲ್ಲದ ಕಾರಣ ವ್ಯಾಪಾರೋದ್ಯಮ ಅಷ್ಟಾಗಿ ಬೆಳೆಯುತ್ತಿಲ್ಲ. ಈ ಹಿನ್ನಲೆಯಲ್ಲಿ ಲಕ್ಷದ್ವೀಪ ಸರ್ಕಾರ ಮತ್ತು ಕರ್ನಾಟಕ ಸರ್ಕಾರ ಇಲ್ಲಿ ಲಕ್ಷದ್ವೀಪಕ್ಕಾಗಿಯೇ ಪ್ರತ್ಯೇಕ ಜಟ್ಟಿ ಅಭಿವೃದ್ದಿಪಡಿಸಲು ಒಪ್ಪಂದ ಮಾಡಿಕೊಂಡಿವೆ.[ಮೀನುಗಾರರಿಗೆ ಬಯೋಮೆಟ್ರಿಕ್ ಗುರುತಿನ ಚೀಟಿ ಕಡ್ಡಾಯ]

Lakshadweep to set up dedicated wharf at Mangaluru old port

ಪ್ರಯಾಣಿಕರ ಸೌಲಭ್ಯ : ಲಕ್ಷದ್ವೀಪ ಹಾಗೂ ಮಂಗಳೂರು ಮಧ್ಯೆ ವಾರಕ್ಕೊಂದು ಬಾರಿ ಅಮೀನ್ ದೀವಿ ಎಂಬ ಹಡಗು ಸಂಚರಿಸುತ್ತಿದೆ. ಇದರಲ್ಲಿ ಲಕ್ಷದ್ವೀಪದ ನಾಗರಿಕರು ಸಂಚರಿಸುತ್ತಾರೆ. ವಿದ್ಯಾರ್ಥಿಗಳು, ವೈದ್ಯಕೀಯ ಕಾರಣಕ್ಕೆ ಮಂಗಳೂರಿಗೆ ಬರುವವರು, ಖರೀದಿ ಹಾಗೂ ಇತರೆ ಕೆಲಸಗಳಿಗೆ ಮಂಗಳೂರಿಗೆ ಬಂದು ಹೋಗುವವರಿದ್ದಾರೆ.['ಉಡುಪಿ ಮಲ್ಪೆ ಬೀಚ್' ವೈಫೈ ಪಡೆದ ದೇಶದ ಮೊದಲ ಬೀಚ್]

ಅಂಥವರ ಸೌಲಭ್ಯಕ್ಕೆ ಪ್ರಯಾಣಿಕರ ವಿಶ್ರಾಂತಿ ತಾಣವನ್ನು ನಿರ್ಮಿಸಲಾಗುತ್ತಿದೆ. ಸದ್ಯ, ಮಂಗಳೂರು ಹಳೇ ಬಂದರಿಗೆ ಲಕ್ಷದ್ವೀಪ ಹಡಗುಗಳು ಹಾಗೂ ಸರಕು ಸಾಗಾಟ ನಡೆಸುವಂಥ ಮಾಂಜಿಗಳು ಆಗಮಿಸುತ್ತಿವೆ. ಇದಕ್ಕೆ ಇನ್ನಷ್ಟು ಅವಕಾಶಗಳಿವೆ. ಆದರೆ ಇಲ್ಲಿನ ಸೌಲಭ್ಯಗಳು ಸಾಕಾಗುತ್ತಿಲ್ಲ ಎಂಬ ಕೂಗು ಲಕ್ಷದ್ವೀಪ ಜನರದ್ದು.[ದೀಪಸ್ತಂಭಗಳ ಬೆಳಕಲ್ಲಿ ಅಡಗಿದೆ ಕರಾವಳಿ ಪ್ರವಾಸೋದ್ಯಮ ಅಭಿವೃದ್ಧಿ]

Lakshadweep to set up dedicated wharf at Mangaluru old port

ಲಕ್ಷದ್ವೀಪಕ್ಕೆ ಬೇಕಾದ ದಿನಸಿ ವಸ್ತುಗಳು, ಅಗತ್ಯ ಸಾಮಗ್ರಿಗಳು ಮಂಗಳೂರಿನಿಂದ ಹೋಗುತ್ತಿದ್ದು, ಅವುಗಳ ಲೋಡಿಂಗ್‌ಗೆ ಸಾಕಷ್ಟು ಕಾಯುವ ಪರಿಸ್ಥಿತಿ ಇದೆ. ಲೋಡಿಂಗ್ ಆಗುವಲ್ಲಿ ತಡವಾದರೆ ಈ ವಸ್ತುಗಳನ್ನು ತೆರೆದ ಜಾಗದಲ್ಲಿ ಇಡಬೇಕಾಗುತ್ತದೆ. ಈಗಿರುವ ಜಾಗದಲ್ಲಿ ಯಾವುದೇ ಶೆಲ್ಟರ್ ಸೌಲಭ್ಯವೂ ಇಲ್ಲ.

60 ಕೋಟಿ ರೂ. ವೆಚ್ಚ : ಸುಮಾರು 60ಕೋಟಿ ರೂ. ವೆಚ್ಚದಲ್ಲಿ ಮಂಗಳೂರಿನಲ್ಲಿ ಲಕ್ಷದ್ವೀಪ ಜಟ್ಟಿ ನಿರ್ಮಾಣವಾಗಲಿದೆ. ಇದರಿಂದ ದೊಡ್ಡ ನೌಕೆಗಳೂ ಇಲ್ಲಿಗೆ ಬರುವುದಕ್ಕೆ ಸಹಕಾರಿಯಾಗಲಿದೆ. ಈ ನೌಕೆಗಳಿಗೆ ದಕ್ಕೆಗೆ ಬರುವ ದಾರಿಯಾದ ಅಳಿವೆ ಬಾಗಿಲಿನಲ್ಲಿರುವ ಹೂಳೆತ್ತಲಿದ್ದು, ಇದು ಮೀನುಗಾರರಿಗೂ ನೆರವಾಗಲಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lakshadweep and Mangaluru have shared good relationship over the years. Now Lakshadweep will set up dedicated wharf at old Mngaluru port for travelers.
Please Wait while comments are loading...