ಅಂತಾರಾಷ್ಟ್ರೀಯ ಮ್ಯಾನ್‌ ಆಫ್‌ ದಿ ಇಯರ್‌ ಸ್ಪರ್ಧೆಗೆ ಕುಡ್ಲ ಯುವಕ

Posted By:
Subscribe to Oneindia Kannada

ಮಂಗಳೂರು, ಜುಲೈ 31 : ಅಂತಾರಾಷ್ಟ್ರೀಯ ಮ್ಯಾನ್ ಆಫ್ ದಿ ಇಯರ್-2017 ಸ್ಪರ್ಧೆಗೆ ಮಂಗಳೂರು ಮೂಲದ ಯುವಕ ಅಲಿಸ್ಟರ್ ಡಿಸೋಜಾ ಆಯ್ಕೆಯಾಗಿದ್ದಾರೆ.

ಮಂಗಳೂರಿನ ಬೆಡಗಿ ಶ್ರೀನಿಧಿ ಸುಪ್ರ ವಿಶ್ವಸುಂದರಿ ಜತೆ ಮಾತುಕತೆ

ಇಂಡೋನೇಷ್ಯಾದಲ್ಲಿ ಆಗಸ್ಟ್ 11 ರಿಂದ 19ರ ವರೆಗೆ ನಡೆಯಲಿರುವ ಈ ಪುರುಷರ ಸೌಂದರ್ಯ ಸ್ಪರ್ಧೆಯಲ್ಲಿ ಪಾಲ್ಗೊಳ್ಲಲು ಅಲಿಸ್ಟರ್ ಡಿಸೋಜಾ ಅವರು ಭರ್ಜರಿ ತಯಾರಿ ನಡೆಸಿದ್ದಾರೆ.

Kudla Hunk Alester selected for Man of the Year fashion show 2017

ಆರು ಅಡಿ ಎರಡು ಇಂಚು ಎತ್ತರದ ಈ ಚೆಲುವ, ಭಾರತದಲ್ಲಿ ನಡೆದ ಮಿಸ್ಟರ್ ಇಂಡಿಯಾ ಮ್ಯಾನ್ ಹಂಟ್ ಇಂಟರ್ ನ್ಯಾಷನಲ್ ನ ಅಂತಿಮ ಸುತ್ತಿನಲ್ಲಿ "ಮಿಸ್ಟರ್ ಸ್ಟೈಲ್" ಕಿರೀಟ ಪಡೆದು ಅಂತಾರಾಷ್ಟ್ರೀಯ ಮ್ಯಾನ್ ಆಫ್ ದಿ ಇಯರ್-2017 ಸ್ಪರ್ಧೆಗೆ ಆಯ್ಕೆಗೊಂಡ ಏಕೈಕ ಸ್ಪರ್ಧಿ

ಯುವತಿಯರಿಗೆ ನಡೆಯುವ ವಿಶ್ವ ಸುಂದರಿ ಸ್ಪರ್ಧೆ ಮಾದರಿಯಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುಂದರ ಯುವಕರ ಆಯ್ಕೆಗಾಗಿ ಈ ಸ್ಪರ್ಧೆ ನಡೆಯುತ್ತಿದೆ .

ಮೊದಲ ಸುತ್ತಿನಲ್ಲಿ ಆನ್ ಲೈನ್ ಮೂಲಕ ಸ್ಪರ್ಧಿಗಳನ್ನು ಗುರುತಿಸಿ ಆಯ್ಕೆ ಮಾಡಲಾಯಿತು. ಬಳಿಕ 2016 ಸೆಪ್ಟೆಂಬರ್ ನಲ್ಲಿ ದೆಹಲಿಯಲ್ಲಿ ಅಂತಿಮ ಸುತ್ತಿಗೆ 12 ಸ್ಪರ್ಧಿಗಳ ನಡುವೆ ನಡೆದ ಸ್ಪರ್ಧೆಯಲ್ಲಿ 'ಮಿಸ್ಟರ್ ಸ್ಟೈಲ್ ನೊಂದಿಗೆ ಅಂತಾರಾಷ್ಟ್ರೀಯ ಸ್ಪರ್ಧೆಗೆ ಅಲಿಸ್ಟರ್ ಡಿಸೋಜಾ ಲಗ್ಗೆ ಇಟ್ಟರು.

ಇಂಟೆಲಿಜೆನ್ಸ್, ಫಿಟ್ನೆಸ್, ಫೋಟೋಸ್, ಐಕ್ಯೂ, ಪ್ರಶ್ನಾವಳಿ ಹೀಗೆ ನಾನಾ ಹಂತದ ಕಠಿಣ ಸವಾಲು ಎದುರಿಸಿ ಮುನ್ನುಗ್ಗಿ ಬಂದ ಅಲಿಸ್ಟರ್ ಅವರು ತಡುವ ಉಡುಪುಗಳಿಗೆ ಬೆಂಗಳೂರಿನ ಅಶೋಕ್ ವಿನ್ಯಾಸ ಮಾಡುತ್ತಿದ್ದಾರೆ.

ಕಳೆದ ಒಂದು ವರ್ಷಗಳಿಂದ ಇದಕ್ಕಾಗಿ ಪೂರ್ವ ಸಿದ್ಧತೆ ಆಯ್ಕೆ ಪ್ರಕ್ರಿಯೆ ನಡೆಯುತ್ತಿದೆ. ರಾಂಪ್ ವಾಕ್, ಫೋಟೋ ಶೂಟ್ ಆಯಾ ದೇಶದ ಪರಿಪಾಲಕ ವಸ್ತ್ರ ವಿನ್ಯಾಸದ ಪ್ರದರ್ಶನ ಬುದ್ಧಿವಂತಿಕೆ ರೂಪ ಹೀಗೆ ನಾನಾ ರೀತಿಯ ಪರೀಕ್ಷೆಗಳಿವೆ.

Mangaluru Police innovative way to punish traffic violators

ಎಲ್ಲಾ ಸವಾಲುಗಳನ್ನು ಸಮರ್ಥ ರೀತಿಯಲ್ಲಿ ಎದುರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದೇನೆ ಎಂದು ಅಲಿಸ್ಟರ್ ಒನ್ ಇಂಡಿಯಾ ಕನ್ನಡಕ್ಕೆ ತಿಳಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
23 years old, 6 ft 2 inches Alester D’Souza from Mangaluru has been selected for "Man of the year 2017" fashion event at Indonesia. Alester has also stepped into acting in Kannada movies which are yet to be released.
Please Wait while comments are loading...