ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕರಾವಳಿಯ ಜೀವನಾಡಿ ಕೊಂಕಣ ರೈಲ್ವೆ ಮುಂಗಾರು ಮಳೆಗೆ ಸನ್ನದ್ದ

By ಮಂಗಳೂರು ಪ್ರತಿನಿಧಿ
|
Google Oneindia Kannada News

ಮಂಗಳೂರು, ಜೂನ್ 08 : ಕರಾವಳಿಯಲ್ಲಿ ಮುಂಗಾರು ಮಳೆ ಆರಂಭವಾಗುತ್ತಿದ್ದಂತೆ ಕರಾವಳಿಯ ಜೀವನಾಡಿ ಕೊಂಕಣ ರೈಲ್ವೆ ಮುಂಗಾರು ಮಳೆಗೆ ಸನ್ನದ್ದವಾಗಿದೆ. ಮುಂಗಾರು ಮಳೆ ಈಗಾಗಲೇ ಕರಾವಳಿಯಲ್ಲಿ ಆರಂಭವಾಗಿದ್ದು, ಮೊದಲ ಮಳೆ ಭಾರಿ ಸದ್ದನ್ನೇ ಮಾಡಿದೆ.

ಕರಾವಳಿಗರ ಜೀವನಾಡಿಯಾಗಿರುವ ಕೊಂಕಣ ರೈಲ್ವೆ ಮಾರ್ಗದಲ್ಲಿ ಮಳೆಗಾಲ ಶುರುವಾಗುತ್ತಿದ್ದಂತೆ ಗುಡ್ಡ ಜರಿಯುವುದು , ಬಂಡೆ ಉರಳುವುದು, ಭಾರಿ ಪ್ರಮಾಣದಲ್ಲಿ ಕೆಸರು ಮಿಶ್ರಿತ ಮಣ್ಣು ರೈಲ್ವೆ ಹಳಿಗಳ ಮೇಲೆ ತುಂಬಿಕೊಳ್ಳುವುದು ಸಾಮಾನ್ಯ.

ಮೋದಿ ಸರ್ಕಾರಕ್ಕೆ 4 ವರ್ಷ: ರೈಲ್ವೆ ಸುರಕ್ಷತೆಗೆ ಆದ್ಯತೆ, ಅಪಘಾತ ಇಳಿಕೆ ಮೋದಿ ಸರ್ಕಾರಕ್ಕೆ 4 ವರ್ಷ: ರೈಲ್ವೆ ಸುರಕ್ಷತೆಗೆ ಆದ್ಯತೆ, ಅಪಘಾತ ಇಳಿಕೆ

ಈ ರೀತಿಯ ಸಮಸ್ಯೆಗಳಿಂದಾಗಿ ಮಳೆಗಾಲದ ಸಮಯದಲ್ಲಿ ಕೊಂಕಣ ರೈಲ್ವೆಯ ರೈಲುಗಳ ಸಮಯದಲ್ಲಿ ತುಂಬಾ ಏರುಪೇರಾಗಿ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿತ್ತು. ಆದರೆ ಕಳೆದ ಕೆಲವು ವರ್ಷಗಳಿಂದ ಕೊಂಕಣ ರೈಲ್ವೆ ಮಾರ್ಗದಲ್ಲಿ ಬಂಡೆ ಉರುಳುವುದಂತ ಸೇರಿದಂತೆ ಇತರ ಅನಾಹುತಗಳು ಕಡಿಮೆಯಾಗಿದೆ.

ಟೊಂಕ ಕಟ್ಟಿ ನಿಂತಿದೆ

ಟೊಂಕ ಕಟ್ಟಿ ನಿಂತಿದೆ

ಕೊಲಾಡ್ ರೈಲ್ವೆ ನಿಲ್ದಾಣದಿಂದ ಮಂಗಳೂರು ಸಮೀಪದ ತೋಕೂರು ರೈಲ್ವೆ ನಿಲ್ದಾಣದವರೆಗೆ ಎಲ್ಲ ಸುರಕ್ಷಾ ಕ್ರಮಗಳನ್ನು ಕೈಗೊಂಡಿರುವ ಕೊಂಕಣ ರೈಲ್ವೆ ನಿಗಮ ಮಳೆಗಾಲಕ್ಕೆ ಟೊಂಕ ಕಟ್ಟಿ ನಿಂತಿದೆ.

ಕಳೆದ 12 ವರ್ಷಗಳಲ್ಲಿ ಬಂಡೆ ಉರುಳುವುದು ಸೇರಿದಂತೆ ಇತರ ಅನಾಹುತ ಪ್ರಕರಣಗಳು ಕೊಂಕಣ ರೈಲ್ವೆ ಮಾರ್ಗದಲ್ಲಿ ಕಡಿಮೆಯಾಗಿದ್ದು. ಜಿಯೋ ಸೇಫ್ಟಿ ಸಿಬ್ಬಂದಿ ಶ್ರಮದಿಂದ ಇದೆಲ್ಲ ಸಾಧ್ಯವಾಗಿದೆ. ಕಳೆದ ಐದು ವರ್ಷಗಳಲ್ಲಿ ಗುಡ್ಡ ಜರಿತ, ಬಂಡೆ ಉರುಳಿದ ಯಾವುದೇ ದೊಡ್ಡ ಪ್ರಕರಣಗಳು ನಡೆದಿಲ್ಲ.

