ಧರ್ಮಸ್ಥಳ: ‘ಭಗವಂತನೆಡೆಗಿನ ಭಕ್ತರ ನಡಿಗೆ’ಯೊಂದಿಗೆ ಚಾಲನೆ

By: ವರದಿ: ಪೂರ್ವಗೌಡ ಕರಿಯನೆಲ, ಚಿತ್ರಗಳು: ಚೈತನ್ಯ ಕುಡಿನಲ್ಲಿ
Subscribe to Oneindia Kannada

ಉಜಿರೆ, ನವೆಂಬರ್ 25: ಗುರುವಾರ ಎಂದಿನಂತಿರಲಿಲ್ಲ. ಉಜಿರೆ-ಧರ್ಮಸ್ಥಳದ ರಸ್ತೆಯುದ್ದಕ್ಕೂ ಭಕ್ತಿ-ಭಾವಗಳ ಅಪೂರ್ವ ಸಂಗಮ. ಶ್ರೀ ಮಂಜುನಾಥ ಸ್ವಾಮಿ ದೇಗುಲದೆಡೆಗಿನ ಶ್ರದ್ಧಾಪೂರ್ವಕ ನಡಿಗೆ ಕಂಗೊಳಿಸುತ್ತಿತ್ತು. ಧರ್ಮಸ್ಥಳದ ಲಕ್ಷದೀಪೋತ್ಸವದ ಸಂಭ್ರಮದ ಆರಂಭಿಕ ಉತ್ಸಾಹ ಅನಾವರಣಗೊಂಡಿತ್ತು.

ಧರ್ಮಸ್ಥಳ ಶ್ರೀ ಮಂಜುನಾಥ ಸ್ವಾಮಿ ದೇವಸ್ಥಾನದ ಲಕ್ಷದೀಪೋತ್ಸವ ಪ್ರಯುಕ್ತ ಉಜಿರೆಯಿಂದ ಧರ್ಮಸ್ಥಳದವರೆಗೆ ನಡೆದ 'ಭಗವಂತನೆಡೆಗೆ ನಮ್ಮ ನಡಿಗೆ' ಪಾದಯಾತ್ರೆಯ ದೃಶ್ಯವಿವರಗಳಿವು. ಈ ಮೂಲಕ ಕಾರ್ತಿಕ ಮಾಸದ ಮಹತ್ವದ ಕಾರ್ಯಕ್ರಮಕ್ಕೆ ಚಾಲನೆ ದೊರಕಿತು. [ನ.24ರಿಂದ ನ.29ರ ವರೆಗೆ ಧರ್ಮಸ್ಥಳದಲ್ಲಿ ಲಕ್ಷ ದೀಪೋತ್ಸವ]

ಉಜಿರೆ ಜನಾರ್ದನ ದೇವಸ್ಥಾನದ ಪ್ರಾಂಗಣದಲ್ಲಿ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ನಾಲ್ಕನೇ ವರ್ಷದ ಪಾದಯಾತ್ರೆಗೆ ಮಧ್ಯಾಹ್ನ ಮೂರು ಗಂಟೆಗೆ ಚಾಲನೆ ನೀಡಿದರು. [ಗ್ಯಾಲರಿ: ಧರ್ಮಸ್ಥಳ ಲಕ್ಷ ದೀಪೋತ್ಸವ ಸಂಭ್ರಮ]

ಬೆಳ್ತಂಗಡಿಯ ಸತ್ಯಸಾಯಿ ಭಜನಾಮಂಡಳಿಯ ಭಜನೆಯೊಂದಿಗೆ ಶುಭಾರಂಭಗೊಂಡ ಭಗವಂತನೆಡಗಿನ ಈ ನಡಿಗೆಯಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.

ಬೆಳ್ತಂಗಡಿ ತಾಲೂಕಿನ ವಿವಿಧ ಹೋಬಳಿಗಳ ವ್ಯಾಪ್ತಿಯ ಅನೇಕ ಹಳ್ಳಿಗಳ ಭಕ್ತಸಮೂಹ ರಸ್ತೆಯುದ್ದಕ್ಕೂ ಆರಾಧನೆಯ ಅಲೆಯನ್ನುಂಟುಮಾಡಿತ್ತು. ಎಸ್‍ಡಿಎಂ ಶಿಕ್ಷಣ ಸಂಸ್ಥೆಗಳ ಬೋಧಕ-ಬೋಧಕೇತರ ಸಿಬ್ಬಂದಿ ಭಾಗವಹಿಸಿದ್ದರು.

