ಮಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಗಳೂರಿನ ಕೊಲ್ಯ ರಮಾನಂದ ಸ್ವಾಮೀಜಿಗೆ ಅಂತಿಮ ನಮನ

By Mahesh
|
Google Oneindia Kannada News

ಮಂಗಳೂರು, ಮೇ 24: ಇಲ್ಲಿನ ಕೊಲ್ಯ ರಾಜಯೋಗಿ ಸದ್ಗುರು ರಮಾನಂದ ಸ್ವಾಮೀಜಿ (66) ಅವರು ಸೋಮವಾರ ವಿಧಿವಶರಾಗಿದ್ದಾರೆ. ಉಳ್ಳಾಲದಲ್ಲಿ ಅಪಾರ ಭಕ್ತಸಮೂಹದ ಸಮ್ಮುಖದಲ್ಲಿ ಅಂತಿಮ ವಿಧಿವಿಧಾನಗಳನ್ನು ನೆರವೇರಿಸಲಾಯಿತು.

ಕೊಲ್ಯ ಮಠದ ಸ್ವಾಮೀಜಿಗಳು ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಮಧ್ಯಾಹ್ನ ಅವರು ಕೊನೆಯುಸಿರೆಳೆದಿದ್ದಾರೆ.

Kolya Mutt seer Ramananda Swamiji passes away

ಕಾಸರಗೋಡಿನ ಬಡಿಯಡ್ಕದ ಮಾವಿನಕಟ್ಟೆ ಗ್ರಾಮದಲ್ಲಿ ಜನಿಸಿದ ರಮಾನಂದ ಸ್ವಾಮಿ ಅವರು ಅಗಲ್ಪಾಡಿ ದುರ್ಗಾಪರಮೇಶ್ವರಿ ಶಾಲೆ ಹಾಗೂ ಪುತ್ತೂರಿನ ವಿವೇಕಾನಂದ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಕೆಲಕಾಲ ಖಾಸಗಿ ಬಸ್ಸೊಂದರಲ್ಲಿ ಕಂಡೆಕ್ಟರ್ ಆಗಿ ಕಾರ್ಯನಿರ್ವಹಿಸಿದ್ದರು.

1979ರಲ್ಲಿ ಶಿವಬಾಲಯೋಗಿ ಸ್ವಾಮಿಗಳಲ್ಲಿ ಶಿಷ್ಯತ್ವ ಪಡೆದುಕೊಂಡು ರಮಾನಂದ ಸ್ವಾಮಿಯಾಗಿ ಕೊಲ್ಯದ ಮುಕಾಂಬಿಕಾ ದೇಗುಲದಲ್ಲಿ ನೆಲೆಸಿದರು. ದೀನ ದಲಿತರು, ಶೋಷಿತ ವರ್ಗಕ್ಕೆ ಬೇಕಾದ ಅಗತ್ಯ ನೆರವು ನೀಡುತ್ತಾ, ಸಾಮಾಜಿಕ ಕಳಕಳಿ ಕಾರ್ಯಕ್ರಮಗಳಿಗೆ ಶ್ರೀಗಳು ಉತ್ತೇಜನ ನೀಡುತ್ತಿದ್ದರು ಎಂದು ಕೊಲ್ಯ ಸ್ವಾಮೀಜಿಗಳ ಬಗ್ಗೆ ಉಡುಪಿಯ ಪೇಜಾವರ ಮಠದ ವಿಶ್ವೇಶ್ವರ ತೀರ್ಥ ಸ್ವಾಮೀಜಿಗಳು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

English summary
Kolya Mutt seer Ramananda Swamiji passed away on Monday (May 23) in private hospital ,Mangaluru. Pejawar seer said that Kolya Ramananda Swami had a lot of concern for the poor and always sent help to disaster-hit areas.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X