ದಕ್ಷಿಣ ಕನ್ನಡ: ಮಳೆ ಕಾರಣ ಇಂದು, ನಾಳೆ ಶಾಲೆಗೆ ರಜೆದಕ್ಷಿಣ ಕನ್ನಡ: ಮಳೆ ಕಾರಣ ಇಂದು, ನಾಳೆ ಶಾಲೆಗೆ ರಜೆ

ಕಾವಲುಗಾರರ ನೇಮಕ

ಕಾವಲುಗಾರರ ನೇಮಕ

ಕೊಂಕಣ ರೈಲ್ವೆ ಸುರಕ್ಷತೆಯ ದೃಷ್ಠಿಯಿಂದ ಮಳೆಗಾಲದಲ್ಲಿ ಗಸ್ತು ತಿರುಗಲು 770 ಸಿಬ್ಬಂದಿಗಳನ್ನು ನೇಮಿಸಿದೆ. ಇವರು ಪಾಳಿ ಆಧಾರದಲ್ಲಿ ದಿನದ 24 ಗಂಟೆ ರೈಲ್ವೆ ಟ್ರ್ಯಾಕ್‌ ಗಸ್ತು ನಡೆಸಲಿದ್ದಾರೆ.
ಕೊಂಕಣ ರೈಲ್ವೆಗೆ ಸೇರಿದ ದುರ್ಬಲ ಭೂಭಾಗದ ಮೇಲೆಯೂ ದಿನದ 24 ಗಂಟೆಯೂ ನಿಗಾ ಇಡಲಾಗಿದೆ.

ತೀರಾ ಇಕ್ಕಟ್ಟಿನ ಪ್ರದೇಶದಲ್ಲಿ ನಿರಂತರ 24 ಗಂಟೆಯೂ ಕಾವಲುಗಾರರ ನೇಮಕ ಮಾಡಲಾಗಿದೆ.

ರೈಲಿಗೆ ವೇಗದ ಮಿತಿ

ರೈಲಿಗೆ ವೇಗದ ಮಿತಿ

ಮಳೆಗಾಲದ ಸಂದರ್ಭದಲ್ಲಿ ದುರ್ಬಲ ಭೂಭಾಗದಲ್ಲಿ ರೈಲಿನ ವೇಗವನ್ನು ಕಡಿಮೆ ಮಾಡಲು ಸೂಚಿಸಲಾಗಿದ್ದು, ಕೆಲವು ಸಂದರ್ಭಗಳಲ್ಲಿ ವೇಗದ ಮೀತಿಯನ್ನು 40 ಕಿಲೋಮೀಟರ್ ಗಿಂತಲೂ ಕಡಿಮೆ ಮಾಡಲು ರೈಲ್ವೆ ಇಲಾಖೆ ಸೂಚಿಸಿದೆ.

ಮಳೆ ಸಂದರ್ಭದಲ್ಲಿ ಮಂಜು ಕವಿದ ವಾತಾವರಣ ಇರುವ ಕಾರಣ ದೂರದ ಚಿತ್ರಣ ಸ್ಪಷ್ಟವಾಗಿ ಗೋಚರಿಸುವುದು ಕಷ್ಟ ಸಾಧ್ಯ ಈ ಹಿನ್ನಲೆಯಲ್ಲಿ ರೈಲಿಗೆ ವೇಗದ ಮಿತಿಯನ್ನು ಹೇರಲಾಗುತ್ತದೆ.

ಕಂಟ್ರೋಲ್‌ ರೂಂ ವ್ಯವಸ್ಥೆ

ಕಂಟ್ರೋಲ್‌ ರೂಂ ವ್ಯವಸ್ಥೆ

ಲೋಕೊ ಪೈಲಟ್‌, ಸ್ಟೇಶನ್‌ ಮಾಸ್ಟರ್‌ ಹಾಗೂ ರೈಲ್ವೆ ಟ್ರ್ಯಾಕ್‌ಗಳಲ್ಲಿ ಕಾರ್ಯನಿರ್ವಹಿಸುವ ಎಲ್ಲ ರೈಲ್ವೆ ಸಿಬ್ಬಂದಿಗೆ ಮೊಬೈಲ್‌ ಫೋನ್‌ ಜತೆಗೆ ಹೆಚ್ಚುವರಿಯಾಗಿ ವಾಕಿಟಾಕಿ ಒದಗಿಸಲಾಗಿದೆ.

ಗಸ್ತು ತಿರುಗುವ ಸಿಬ್ಬಂದಿ ಜತೆ ಲೋಕೊ ಪೈಲಟ್‌ ಹಾಗೂ ಇತರ ಸಿಬ್ಬಂದಿ ಸಂಪರ್ಕ ಸಾಧಿಸಲು ಪ್ರತಿ ಕಿ.ಮೀ. ವ್ಯಾಪ್ತಿಯಲ್ಲಿ ಗಸ್ತು ಸಿಬ್ಬಂದಿಗೆ ಎಮರ್ಜೆನ್ಸಿ ಕಮ್ಯುನಿಕೇಶನ್‌ ಸಾಕೇಟ್ (ಇಎಂಸಿ) ಕೊಡಲಾಗಿದೆ.

ಕೊಂಕಣ ರೈಲ್ವೆಗೆ ಸೇರಿದ ಬೇಲಾಪುರ್ , ರತ್ನಗಿರಿ ಮತ್ತು ಮಡ್ಗಾಂವ್ ಗಳಲ್ಲಿ ದಿನದ 24 ತಾಸು ಕಾರ್ಯನಿರ್ವಹಿಸುವ ಕಂಟ್ರೋಲ್‌ ರೂಂ ತೆರೆಯಲಾಗಿದೆ.

English summary
Rain is already started on the coast. Konkan Railway is preparing for monsoon rain. Safety measures have been taken this year.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X