ಭಗವಂತನೆಡೆಗಿನ ಭಕ್ತರ ನಡಿಗೆ’ಯೊಂದಿಗೆ ಚಾಲನೆ

ಭಗವಂತನೆಡೆಗಿನ ಭಕ್ತರ ನಡಿಗೆ’ಯೊಂದಿಗೆ ಚಾಲನೆ

ವಿಶೇಷ ಮೆರವಣಿಗೆ: ಶ್ರೀ ಮಂಜುನಾಥ ಸ್ವಾಮಿ ಮೂರ್ತಿಯ ಪೋಟೋದೊಂದಿಗೆ ಪಾದಯಾತ್ರೆ ಹೊರಟಿತು. ಯಕ್ಷಗಾನ ವೇಷದಾರಿಗಳು, ಗೊಂಬೆಯ ವೇಷಧಾರಿಗಳು ಈ ಸಂದರ್ಭದಲ್ಲಿ ಗಮನ ಸೆಳೆದರು.

ಉಜಿರೆಯಿಂದ ಧರ್ಮಸ್ಥಳದೆಡೆಗೆ ನಡಿಗೆ

ಉಜಿರೆಯಿಂದ ಧರ್ಮಸ್ಥಳದೆಡೆಗೆ ನಡಿಗೆ

ಉಜಿರೆ ಜನಾರ್ದನ ದೇವಸ್ಥಾನದ ಪ್ರಾಂಗಣದಲ್ಲಿ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ನಾಲ್ಕನೇ ವರ್ಷದ ಪಾದಯಾತ್ರೆಗೆ ಮಧ್ಯಾಹ್ನ ಮೂರು ಗಂಟೆಗೆ ಚಾಲನೆ ನೀಡಿದರು. ಬೆಳ್ತಂಗಡಿಯ ಸತ್ಯಸಾಯಿ ಭಜನಾಮಂಡಳಿಯ ಭಜನೆಯೊಂದಿಗೆ ಶುಭಾರಂಭಗೊಂಡ ಭಗವಂತನೆಡಗಿನ ಈ ನಡಿಗೆಯಲ್ಲಿ ಹತ್ತುಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು.

ಸಂಭ್ರಮದ ಪಾದಯಾತ್ರೆ

ಸಂಭ್ರಮದ ಪಾದಯಾತ್ರೆ

"ನಾವು ಕಳೆದ ಎರಡು ವರ್ಷಗಳಿಂದ ಪಾದಯಾತ್ರೆಯಲ್ಲಿ ಪಾಲ್ಗೋಳ್ಳುತ್ತಿದ್ದೇನೆ. ತುಂಬಾ ಖುಷಿಯಾಗುತ್ತಿದೆ" ಎಂದು ಗ್ರಾಮಾಭಿವೃದ್ದಿ ಸಂಘದ ಸದಸ್ಯೆ ಯಶೊದಾ ಪ್ರತಿಕ್ರಿಯಿಸಿದರು.

ದಾರಿಯುದ್ದಕ್ಕೂ ಪಾನಕ ವ್ಯವಸ್ಥೆ

ದಾರಿಯುದ್ದಕ್ಕೂ ಪಾನಕ ವ್ಯವಸ್ಥೆ

ದಾರಿಯಲ್ಲಿ ಭಕ್ತರು ಭಜನೆಯನ್ನು ಮಾಡುತ್ತಾ ಭಕ್ತಿಭಾವದಿಂದ ಧರ್ಮಸ್ಥಳಕ್ಕೆ ತೆರಳುತ್ತಿದ್ದ ವೇಳೆ ದಾರಿ ಬದಿಯಲ್ಲಿ ಪಾನಕದ ವ್ಯವಸ್ಥೆ ಮಾಡಲಾಗಿತ್ತು. ದಾರಿಯುದ್ದಕ್ಕೂ ಅವಲಕ್ಕಿ, ಐಸ್‍ಕ್ರೀಮ್. ಚಹಾ , ಶರಬತ್ತು, ತಂಪು ಪಾನೀಯಗಳನ್ನು ವಿತರಿಸಲಾಗುತ್ತಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
The annual Laksha Deepotsava celebrations begins at Sri Kshetra Dharmasthala from November 24, Monday. The festivities will be held till November 29, 2016. A Pdayatra was attended by thousands of devotees.
Please Wait while comments are loading...