ಫೆ. 10 ರಂದು ' ಕೊಂಕಣಿ ಲೋಕೋತ್ಸವ 2017'

Posted By:
Subscribe to Oneindia Kannada

ಮಂಗಳೂರು, ಫೆಬ್ರವರಿ 6 : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ವತಿಯಿಂದ ಮಂಗಳೂರಿನ ಪುರಭವನದಲ್ಲಿ ಫೆ 10ರಂದು ಕೊಂಕಣಿ ಲೋಕೋತ್ಸವ 2017' ನಡೆಯಲಿದೆ. ಈ ಸಮಾರಂಭದಲ್ಲಿ 100 ಮಂದಿ ಸದಸ್ಯರ ತಂಡ ಸಂಗೀತ ಕಾರ್ಯಕ್ರಮವನ್ನು ನೀಡಲಿದೆ ಎಂದು ಅಕಾಡೆಮಿ ಅಧ್ಯಕ್ಷ ರಾಯ್ ಕ್ಯಾಸ್ಟೆಲಿನೋ ಹೇಳಿದ್ದಾರೆ.

ನಗರದ ಬಿಷಪ್ ಹೌಸ್ ಪರಿಸರದಲ್ಲಿ ಈ ಸಂಗೀತ ಕಲಾವಿದರ ತರಬೇತಿ ಕಾರ್ಯಕ್ರಮ ನಡೆಯುತ್ತಿದೆ. ವಸಂತಿ ಆರ್ . ನಾಯಕ್ ಮತ್ತು ಎರಿಕ್ ಓಝೆರಿಯೋ ತರಬೇತಿ ನೀಡುತ್ತಿದ್ದಾರೆ. ಈ ಕಲಾವಿದರು 5 ಹಾಡುಗಳನ್ನು ಹಾಡಲಿದ್ದಾರೆ. ಸುಮಾರು 100 ಕಲಾವಿದರು ಲೋಕೋತ್ಸವದ ಧ್ಯೇಯ ಗೀತೆಯನ್ನು ಹಾಡುತ್ತಿರುವುದು ವಿಶೇಷವಾಗಿದೆ.

ಕೊಂಕಣಿ ಭಾಷೆಯನ್ನು ಮಾತನಾಡುವ 41 ಸಮುದಾಯದ ಒಟ್ಟು ಸೇರುವಿಕೆಯಲ್ಲಿ ನಡೆಯುವ ವಿಭಿನ್ನ ಕಾರ್ಯಕ್ರಮವೇ ಈ ಕೊಂಕಣಿ ಲೋಕೋತ್ಸವ. ಮಹಾರಾಷ್ಟ್ರದ ರತ್ನಗಿರಿಯಿಂದ ಕೇರಳದ ಕೊಚ್ಚಿನವರೆಗಿನ ಭಾಗದ ಸಮುದಾಯವನ್ನು ಸೇರಿಸಿಕೊಂಡು ಈ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿದ್ದು, ವಿವಿಧ ಸ್ಪರ್ಧೆಗಳು, ಸಾಂಸ್ಕೃತಿಕ ಮನೋರಂಜನೆ, ಸಾಹಿತ್ಯ ಗೋಷ್ಠಿಗಳನ್ನು ಮೂರುದಿನಗಳ ಕಾಲ ಆಯೋಜಿಸಲಾಗಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Konkani lokostava programme organized by Karnataka konkani sahitya academyheld on February 10th.
Please Wait while comments are loading...