ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರ ಶೀಘ್ರದಲ್ಲೇ ಆಲ್ಕೋಹಾಲ್ ಮುಕ್ತ!

Posted By:
Subscribe to Oneindia Kannada

ಮಂಗಳೂರು, ಆಗಸ್ಟ್ 7: ದಕ್ಷಿಣಕನ್ನಡದ ಪುಣ್ಯ ಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರವು ಇನ್ನು ಶೀಘ್ರದಲ್ಲೇ ಆಲ್ಕೋಹಾಲ್ ಮುಕ್ತವಾಗಲಿದೆ.

ಭಾರೀ ಮಳೆಗೆ ತುಂಬಿ ಹರಿಯುತ್ತಿರುವ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರಾ

ಇತ್ತೀಚೆಗೆ ನಡೆದ ಗ್ರಾಮ ಪಂಚಾಯ್ತಿಯ ಸಭೆಯಲ್ಲಿ ಈ ಕುರಿತಂತೆ ನಿರ್ಧಾರ ಕೈಗೊಳ್ಳಲಾಗಿದ್ದು, ಈ ಬಗ್ಗೆ ಠರಾವು ಕೈಗೊಳ್ಳಲಾಗಿದೆ.

KUKKE SUBRAHMANYA VILLAGE MAY SOON BE ALCOHOL-FREE

ಸುಬ್ರಹ್ಮಣ್ಯ ಗ್ರಾಮ ಪಂಚಾಯಿತಿಯು ಕುಕ್ಕೆ ಸುಬ್ರಹ್ಮಣ್ಯ ಹಾಗೂ ಯೆಣೇಕಲ್ಲು ಎಂಬ ಎರಡು ಹಳ್ಳಿಗಳನ್ನು ಒಳಗೊಂಡಿದೆ. ಇದೀಗ, ಗ್ರಾಮ ಪಂಚಾಯ್ತಿಯ ಈ ಒಮ್ಮತದ ನಿರ್ಧಾರದಿಂದಾಗಿ, ಸುಬ್ರಹ್ಮಣ್ಯ ಮಾತ್ರವಲ್ಲದೆ, ಯಣೇಕಲ್ ನಲ್ಲೂ ಮದ್ಯ ಮಾರಾಟ ನಿರ್ಬಂಧವಾಗಲಿದೆ.

ಭಾರೀ ಮಳೆ, ಕುಕ್ಕೆ ಸುಬ್ರಹ್ಮಣ್ಯದ ಸ್ನಾನಘಟ್ಟ ಮುಳುಗಡೆ

ಈ ಹಿನ್ನೆಲೆಯಲ್ಲಿ, ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ಈಗಾಗಲೇ ಚಾಲ್ತಿಯಲ್ಲಿರುವ ಮದ್ಯದಂಗಡಿಗಳ ಲೈಸನ್ಸ್ ಅನ್ನು ರದ್ದುಗೊಳಿಸಲು ನಿರ್ಧರಿಸಲಾಗಿದೆ.

Kukke Subramanya temple tower damaged by thunder on Sunday

ಈ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ 2,300 ಮನೆಗಳಿದ್ದು, ಆದರೆ, ಈ ಕ್ಷೇತ್ರಕ್ಕೆ ಬರುವ ಪ್ರವಾಸಿಗರ ಸಂಖ್ಯೆ ಪ್ರತಿ ದಿನಕ್ಕೆ 25,000ರಿಂದ 50,000ವರೆಗೆ ಇರುತ್ತದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
One of the top revenue earning temples of the State, Kukke Shree Subrahmanya Temple located in Subrahmanya in Dakshina Kannada district about 100 kilometers from Mangaluru, may soon be declared alcohol-free.
Please Wait while comments are loading...