ಮಂಗಳೂರಿನ ಕದ್ರಿಯಲ್ಲಿ ಸೃಷ್ಟಿಯಾದ ನಂದಗೋಕುಲ

Posted By:
Subscribe to Oneindia Kannada

ಮಂಗಳೂರು, ಸೆಪ್ಟೆಂಬರ್ 14: ನೆನೆದವರ ಮನದಲ್ಲಿ ನೋಡುವ ಎಲ್ಲೆಲ್ಲೂ ಭಗವಂತನಿರುತ್ತಾನೆ ಎನ್ನುವಂತೆ ಅಲ್ಲಿ ಎಲ್ಲೆಡೆ ಕೃಷ್ಣನೇ ಕಂಡು ಬರುತಿದ್ದ. ಇದು ಮಂಗಳೂರಿನ ಕದ್ರಿ ದೇವಾಲಯದ ವಠಾರದಲ್ಲಿ ಬುಧವಾರ ಕಂಡು ಬಂದ ದೃಶ್ಯಕಾವ್ಯ.

ಉಡುಪಿಯಲ್ಲಿ ಬುಧವಾರ ಕೃಷ್ಣಾಷ್ಟಮಿ, ಗುರುವಾರ ವಿಟ್ಲಪಿಂಡಿ ಉತ್ಸವ

ಕಲ್ಕೂರ ಪ್ರತಿಷ್ಠಾನ ಕಳೆದ 3 ದಶಕಗಳಿದ ಆಯೋಜಿಸಿಕೊಂಡು ಬಂದ ರಾಷ್ಟ್ರಮಟ್ಟದ ಮಕ್ಕಳ ಉತ್ಸವ ಹಾಗೂ ಶ್ರೀಕೃಷ್ಣ ವೇಷ ಸ್ಪರ್ಧೆಯಲ್ಲಿ ವಿವಿಧ ವಯೋಮಾನದ ಸ್ಪರ್ಧಿಗಳು ಭಾಗವಹಿಸುವ ಮೂಲಕ ಕೃಷ್ಣ ಲೋಕವನ್ನೇ ಸೃಷ್ಠಿಸಿದ್ದರು.

In Pics : ವಿಟ್ಲಪಿಂಡಿಯಲ್ಲಿ ಬೆಣ್ಣೆ ಕದಿಯಲು ಬಂದ ಬಾಲಕೃಷ್ಣ

ಸತತ ಮೂರು ದಶಕಗಳಿಂದ ಸ್ಪರ್ಧೆ

ಸತತ ಮೂರು ದಶಕಗಳಿಂದ ಸ್ಪರ್ಧೆ

ಮಂಗಳೂರಿನ ಕಲ್ಕೂರ ಪ್ರತಿಷ್ಠಾನ ಕಳೆದ ಮೂರು ದಶಕಗಳಿಂದ ಕೃಷ್ಣಜನ್ಮಾಷ್ಟಮಿಯ ಪ್ರಯುಕ್ತ ವಿವಿಧ ವಯೋಮಾನದವರಿಗಾಗಿ ರಾಷ್ಟ್ರಮಟ್ಟದ ಕೃಷ್ಣ ವೇಷ ಸ್ಪರ್ಧೆಯನ್ನು ಆಯೋಜಿಸಿಕೊಂಡು ಬರುತ್ತಿದೆ.

28 ವಿಭಾಗಗಳಲ್ಲಿ ಸ್ಪರ್ಧೆ

28 ವಿಭಾಗಗಳಲ್ಲಿ ಸ್ಪರ್ಧೆ

ಈ ಬಾರಿ 28 ವಿಭಾಗಗಳಲ್ಲಿ 8 ವೇದಿಕೆಯಲ್ಲಿ ಸ್ಪರ್ಧೆಗಳು ನಡೆದವು. ಕದ್ರಿ ಮಂಜುನಾಥೇಶ್ವರ ದೇವಾಲಯದ ಆವರಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ ಕೇವಲ ದಕ್ಷಿಣ ಕನ್ನಡ ಜಿಲ್ಲೆಯ ಜನರು ಮಾತ್ರವಲ್ಲದೇ ಇತರ ರಾಜ್ಯದ ಜನರೂ ತಮ್ಮ ಚಿಣ್ಣರೊಂದಿಗೆ ಪಾಲ್ಗೊಂಡಿದ್ದರು.

