ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರು: ಗೋಪಾಲನ ಕಾಣಲು ಬಂದ ಗೋಮಾತೆ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್ 14 : ಶ್ರೀಕೃಷ್ಣನ ಹಲವು ನಾಮಗಳಲ್ಲಿ ವಿಠಲ ಕೂಡ ಒಂದು. ಅಂತೆಯೇ ಕೃಷ್ಣನಿಗೆ ಪ್ರಿಯವಾದ ಗೋ ಸಂಕುಲವನ್ನು ವಿಠಲ ಎಂದೂ ಕರೆಯುತ್ತಾರೆ. ವಿಠಲನ ಜನ್ಮಾಷ್ಟಮಿಯ ಅಂಗವಾಗಿ ಶ್ರೀಕೃಷ್ಣನ ಊರಾದ ಉಡುಪಿ ಸೇರಿದಂತೆ ಎಲ್ಲೆಡೆ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ.

ದೇವಾಲಯದಲ್ಲಿ ಒಂದೆಡೆ ಜನರು ಶ್ರೀಕೃಷ್ಣನ ದರ್ಶನ ಪಡೆದು ಪುನೀತರಾದರೆ ಇನ್ನೊಂದೆಡೆ ಗೋಪಾಲಕನನ್ನು ಕಾಣಲು ಗೋಮಾತೆಯೇ ದೇವಾಲಯಕ್ಕೆ ಆಗಮಿಸಿದ್ದಾಳೆ. ಆ ಫೊಟೊ ಇದೀಗ ಸಾಮಾಜಿಕ ಜಾತಾಣಗಳಲ್ಲಿ ವೈರಲ್ ಆಗಿದೆ.

krishna janmasthami cow awaits to see krishna Gopala in mangaluru

ಮಂಗಳೂರು ಹೊರವಲಯದ ಕುಂಪಲದ ಗುರುನಗರದ ಶ್ರೀ ಕೃಷ್ಣ ಮುಖ್ಯಪ್ರಾಣ ದೇವಸ್ಥಾನದಲ್ಲಿ ಶ್ರೀಕೃಷ್ಣ ಜನ್ಮ ಸ್ತಿಯ ಪ್ರಯುಕ್ತ ದೇವಾಲಯದಲ್ಲಿ ವಿಶೇಷ ಪೂಜೆ ನೆರವೇರಿಸಲಾಗುತಿತ್ತು. ಈ ಸಂದರ್ಭದಲ್ಲಿ ಗೋಪಾಲಕನ ಪೂಜೆಯನ್ನು ಕಣ್ತುಂಬಿಕೊಳ್ಳಲು ಅಲ್ಲಿಗೆ ಗೋವೊಂದು ಆಗಮಿಸಿತ್ತು.

ಶ್ರೀಕೃಷ್ಣನಿಗೆ ಪೂಜೆ ನೆರವೇರಿಸಿ ಮಹಾಮಂಗಳಾರತಿ ನಡೆಯುವವರೆಗೂ ದೇವಾಲಯದ ಗರ್ಭಗುಡಿಯ ಹೊರಗೆ ನಿಂತು ಶ್ರೀಕೃಷ್ಣನ ಬಿಂಬವನ್ನು ಕಣ್ತುಂಬಿಕೊಂಡಿತು. ನಂತರ ಪೂಜೆಯ ಪ್ರಸಾದ ಸ್ವೀಕರಿಸಿ ತೆರಳಿತು .

ಈ ದೃಶ್ಯ ಕಂಡು ಭಕ್ತರ ಸಮೂಹದ ಮನ ಪುಳಕಿತಗೊಂಡರೆ ಇನ್ನೊಂದೆಡೆ ಈ ದೇವಾಲಯದ ಗರ್ಭಗುಡಿಯ ಹೊರಗೆ ನಿಂತ ಗೋವಿನ ಫೊಟೊ ಸಾಮಾಜಿಕ ಜಾಲತಾಣಗಳಲ್ಲಿ ಈಗ ವೈರಲ್ ಆಗಿದೆ.

English summary
During a pooja at a krishna temple on ocassion of krishna janmasthami in Mangaluru a cow comes to see krishna gopala and waits till the pooja is over and eats the prasada and moves out. A photo of this has been the talk of the town.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X