ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸತತ 7ನೇ ಬಾರಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಂಬರ್ 1 ಸ್ಥಾನ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಏಪ್ರಿಲ್ 28: ರಾಜ್ಯದ ಧಾರ್ಮಿಕ ದತ್ತಿ ಇಲಾಖೆ ಸುಪರ್ದಿಯಲ್ಲಿ ಅತೀ ಹೆಚ್ಚು ಆದಾಯವುಳ್ಳ ದೇವಸ್ಥಾನವಾಗಿ ಸತತ ಏಳನೇ ಬಾರಿಯೂ ನಂಬರ್ 1 ಸ್ಥಾನವನ್ನು ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಉಳಿಸಿಕೊಂಡಿದೆ.

ಪ್ರತಿವರ್ಷದಂತೆ ಈ ಬಾರಿಯೂ ದಕ್ಷಿಣಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ರಾಜ್ಯದ ಅತೀ ಹೆಚ್ಚು ಆದಾಯ ತರುವ ದೇವಾಲಯವಾಗಿ ಹೊರಹೊಮ್ಮಿದ್ದು, ಈ ಬಾರಿ ದೇವಸ್ಥಾನದ ಆದಾಯ ಸುಮಾರು 95.92 ಕೋಟಿ ರೂಪಾಯಿ ದಾಟಿದೆ.

ಬೆಂಗಳೂರಿನ ದೇವಾಲಯದಲ್ಲಿ ಮೊಟ್ಟಮೊದಲ ಬಾರಿಗೆ ಡ್ರೆಸ್ ಕೋಡ್ ಜಾರಿ ಬೆಂಗಳೂರಿನ ದೇವಾಲಯದಲ್ಲಿ ಮೊಟ್ಟಮೊದಲ ಬಾರಿಗೆ ಡ್ರೆಸ್ ಕೋಡ್ ಜಾರಿ

500 ಹಾಗೂ 1000 ನೋಟುಗಳ ಬ್ಯಾನ್ ಆದ ನಂತರವೂ ದೇವಸ್ಥಾನದ ಆದಾಯ ಗಣನೀಯವಾಗಿ ಏರಿಕೆಯಾಗಿರುವುದು ಗಮನಾರ್ಹ. ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರವಾದ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಬರುವ ಭಕ್ತಾಧಿಗಳ ಸಂಖ್ಯೆಯಲ್ಲಿ ಗಣನೀಯವಾಗಿ ಏರಿಕೆಯಾಗುತ್ತಿದ್ದು, ಇಲ್ಲಿ ಭಕ್ತಾಧಿಗಳು ನೀಡುವ ಕಾಣಿಕೆಯೂ ಹೆಚ್ಚಾಗುತ್ತಿದೆ.

Kukke Subrahmanya temple named as rich temple of Karnataka

ಆರ್ಥಿಕ ವರ್ಷ 2017-18ರಲ್ಲಿ ದೇವಸ್ಥಾನಕ್ಕೆ 95,92,54,363 ರೂಪಾಯಿ ಆದಾಯ ಬಂದಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಇದು ಸುಮಾರು 7 ಕೋಟಿ ರೂಪಾಯಿ ಹೆಚ್ಚಿನ ಆದಾಯವಾಗಿದೆ. ರಾಜ್ಯದಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ಸತತವಾಗಿ 7 ಬಾರಿ ನಂಬರ್ ವನ್ ಸ್ಥಾನವನ್ನು ಉಳಿಸಿಕೊಂಡಿದೆ.

ಈ ಬಾರಿ 50 ಸಾವಿರಕ್ಕೂ ಅಧಿಕ ಸರ್ಪಸಂಸ್ಕಾರ ಹರಕೆ, 90 ಬ್ರಹ್ಮರಥ ಸೇವೆ , ದಿನಕ್ಕೆ ಸರಾಸರಿ 500 ಆಶ್ಲೇಷ ಬಲಿ ಸೇವೆ ನಡೆದಿದ್ದು, ಇತರ ಸೇವೆಗಳಾದ ಶೇಷ ಸೇವೆ, ಪಂಚಾಮೃತ , ಮಹಾಭಿಷೇಕ ಇತ್ಯಾದಿ ಸೇವೆಗಳು ಗಣನೀಯ ಪ್ರಮಾಣದಲ್ಲಿ ಏರಿಕೆಯಾಗಿದೆ. ದೇವಸ್ಥಾನದ ಆದಾಯ ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಛತ್ರಗಳ ಬಾಡಿಗೆ ಮತ್ತು ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯ ಬರುತ್ತದೆ.

Kukke Subrahmanya temple named as rich temple of Karnataka

ಸತತ 7ನೇ ಬಾರಿ ನಂಬರ್ 1 ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನ ದೇವಸ್ಥಾನದ ಆದಾಯ ಹಿಂದಿನ ವರ್ಷಗಳಲ್ಲಿ, 2006-07 ರಲ್ಲಿ 19.76 ಕೋಟಿ, 2007-08 ರಲ್ಲಿ 24.44 ಕೋಟಿ, 2008-09 ರಲ್ಲಿ 31 ಕೋಟಿ, 2009-10 ರಲ್ಲಿ 38.51 ಕೋಟಿ, 2011-12 ರಲ್ಲಿ 56.24 ಕೋಟಿ, 2012-13 66.76 ಕೋಟಿ, 2013-14 ರಲ್ಲಿ 68 ಕೋಟಿ, 2014-15 ರಲ್ಲಿ 77.60 ಕೋಟಿ, 2016-17 ರಲ್ಲಿ 89.65 ಕೋಟಿ ಯಾಗಿತ್ತು.

Kukke Subrahmanya temple named as rich temple of Karnataka

2000ನೇ ಇಸವಿಯಲ್ಲಿ ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಆದಾಯ ಕೇವಲ 8 ಕೋಟಿ ರೂಪಾಯಿ ಆಗಿತ್ತು. 2007-08ನೇ ಇಸವಿ ನಂತರ ಕುಕ್ಕೆ ಸುಬ್ರಹ್ಮಣ್ಯ ರಾಜ್ಯದ ಶ್ರೀಮಂತ ದೇವಾಲಯ ಎಂದು ಪರಿಗಣಿತವಾಗಿದೆ. ಸತತ 7ನೇ ವರ್ಷವೂ ತನ್ನ ನಂಬರ್ 1 ಸ್ಥಾನವನ್ನು ಉಳಿಸಿಕೊಂಡಿದೆ.

English summary
Kukke Subrahmanya swamy temple named consicitivley 7th time as richest temple of Karnataka state. In this financial year Temple gets rs.95.92 crore profit.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X