ಸ್ಪರ್ಧೆಯ ವಿಶೇಷ

ಸ್ಪರ್ಧೆಯ ವಿಶೇಷ

ಸ್ಪರ್ಧೆಗಾಗಿ ಇಲ್ಲಿ ಮಕ್ಕಳು ಭಾಗವಹಿಸುವುದಕ್ಕೆ ಬದಲು ಈ ಸ್ಪರ್ಧೆಗೆ ಭಾವನಾತ್ಮಕವಾದ ಸಂಬಂಧಗಳನ್ನು ಜೋಡಿಸಲಾಗಿದೆ. ಈ ಹಿಂದೆ ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಕ್ಕಳು ಹಾಗೂ ಯುವತಿಯರು ಮದುವೆಯಾದ ಬಳಿಕ ತಮ್ಮ ಮಕ್ಕಳ ಜೊತೆಗೆ ಇಲ್ಲಿಗೆ ಆಗಮಿಸಿ ಅವರನ್ನು ಕೃಷ್ಣ ವೇಷ ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಅಣೆ ಮಾಡುವುದು ಈ ಸ್ಪರ್ಧೆಯ ವಿಶೇಷ.

ಜಾತಿ, ಧರ್ಮ, ಕುಲ ಗೋತ್ರಗಳ ಎಲ್ಲೆಯಿಲ್ಲ

ಜಾತಿ, ಧರ್ಮ, ಕುಲ ಗೋತ್ರಗಳ ಎಲ್ಲೆಯಿಲ್ಲ

ಜಾತಿ, ಧರ್ಮ, ಕುಲ ಗೋತ್ರಗಳ ಎಲ್ಲೆಯನ್ನು ಮೀರಿ ಜನರು ಈ ಉತ್ಸವದಲ್ಲಿ ಭಾಗವಹಿಸುತ್ತಾರೆ. 28 ವಿಭಾಗಗಳಲ್ಲಿ ಇಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗುತ್ತದೆ. ವಯೋಮಾನಕ್ಕೆ ತಕ್ಕಂತೆ ಇಲ್ಲಿ ಸ್ಪರ್ಧೆಯಿದ್ದು ಕಂದ ಕೃಷ್ಣ, ಮುದ್ದು ಕೃಷ್ಣ, ತುಂಟ ಕೃಷ್ಣ, ಬಾಲಕೃಷ್ಣ, ಕಿಶೋರಕೃಷ್ಣ, ಶ್ರೀಕೃಷ್ಣ, ಗೀತಾಕೃಷ್ಣ, ಯಕ್ಷಕೃಷ್ಣ, ರಾಧಾ ಕೃಷ್ಣ, ಯಶೋಧಾಕೃಷ್ಣ ಹೀಗೆ ಸ್ಪರ್ಧೆಗಳನ್ನು ವಿಭಾಗಿಸಲಾಗುತ್ತದೆ.

2000 ಕ್ಕೂ ಮಿಕ್ಕಿ ಚಿಣ್ಣರು ಭಾಗಿ

2000 ಕ್ಕೂ ಮಿಕ್ಕಿ ಚಿಣ್ಣರು ಭಾಗಿ

ಈ ಬಾರಿ ಈ ಸ್ಪರ್ಧೆಯಲ್ಲಿ 2000ಕ್ಕೂ ಮಿಕ್ಕಿ ಚಿಣ್ಣರು ಭಾಗವಹಿಸಿದ್ದರು. ಇದೊಂದು ಸ್ಪರ್ಧೆ ಮಾತ್ರವಾಗಿರದೇ ಇಲ್ಲಿ ಭಾವನಾತ್ಮಕ ಸಂಬಂಧಗಳಿಗೆ ಹೆಚ್ಚಿನ ಮಹತ್ವವನ್ನು ನೀಡಲಾಗುತ್ತದೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೂ ಇಲ್ಲಿ ಬಹುಮಾನಗಳನ್ನು ನೀಡಲಾಗುತ್ತಿದ್ದು ಸ್ಪರ್ಧಾ ಮನೋಭಾವವನ್ನು ಬೆಳೆಸುವ ಆಶಯವೂ ಇದರದ್ದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
To mark the Sri Krishna Janmashtami, Kalkura Prathishtana organized a National Children’s Festival “Krishna Vesha Sparde 2017”, at the Kadri Shri Manjunatha Temple here on September 13.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