ಧರ್ಮಸ್ಥಳದಲ್ಲಿ ಗಮನ ಸೆಳೆದ ದುರ್ಗದ ವೇಷಧಾರಿ

By: ವರದಿ: ಪವಿತ್ರ ಬಿದ್ಕಲ್‍ಕಟ್ಟೆ ,ಚಿತ್ರ: ಪೌಲೋಸ್ ಬಿ
Subscribe to Oneindia Kannada

ತಲೆಯ ಮೇಲೊಂದು ಹಗ್ಗದ ಟೋಪಿ, ಅದರ ಮೇಲೆ ಮುಳ್ಳುಹಂದಿಯ ಬ್ಲ್ಯಾಕ್ ಆಂಡ್ ವೈಟ್ ಮುಳ್ಳು. ಹೀಗೆ ವಿಭಿನ್ನ ರೀತಿಯಲ್ಲಿ ಧರ್ಮಸ್ಥಳದ ದೀಪೋತ್ಸವದ ರಥಬೀದಿಯಲ್ಲಿ ತಿರುಗಾಡುತ್ತಾ ಎಲ್ಲರ ಗಮನ ಸೆಳೆಯುತ್ತಿರುವವರು ಚಿತ್ರದುರ್ಗದ ಉಮೇಶ್ ಇಟಗಿ.

1983ರಲ್ಲಿ ಹತ್ತನೇ ತರಗತಿಯಲ್ಲಿ ಕನ್ನಡವೊಂದನ್ನು ಬಿಟ್ಟು ಉಳಿದೆಲ್ಲಾ ವಿಷಯಗಳಲ್ಲಿ ನಪಾಸಾದ ಉಮೇಶ್ ಬದುಕು ಕಟ್ಟಿಕೊಂಡದ್ದು ಇಲೆಕ್ಟ್ರೀಷಿಯನ್ ಉದ್ಯೋಗದಿಂದ. ಮೊದಲಿನಿಂದಲೂ ಕಲೆಯಲ್ಲಿ ಆಸಕ್ತಿ ಹೊಂದಿದ್ದ ಇವರು ತನ್ನನ್ನು ಹವ್ಯಾಸಿ ಕಲೆಗಾರನಾಗಿ ಗುರುತಿಸಿಕೊಳ್ಳುವ ತುಡಿತದಲ್ಲಿದ್ದವರು. [ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ]

Meet A Unique Veshadhari at Dharmasthala Laksha Deepotsava 2016

ಸಾಮಾನ್ಯ ಕಣ್ಣಿಗೆ ಕಾಣುವ ವಸ್ತುಗಳು ಗಮನಸೆಳೆದಲ್ಲಿ ಅದನ್ನು ದೇಹದ ಮೇಲೆ ಹಾಕುವ ಅಭ್ಯಾಸವನ್ನು ಕ್ರಮೇಣ ರೂಢಿಸಿಕೊಂಡರು. ಮುಂದೆ ಅದೇ ಹವ್ಯಾಸವಾಗಿ ಮುಂದುವರೆದು ತಾವು ಭೇಟಿ ನೀಡುವ ಸ್ಥಳದಲ್ಲೆಲ್ಲಾ ವಿಭಿನ್ನ ರೀತಿಯಲ್ಲಿ ಗುರುತಿಸಿಕೊಳ್ಳಲು ಪ್ರಾರಂಭಿಸಿದರು.[ನ.24ರಿಂದ ನ.29ರ ವರೆಗೆ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ]

Meet A Unique Veshadhari at Dharmasthala Laksha Deepotsava 2016

ವೃತ್ತಿಬದುಕು ಒಂದೆಡೆಯಾದರೆ ದೇಶ ಸುತ್ತುವ ಅತೀವ ಆಕಾಂಕ್ಷೆ ಇನ್ನೊಂದೆಡೆ. ಇದೇ ಉದ್ದೇಶದಿಂದಾಗಿ ದೆಹಲಿಯಿಂದ ಕನ್ಯಾಕುಮಾರಿಯವರೆಗೂ ರೈಲಿನಲ್ಲಿ ಪ್ರಯಾಣ ಆರಂಭಿಸಿದರು.

Meet A Unique Veshadhari at Dharmasthala Laksha Deepotsava 2016

ಎಲ್ಲಿ ವಿಶೇಷ ಕಾರ್ಯಕ್ರಮಗಳಿರುತ್ತವೆಯೋ ಅಲ್ಲಿ ವಿಭಿನ್ನ ಕಾಸ್ಟ್ಯೂಮ್ ನೊಂದಿಗೆ ಪಾಲ್ಗೊಂಡು ತಮ್ಮ ಹವ್ಯಾಸಿ ಬದುಕಿನ ಪಯಣವನ್ನು ಮುಂದುವರೆಸುತ್ತಿದ್ದಾರೆ. ಇವರ ಈ ಆಸಕ್ತಿಯ ಕುರಿತಾದಂತೆ ಹಲವು ಕಾರ್ಯಕ್ರಮಗಳು ಮಾಧ್ಯಮಗಳಲ್ಲಿ ಪ್ರಸಾರಗೊಳ್ಳುತ್ತಿವೆ ಎಂಬ ಖುಷಿ ಉಮೇಶರದ್ದು.[ಧರ್ಮಸ್ಥಳ: 'ಭಗವಂತನೆಡೆಗಿನ ಭಕ್ತರ ನಡಿಗೆ']

ಹಗ್ಗದಲ್ಲೇ ವಿಭಿನ್ನ ರೀತಿಯಲ್ಲಿ ಟೋಪಿ ಮಾಡಿ ದಿನಕ್ಕೊಂದು ರೀತಿ ಕಾಣಿಸುವ 46ರ ಹರೆಯದ ಇಟಗಿಗೆ ಕನ್ನಡ ಭಾಷೆಯ ಮೇಲೆ ಎಲ್ಲಿಲ್ಲದ ಪ್ರೀತಿ. ನಾನು ಕನ್ನಡವನ್ನಲ್ಲದೇ ಇನ್ನಾವ ಭಾಷೆಯನ್ನೂ ಮಾತನಾಡುವುದಿಲ್ಲ ಎನ್ನುವ ಇವರು ಮೊಬೈಲ್ ಫ್ರೀ ಬದುಕು ಸಾಗಿಸುತ್ತಿದ್ದಾರೆ.

Meet A Unique Veshadhari at Dharmasthala Laksha Deepotsava 2016

ಧರ್ಮಸ್ಥಳ ಮಂಜುನಾಥ ಸನ್ನಿಧಿಯಲ್ಲಿ ನವೆಂಬರ್ 24 ರಿಂದ ನ.29ರ ವರೆಗೆ ಲಕ್ಷ ದೀಪೋತ್ಸವ ನಡೆಯಲಿದೆ. 6 ದಿನಗಳ ವರೆಗೆ ಈ ದೀಪೋತ್ಸವದಲ್ಲಿ ಸರ್ವಧರ್ಮ ಸಮ್ಮೇಳನ ಹಾಗೂ ವಿವಿಧ ಕಾರ್ಯಕ್ರಮಗಳು ಜರುಗಲಿವೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Dharmasthala Laksha Deepotsava 2016: Meet this unique Veshadhari Umesh Itagi from Chitradurga who knows only Kannada language his a Electrician by profession and a artist by hobby
Please Wait while comments are loading...