ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಜಲೆಲೆಯ ಮೇಲೆ ಉರುಳಲು ಸಿದ್ಧ ಎನ್ನುತ್ತಿದ್ದಾರೆ ಮಲೆಕುಡಿಯರು

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಡಿಸೆಂಬರ್, 02: ಕುಕ್ಕೆ ಸುಬ್ರಹ್ಮಣ್ಯ ದೇವಾಲಯದಲ್ಲಿ ಮಡೆ ಮಡೆಸ್ನಾನ ಬದಲು ಎಡೆ ಸ್ನಾನ ಆಚರಣೆಗೆ ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು, ದೇವಸ್ಥಾನದ ಆಡಳಿತ ಮಂಡಳಿ ಡಿಸೆಂಬರ್ 15ರಂದು ಇರುವ ರಥೋತ್ಸವದಂದು ಎಡೆ ಸ್ನಾನ ನೆರವೇರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದೆ.

ಎಡೆ ಸ್ನಾನದ ಆದೇಶ ಪ್ರಶ್ನಿಸಿ ಸುಬ್ರಹ್ಮಣ್ಯದ ಭಾಸ್ಕರ ಬೆಂಬೋಡಿ ಎಂಬುವರು ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ತಂದಿದ್ದರು. ಕಳೆದ ಡಿಸೆಂಬರ್ 12ರಂದು ಸುಪ್ರೀಂ ಕೋರ್ಟ್‌ನಿಂದ ತಡೆಯಾಜ್ಞೆ ತೆರವುಗೊಳಿಸಿದೆ. ಇದರಿಂದ ಮಡೆಸ್ನಾನದ ಬದಲಿಗೆ ಎಡೆ ಸ್ನಾನಕ್ಕೆ ಅವಕಾಶ ಮಾಡಿಕೊಡಲಾಗುವುದು ಎಂದು ಜಿಲ್ಲಾಧಿಕಾರಿ ಎ.ಬಿ ಇಬ್ರಾಹಿಂ ಸ್ಪಷ್ಟ ಪಡಿಸಿದ್ದಾರೆ.[ಮಡೆಸ್ನಾನಕ್ಕೆ ಪರ್ಯಾಯ ವ್ಯವಸ್ಥೆ ಏನು? ಹೀಗೂ ಮಾಡಬಹುದು]

Kukke subramanya temple committee organize Ede snana on December 25th

ಕೆಲ ದಿನಗಳ ಹಿಂದೆ ಸುಬ್ರಹ್ಮಣ್ಯದಲ್ಲಿ ಮಲೆಕುಡಿಯರು ಎಂಜಲೆಲೆಯ ಮೇಲೆ ಉರುಳುಸೇವೆ ಮಾಡುವ ಹರಕೆ ನಡೆಸುವುದಾಗಿ ಹೇಳಿದ್ದರು. ಸಾಂಪ್ರದಾಯಿಕ ಮಡೆಸ್ನಾನ ಹೊರತು ಪಡಿಸಿ ದೇವಾಲಯದಲ್ಲಿ ಎಲ್ಲ ರೀತಿಯ ಹರಕೆ ತೀರಿಸಲು ಅವಕಾಶವಿದೆ ಎಂದು ಜಿಲ್ಲಾಧಿಕಾರಿ ಎ. ಬಿ ಇಬ್ರಾಹಿಂ ಆದೇಶ ಹೊರಡಿಸಿದ್ದಾರೆ. ಆದರೂ ಮಲೆಕುಡಿಯರು ಎಂಜಲೆಲೆಯ ಮೇಕೆ ಉರುಳಲು ಸಿದ್ದ ಎನ್ನುತ್ತಿದ್ದಾರೆ.[ಮಡೆ ಮಡೆ ಸ್ನಾನ: ಹೈ ಆದೇಶಕ್ಕೆ ಸುಪ್ರೀಂ ಮಧ್ಯಂತರ ತಡೆ]

ಕಳೆದ 2012 ನವೆಂಬರ್ 8ರಂದು ಹೈಕೋರ್ಟ್, 'ಯಾವುದೇ ಪಂಕ್ತಿ ಭೇದ ಮಾಡುವ ಹಾಗಿಲ್ಲ. ಜಾತಿ ,ಧರ್ಮ, ಲಿಂಗ ತಾರತಮ್ಯ ಉತ್ತೇಜಿಸುವಂತಿಲ್ಲ ಎಂಬ ಷರತ್ತಿನೊಂದಿಗೆ ಮಡೆಸ್ನಾನದ ಬದಲಿಗೆ ಎಡೆ ಸ್ನಾನ ಮಾಡುವ ವ್ಯವಸ್ಥೆ ಪಾಲಿಸಬೇಕು' ಎಂದು ಆದೇಶದಲ್ಲಿ ತಿಳಿಸಿತ್ತು.

English summary
Kukke subramanya temple committee organize Ede snana on Friday, December 25th
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X