ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೆಪ್ಟೆಂಬರ್ 23 ರಂದು ಕೊಂಕಣ ರೈಲ್ವೆ ಸಂಚಾರದಲ್ಲಿ ವ್ಯತ್ಯಯ

|
Google Oneindia Kannada News

ಮಂಗಳೂರು, ಸೆಪ್ಟೆಂಬರ್. 21: ಕರಾವಳಿಯ ರೈಲು ಪ್ರಯಾಣಿಕರಿಗೆ ಸೆಪ್ಟೆಂಬರ್ 23 ರಂದು ಭಾನುವಾರ ಸಮಸ್ಯೆ ಎದುರಾಗಲಿದೆ. ಯಾಕೆಂದರೆ ಅಂದು ಕೊಂಕಣ ರೈಲ್ವೆ ಮಾರ್ಗದಲ್ಲಿ ಕಾರವಾರ ಹಾಗೂ ತೋಕೂರು ನಡುವೆ ಕೆಲ ಇಂಜಿನಿಯರಿಂಗ್ ಹಾಗೂ ವಿದ್ಯುದ್ದೀಕರಣದ ಕಾಮಗಾರಿಗಳು ನಡೆಯಲಿವೆ.

ಈ ಹಿನ್ನೆಲೆಯಲ್ಲಿ ಅಂದು ಈ ಮಾರ್ಗದಲ್ಲಿ ಸಂಚರಿಸುವ ಒಂದು ರೈಲಿನ ಸಂಚಾರವನ್ನು ರದ್ದುಗೊಳಿಸಲಾಗಿದ್ದು ಇನ್ನಿತರ ಪ್ರಮುಖ ರೈಲುಗಳ ಸಂಚಾರ ಸಮಯದಲ್ಲಿ ಕೆಲ ಬದಲಾವಣೆ ಮಾಡಲಾಗಿದೆ.

ಸೆ.20ರ ತನಕ ಬೆಂಗಳೂರು-ಮಂಗಳೂರು ರೈಲು ಸಂಚಾರವಿಲ್ಲಸೆ.20ರ ತನಕ ಬೆಂಗಳೂರು-ಮಂಗಳೂರು ರೈಲು ಸಂಚಾರವಿಲ್ಲ

ಕರಾವಳಿಯ ಪ್ರಯಾಣಿಕರು ಸಹಕರಿಸುವಂತೆ ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದ್ದು, ಮಂಗಳೂರು ಸೆಂಟ್ರಲ್-ಮಡಗಾಂವ್- ಮಂಗಳೂರು ಸೆಂಟ್ರಲ್ ನಡುವೆ ಸಂಚರಿಸುವ ರೈಲು ನಂ.22636-22635 ಇಂಟರ್ ಸಿಟಿ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಸೆ.23ರಂದು ರದ್ದುಪಡಿಸಲಾಗಿದೆ.

Konkan Railway route timing changed for September 23

ರೈಲು ನಂ. 12620 ಮಂಗಳೂರು ಸೆಂಟ್ರಲ್-ಕುರ್ಲಾ ಟರ್ಮಿನಸ್ ಮತ್ಸಗಂಧ ಎಕ್ಸ್‌ಪ್ರೆಸ್ ರೈಲು ಮಂಗಳೂರು ಸೆಂಟ್ರಲ್‌ನಿಂದ 2ಗಂಟೆ 45 ನಿಮಿಷ ತಡವಾಗಿ ಅಂದರೆ ಅಪರಾಹ್ನ 3:15ಕ್ಕೆ ಹೊರಡಲಿದೆ. ಅದಲ್ಲದೇ ರೈಲು ನಂ.56641 ಮಡಗಾಂವ್- ಮಂಗಳೂರು ಸೆಂಟ್ರಲ್ ಪ್ಯಾಸೆಂಜರ್ ರೈಲು ಅಂಕೋಲ ರೈಲ್ವೆ ನಿಲ್ದಾಣದಲ್ಲಿ 1 ಗಂಟೆ ನಿಲ್ಲಲಿದೆ.

ರೈಲು ನಂ. 12617 ಎರ್ನಾಕುಲಂ-ನಿಜಾಮುದ್ದೀನ್ 'ಮಂಗಳಾ ಲಕ್ಷದ್ವೀಪ' ಎಕ್ಸ್‌ಪ್ರೆಸ್ ತೊಕೂರಿನಲ್ಲಿ 20 ನಿಮಿಷ ನಿಲ್ಲಲಿದೆ. ರೈಲು ನಂ.22634 ನಿಜಾಮುದ್ದೀನ್- ತ್ರಿವೆಂಡ್ರಂ ಎಕ್ಸ್‌ಪ್ರೆಸ್ ಕುಂದಾಪುರ ರೈಲು ನಿಲ್ದಾಣದಲ್ಲಿ 45 ನಿಮಿಷ ನಿಲ್ಲಲಿದೆ.

21 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ನೈಋತ್ಯ ರೈಲ್ವೆ21 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ನೈಋತ್ಯ ರೈಲ್ವೆ

ರೈಲು ನಂ.02198 ಜಬಲ್ ಪುರ-ಕೊಯಮತ್ತೂರು ವಿಶೇಷ ರೈಲು ಅಂಕೋಲ ರೈಲು ನಿಲ್ದಾಣದಲ್ಲಿ 1 ಗಂಟೆ 10 ನಿಮಿಷ ನಿಲ್ಲಲಿದೆ ಎಂದು ಕೊಂಕಣ್ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

English summary
Time table for trains running via Konkan route changed due to urgent Engineering and electrical work on Sunday September 23.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X