ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ ಪದಚ್ಯುತಿ

By: ಐಸ್ಯಾಕ್ ರಿಚರ್ಡ್, ಮಂಗಳೂರು
Subscribe to Oneindia Kannada

ಉಳ್ಳಾಲ, ಡಿಸೆಂಬರ್. 02 : ಉಳ್ಳಾಲ ನಗರಸಭೆ ಪೌರಾಯುಕ್ತೆ ವಾಣಿ ಆಳ್ವ ಅವರನ್ನು ವಜಾಗೊಳಿಸುವಂತೆ ಸಚಿವ ಯು.ಟಿ ಖಾದರ್ ಅವರ ವಿರುದ್ಧ ತೊಡೆ ತಟ್ಟಿದ್ದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ ಅವರನ್ನು ಕಾಂಗ್ರೆಸ್ ಅಧ್ಯಕ್ಷದಿಂದ ಕೆಪಿಸಿಸಿ ಪದಚ್ಯುತಿಗೊಳಿಸಿದೆ. ಅವರ ಸ್ಥಾನಕ್ಕೆ ಸಂತೋಷ್ ಕುಮಾರ್ ಶೆಟ್ಟಿ ಅವರನ್ನು ನೇಮಕ ಮಾಡಲಾಗಿದೆ.

ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ರನ್ನು ಪದಚ್ಯುತಿಗೊಳಿಸಿ ಅವರ ಸ್ಥಾನಕ್ಕೆ ಸಂತೋಷ್ ಕುಮಾರ್ ಶೆಟ್ಟಿ ಅವರನ್ನು ನೇಮಿಸಿ ಎಂದು ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ಅವರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಬಿ.ರಮಾನಾಥ ರೈ ಅವರಿಗೆ ಪತ್ರ ಬರೆದಿದ್ದಾರೆ.

KPCC removing Ullal block congress president Eshwar Ullal

ನವೆಂಬರ್ 29 ರಂದು ನಡೆಯಬೇಕಿದ್ದ ಉಳ್ಳಾಲ ನಗರದ ಸಾಮಾನ್ಯ ಸಭೆಯು ಪೌರಾಯುಕ್ತೆ ವಾಣಿ ಆಳ್ವರ ವಿರುದ್ಧ ಪಕ್ಷಾತೀತವಾಗಿ ಸಿಡಿದೆದ್ದ 17 ಸದಸ್ಯರ ಗೈರಿನಿಂದಾಗಿ ರದ್ದಾಗಿ ಮುಂದೂಡಲ್ಪಟ್ಟ ಸಭೆಯು ಶಕ್ರವಾರ ನಡೆಯಲಿದೆ.

ಇಂದಿನ ಸಭೆ ನಡೆಯಲು ಕೋರಂ ಅಧಿನಿಯಮದ ಪ್ರಕಾರ ಕನಿಷ್ಟ 7 ಮಂದಿ ಭಾಗವಹಿಸಬೇಕಾಗಿದೆ. ವಿರೋಧ ಪಕ್ಷದವರು ಸೇರಿದಂತೆ ಆಡಳಿತರೂಢ ಕಾಂಗ್ರೆಸ್ಸಿನ ಎಲ್ಲಾ ನಗರಸಭಾ ಸದಸ್ಯರು ಸಭೆಯಲ್ಲಿ ಭಾಗವಹಿಸುವ ಮುನ್ಸೂಚನೆ ದೊರೆತಿದೆ.

ಸಭೆಯಲ್ಲಿ ಭಾಗವಹಿಸುವುದಾಗಿ ವಿರೋಧ ಪಕ್ಷ ಬಿಜೆಪಿಯ ಸದಸ್ಯರಾದ ಇಸ್ಮಾಯಿಲ್ ಪೊಡಿಮೋನು ತಿಳಿಸಿದ್ದು. ಕಳಂಕಿತ ಪೌರಾಯುಕ್ತೆ ವಾಣಿ ಆಳ್ವರನ್ನು ವಜಾಗೊಳಿಸುವ ಬಗೆಗಿನ ಹೋರಾಟವನ್ನು ಪಕ್ಷಾತೀತವಾಗಿ ಸದಸ್ಯರು ಮುಂದುವರಿಸಲಿದ್ದೆವೆ ಎಂದು ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Ullal Municipality Paurayukta issue: KPCC decided to move a motion for removing Ullal block congress president Eshwar Ullal, Removing of KPCC president G.Parmeshwar.
Please Wait while comments are loading...